CricketInternationalLatestMain PostSports

ಪಂದ್ಯ ಸೋತ್ರೂ ರೋಮ್ಯಾಂಟಿಕ್ ಮೂಡ್- ಗೆಳತಿಗೆ ಪ್ರಪೋಸ್ ಮಾಡಿದ ಕ್ರಿಕೆಟಿಗ

ದುಬೈ: ಭಾರತದ ವಿರುದ್ಧ ಹಾಂಗ್ ಕಾಂಗ್ ಸೋಲು ಕಂಡರೂ ರೋಮ್ಯಾಂಟಿಕ್‌ ಮೂಡಿನಲ್ಲಿದ್ದ ಹಾಂಗ್‍ಕಾಂಗ್ ಆಟಗಾರರೊಬ್ಬರು ತನ್ನ ಗೆಳತಿಗೆ ಪ್ರೇಮನಿವೇದನೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬುಧವಾರ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಷ್ಯಾಕಪ್ 2022 ಪಂದ್ಯ ನಡೆದಿತ್ತು. ಇದರಲ್ಲಿ ಭಾರತವು ಹಾಂಗ್ ಕಾಂಗ್ ಮುಂದೆ 40ರನ್ ಗಳ ಗೆಲುವು ಕಂಡಿತ್ತು. ಈ ಪಂದ್ಯದ ಬಳಿಕ ಕ್ರೀಡಾಂಗಣ ಒಂದು ಬಾರಿ ರೋಮ್ಯಾಂಟಿಕ್ ಮೂಡ್‍ಗೆ ಜಾರಿತ್ತು.

ಹಾಂಗ್ ಹಾಂಗ್ ತಂಡದ ಬ್ಯಾಟ್ಸ್ ಮನ್ ಕಿಂಚಿತ್ ಶಾ ತಮ್ಮ ಗೆಳತಿಗೆ ರಿಂಗ್ ತೊಡಿಸುವ ಮೂಲಕ ಪ್ರೇಮನಿವೇದನೆ ಮಾಡಿದ್ದಾರೆ. ಇದರ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಸಾಕಷ್ಟು ಪರ-ವಿರೋಧ ಕಾಮೆಂಟ್‍ಗಳು ಬರುತ್ತಿವೆ. ಇದನ್ನೂ ಓದಿ: ಕೊಹ್ಲಿ, ಸೂರ್ಯ ಬ್ಯಾಟಿಂಗ್ ಬಿರುಗಾಳಿಗೆ ಕ್ರಿಕೆಟ್ ಶಿಶುಗಳು ಕಂಗಾಲು – ಸೂಪರ್ ಫೋರ್‌ಗೆ ಎಂಟ್ರಿ

ವೀಡಿಯೋದಲ್ಲೇನಿದೆ..?: ಪಂದ್ಯ ಮುಗಿದ ಬಳಿಕ ಸೋಲುಕಂಡ ಹಾಂಗ್ ಕಾಂಗ್ ಆಟಗಾರ ಕಿಂಚಿತ್ ನೇರವಾಗಿ ಡ್ರೆಸ್ಸಿಂಗ್ ರೂಂಗೆ ತೆರಳುತ್ತಾರೆ.  ಇತ್ತ ಬೇಸರದಿಂದ ನಿಂತಿದ್ದ ಗೆಳತಿಯನ್ನು ಕಿಂಚಿತ್ ಅಪ್ಪಿಕೊಳ್ಳಲು ಮುಂದಾಗುತ್ತಾರೆ. ಅಲ್ಲದೆ ಗೆಳತಿಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಆಗ ಗೆಳತಿ ಅಚ್ಚರಿಯ ಜೊತೆಗೆ ಖುಷಿಯಾಗುತ್ತಾಳೆ. ಅಲ್ಲದೆ ಈ ಖುಷಿಯಲ್ಲೇ ಆನಂದಭಾಷ್ಪ ಸುರಿಸುತ್ತಾಳೆ. ನಂತರ ಕಿಂಚಿತ್ ತಾನು ತಂದ ಉಂಗುರವನ್ನು ಕೈಯಲ್ಲಿಡಿದುಕೊಂಡು, ನೀನು ನನ್ನ ಮದುವೆಯಾಗುತ್ತಿಯಾ..? ಎಂದು ಕೇಳಿದ್ದಾರೆ.

ಈ ವೇಳೆ ಆಕೆ ನಾಚಿಕೆಯಿಂದಲೇ ಒಪ್ಪಿಕೊಳ್ಳುತ್ತಾಳೆ. ಕೂಡಲೇ ಸಾವಿರಾರು ಜನರ ನಡುವೆಯೇ ಗೆಳತಿಗೆ ಉಂಗುರ ತೊಡಿಸುವ ಮೂಲಕ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ. ಅಲ್ಲದೆ ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಮುದ್ದಾಡಿದ್ದಾರೆ. ಇತ್ತ ಇವೆಲ್ಲವನ್ನೂ ನೋಡುತ್ತಿದ್ದ ಜನ ಚಪ್ಪಾಳೆ ತಟ್ಟುವ ಮೂಲಕ ಇಬ್ಬರಿಗೂ ಶುಭಹಾರೈಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಮಾನ್ಯತೆ ಇಲ್ಲದ ಮದರಸಾಗಳ ಆದಾಯ ಪರಿಶೀಲಿಸಲು ಮುಂದಾದ ಯುಪಿ ಸರ್ಕಾರ

Live Tv

Leave a Reply

Your email address will not be published.

Back to top button