ಹೈದರಾಬಾದ್: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರಿಗೆ ತೆಲಂಗಾಣ ಸರ್ಕಾರ 1 ಕೋಟಿ ರೂ. ಹಣ ಹಾಗೂ 600 ಚದರ ಅಡಿಯ ಸೈಟ್ ನೀಡಿ ಸನ್ಮಾನಿಸಿದೆ.
ರಾಜ್ಯ ಕ್ರೀಡಾ ಸಚಿವರಾದ ಟಿ. ಪದ್ಮರಾವ್, ಮಿಥಾಲಿ ರಾಜ್ ಅವರನ್ನು ಸನ್ಮಾನಿಸಿ ಹಣ ಹಾಗೂ ಸೈಟ್ ದಾಖಲೆಗಳನ್ನ ಹಸ್ತಾಂತರಿಸಿದ್ದಾರೆ. ಜೊತೆಗೆ ಮಿಥಾಲಿ ರಾಜ್ ಅವರ ಕೋಚ್ ಆರ್‍ಎಸ್‍ಆರ್ ಮೂರ್ತಿ ಅವರಿಗೆ 25 ಲಕ್ಷ ರೂ. ನೀಡಲಾಗಿದೆ.
ಕ್ರೀಡೆಯನ್ನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ನಿರ್ದೇಶನದಂತೆ ಹಣ ಹಾಗೂ ಸೈಟ್ ನೀಡಲಾಗಿದೆ ಎಂದು ಸಚಿವ ಪದ್ಮರಾವ್ ಹೇಳಿದ್ದಾರೆ.
ಮಿಥಾಲಿ ರಾಜ್ ಭಾರತ ಕ್ರಿಕೆಟ್ ತಂಡದ ನಾಯಕಿಯಾಗಿ ಮಹಿಳಾ ವಿಶ್ವಕಪ್‍ನಲ್ಲಿ ತಂಡವನ್ನ ಮುನ್ನಡೆಸಿದ್ದರು. ಫೈನಲ್ ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸೆಣಸಿ 9ರನ್‍ಗಳ ಅಂತರದಿಂದ ಸೋಲೊಪ್ಪಿಕೊಂಡಿತ್ತು.