ಬೆಂಗಳೂರು: ವಿವಿಧ ರಾಜಕೀಯ ಪಕ್ಷಗಳನ್ನು ಭೇಟಿ ಮಾಡುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಮತ್ತು ಟಿಆರ್‌ಎಸ್ ಅಧ್ಯಕ್ಷ ಚಂದ್ರಶೇಖರ್ ರಾವ್ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿದ್ದಾರೆ.
Advertisement
ಗುರುವಾರ ಕರ್ನಾಟಕಕ್ಕೆ ಒಂದು ದಿನದ ಮಟ್ಟಿಗೆ ಪ್ರವಾಸ ಕೈಗೊಂಡಿರುವ ಚಂದ್ರಶೇಖರ್ ರಾವ್ ಅವರು, ಹೆಚ್.ಡಿ. ದೇವೇಗೌಡ, ಅವರ ಪುತ್ರ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತಂತೆ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಗುಲ್ಬರ್ಗಾ ವಿವಿ ಬಿಕಾಂ 5ನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ಲೀಕ್ – ಪರೀಕ್ಷೆ ಮುಂದೂಡಿಕೆ
Advertisement
Hon’ble CM of Telangana Shri K. Chandrashekhar Rao visited me at my residence, today. We exchanged views on various topics of national importance. It was a candid and cordial meeting. pic.twitter.com/zoaWd10nIt
— H D Devegowda (@H_D_Devegowda) May 26, 2022
Advertisement
ರಾಜ್ಯಗಳಲ್ಲಿ ಸಂಖ್ಯಾಬಲ ಇಲ್ಲದಿದ್ದರೂ ಇತರೆ ಪಕ್ಷಗಳ ಸದಸ್ಯರನ್ನು ಬಗ್ಗುಬಡಿಯುವ ಮೂಲಕ ಬಿಜೆಪಿ ಸರ್ಕಾರ ರಚಿಸಲು ಅನೈತಿಕ ಚಟುವಟಿಕೆಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ ಮೂಲಗಳು ತಿಳಿಸಿವೆ ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ – ಡಿಕೆಶಿ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ
Advertisement
ಬೆಂಗಳೂರು ಪ್ರವಾಸದ ಹಿನ್ನೆಲೆ ದೇವೇಗೌಡರ ನಿವಾಸದ ಬಳಿ ಕೆಸಿಆರ್ ಅವರ ಅಭಿಮಾನಿಗಳು ಬೃಹತ್ ಕಟೌಟ್‍ಗಳನ್ನು ನಿರ್ಮಿಸಿದ್ದರು. ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ನಂತರ ಹೈದರಾಬಾದ್‍ಗೆ ಹಿಂದಿರುಗಿದ ಕೆಸಿಆರ್, ಗುರುವಾರ ಸಂಜೆ ಹೈದರಾಬಾದ್‍ನ ಇಂಟರ್‍ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶ್ರೀನಿವಾಸ್ ಗೌಡ್ ಅವರ ಪುತ್ರಿಯ ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ.