ಹೈದರಾಬಾದ್: ಮದುವೆಯಾಗುವ ನೆಪದಲ್ಲಿ ಪಕ್ಷದ ಕಾರ್ಯಕರ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ತೆಲಂಗಾಣದ ನಾರಾಯಣಪೇಟೆ ಜಿಲ್ಲಾ ಕಾಂಗ್ರೆಸ್ ಮುಖಂಡ ಕುಂಬಂ ಶಿವಕುಮಾರ್ ರೆಡ್ಡಿ ವಿರುದ್ಧ ಹೈದರಾಬಾದ್‍ನ ಪುಂಜಗುಟ್ಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ಶಿವಕುಮಾರ್ ರೆಡ್ಡಿ ನನ್ನ ಮೇಲೆ ನಗರದ ಹೊಟೇಲ್‍ನಲ್ಲಿ ಅತ್ಯಾಚಾರವೆಸಗಿದ್ದಾರೆ ಮತ್ತು ನನ್ನ ಖಾಸಗಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಪಂದ್ಯ ಸೋತ್ರೂ ರೋಮ್ಯಾಂಟಿಕ್ ಮೂಡ್- ಗೆಳತಿಗೆ ಪ್ರಪೋಸ್ ಮಾಡಿದ ಕ್ರಿಕೆಟಿಗ
- Advertisement3
ಈ ಕುರಿತಂತೆ ದೂರು ನೀಡಿರುವ ಮಹಿಳೆ ತಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯೆಯಾಗಿದ್ದು, 2020ರಲ್ಲಿ ಮುನ್ಸಿಪಲ್ ಚುನಾವಣೆಗಳನ್ನು ಪ್ರಚಾರ ಮಾಡಲು ಸಂಘಟಿಸಲು ನಿಯೋಜನೆಗೊಂಡಿದ್ದೆ. ಈ ವೇಳೆ ನನಗೆ ನಾರಾಯಣಪೇಟೆ ಕ್ಷೇತ್ರ ಮಂಜೂರಾಗಿತ್ತು. ಹೀಗಾಗಿ ನಾರಾಯಣಪೇಟೆಗೆ ತೆರಳಿದ್ದೆ. ಆಗ ನಾರಾಯಣಪೇಟೆಗೆ ಆಗಮಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕುಂಬಂ ಶಿವಕುಮಾರ್ ರೆಡ್ಡಿ ಅವರನ್ನು ಭೇಟಿಯಾದೆ. ಅಂದಿನಿಂದ ಅವರು ನನಗೆ ಹತ್ತಿರ ಆಗಲು ಯತ್ನಿಸಿದರು. ಮೊಬೈಲ್‍ನಲ್ಲಿ ಸಂದೇಶ ಕಳುಹಿಸಲು ಆರಂಭಿಸಿದರು. ಒಂದು ದಿನ ನನ್ನನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಸಿದ್ದರು ಎಂದು ಹೇಳಿದ್ದಾರೆ.
- Advertisement
ಈ ಬಗ್ಗೆ ಶಿವಕುಮಾರ್ ರೆಡ್ಡಿ ಅವರನ್ನು ಪ್ರಶ್ನಿಸಿದಾಗ, ನನ್ನ ಪತ್ನಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಮೂರು ವರ್ಷಕ್ಕಿಂತಲೂ ಹೆಚ್ಚು ದಿನ ಬದುಕುಳಿಯುವುದಿಲ್ಲ. ಹಾಗಾಗಿ ಅವರನ್ನು ನೋಡಿಕೊಳ್ಳಲು ಮಹಿಳೆಯ ಅಗತ್ಯವಿದೆ ಎನ್ನುತ್ತಿದ್ದರು ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಸೌದಿ ಮಹಿಳೆಗೆ 45 ವರ್ಷ ಜೈಲು ಶಿಕ್ಷೆ
ಮಹಿಳೆ ದುಬ್ಬಾಕ ಜಿಲ್ಲೆಯಲ್ಲಿ ತಂಗಿದ್ದರು. ಒಮ್ಮೆ ಮದ್ಯದ ಅಮಲಿನಲ್ಲಿ ಮಹಿಳೆಯ ರೂಮ್‍ಗೆ ನುಗ್ಗಿದ ಶಿವಕುಮಾರ್ ರೆಡ್ಡಿ, ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದ್ದರು. ಇದಕ್ಕೆ ನಿರಾಕರಿಸಿದಾಗ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ನನ್ನನ್ನು ನಂಬಿಸಲು ಹಿಂದೂ ಸಂಪ್ರದಾಯದಂತೆ ಹಳದಿ ದಾರವನ್ನು ಕಟ್ಟಿ ನನ್ನನ್ನು ಮದುವೆಯಾಗಿದ್ದರು. ನಂತರ ಮಾತನಾಡಬೇಕೆಂದು ಹೋಟೆಲ್‍ಗೆ ಕರೆಸಿಕೊಂಡು ನನಗೆ ಕೆಲವು ಮಾತ್ರೆಗಳನ್ನು ತಿನ್ನಿಸಿ ಅತ್ಯಾಚಾರ ಎಸಗಿದ್ದಾರೆ. ನನಗೆ ಪ್ರಜ್ಞೆ ಬಂದ ಬಳಿಕ ನನ್ನ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು, ನಾನು ಹೇಳಿದಂತೆ ಕೇಳಲಿಲ್ಲ ಎಂದರೆ, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡುತ್ತೇನೆ ಅಂತ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದೀಗ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 420 (ವಂಚನೆ), 476 ಐಪಿಸಿ (ಅತ್ಯಾಚಾರ) ಮತ್ತು 506 ಐಪಿಸಿ (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ.