ರಾಮ್ ಚರಣ್ (Ram Charan) ನಟನೆಯ ‘ಗೇಮ್ ಜೇಂಜರ್’ (Game Changer) ಜ.10ರಂದು ರಿಲೀಸ್ ಆಗುತ್ತಿದೆ. ಈ ಬೆನ್ನಲ್ಲೇ ಚಿತ್ರತಂಡಕ್ಕೆ ಸರ್ಕಾರ ಶಾಕ್ ಕೊಟ್ಟಿದೆ. ‘ಗೇಮ್ ಜೇಂಜರ್’ ಚಿತ್ರದ ಮಧ್ಯರಾತ್ರಿ ಶೋಗೆ ಅನುಮತಿ ನೀಡಲು ನಿರಾಕರಿಸಿದೆ. ‘ಪುಷ್ಪ 2’ ಕಾಲ್ತುಳಿತ ಪ್ರಕರಣದ ಬಳಿಕ ತೆಲಂಗಾಣ ಸರ್ಕಾರ ಎಚ್ಚೆತ್ತುಕೊಂಡಿದೆ.
Advertisement
ನಾಳೆ (ಜ.10) ‘ಗೇಮ್ ಜೇಂಜರ್’ ಸಿನಿಮಾದ ಪ್ರದರ್ಶನವನ್ನು ಮಧ್ಯರಾತ್ರಿ ಆಯೋಜಿಸಲಾಗಿತ್ತು. ‘ಪುಷ್ಪ 2’ ವಿವಾದ ತಣ್ಣಗಾಗದ ಹಿನ್ನೆಲೆ ತೆಲಂಗಾಣ ಸರ್ಕಾರ ಶೋಗೆ ಚಿತ್ರತಂಡಕ್ಕೆ ಅನುಮತಿ ನೀಡಲು ನಿರಾಕರಿಸಿದೆ. ಆದರೆ, ಟಿಕೆಟ್ ದರ ಏರಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ.
Advertisement
Advertisement
ಮಲ್ಟಿಪ್ಲೆಕ್ಸ್‌ನಲ್ಲಿ 150 ರೂಪಾಯಿ ಹಾಗೂ ಥಿಯೇಟರ್‌ಗಳಲ್ಲಿ 100 ರೂಪಾಯಿ ಏರಿಕೆಗೆ ಅವಕಾಶ ನೀಡಿದೆ. ಇದು ಮೊದಲ ದಿನ ಮಾತ್ರ. ಜನವರಿ 11ರಿಂದ ಮಲ್ಟಿಪ್ಲೆಕ್ಸ್‌ನಲ್ಲಿ 100 ರೂಪಾಯಿ ಹಾಗೂ ಥಿಯೇಟರ್‌ಗಳಲ್ಲಿ 50 ರೂಪಾಯಿ ಏರಿಕೆಗೆ ಅವಕಾಶ ನೀಡಲಾಗಿದೆ.
Advertisement
ಇನ್ನೂ ರಾಮ್ ಚರಣ್ ನಾಯಕಿಯಾಗಿ ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ (Kiara Advani) ನಟಿಸಿದ್ದಾರೆ. ಶಂಕರ್ (Shankar) ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.