ಟಾಲಿವುಡ್ (Tollywood) ಅಂಗಳದ ಯಂಗ್ ಹೀರೋ ವರುಣ್ ತೇಜ್ (Varun Tej) ಅವರು ಇತ್ತೀಚಿಗೆ ಸಿನಿಮಾಗಿಂತ ತಮ್ಮ ಮದುವೆ ವಿಷ್ಯವಾಗಿಯೇ ಸಖತ್ ಸುದ್ದಿಯಾಗಿದ್ದಾರೆ. ಸದ್ಯದಲ್ಲಿಯೇ ವರುಣ್ ತನ್ನ ಗೆಳತಿ ಜೊತೆ ಹಸೆಮಣೆ ಏರಲಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರ ಮನೆ ಮಗಳು ನಿಹಾರಿಕಾ ಡಿವೋರ್ಸ್ ಸುದ್ದಿ ಬೆನ್ನಲ್ಲೇ ವರುಣ್ ತೇಜ್ ಮದುವೆ ಸುದ್ದಿ ಸೌಂಡ್ ಮಾಡುತ್ತಿದೆ. ಶ್ರೀಜಾ- ನಿಹಾರಿಕಾ ಇಬ್ಬರ ಡಿವೋರ್ಸ್ ಆಗಿರುವ ನೋವು ಮೆಗಾ ಫ್ಯಾಮಿಲಿಗೆ ಕಾಡುತ್ತಿದೆ. ನಿಹಾರಿಕಾ (Niharika) ಸೋದರ ವರುಣ್ ತೇಜ್ ಮದುವೆ ಮಾಡಲು ನಿರ್ಧಾರ ಕೈಗೊಂಡಿದ್ದಾರೆ.
ಇತ್ತೀಚಿಗೆ ಚಿರಂಜೀವಿ ಸಹೋದರ ನಾಗ ಬಾಬು (Nagababu) ಅವರು ಪುತ್ರ ವರುಣ್ ತೇಜ್ ಮದುವೆ ಬಗ್ಗೆ ಮಾತನಾಡಿದ್ದರು. ಸದ್ಯದಲ್ಲೇ ಮದುವೆ ಬಗ್ಗೆ ಅಧಿಕೃತವಾಗಿ ಹೇಳೋದಾಗಿ ತಿಳಿಸಿದ್ದರು. ಇದೀಗ ಮತ್ತೆ ಈ ಸುದ್ದಿಗೆ ಪುಷ್ಟಿ ಸಿಕ್ಕಿದೆ. ನಟಿ ಲಾವಣ್ಯ ತ್ರಿಪಾಠಿ (Lavanya Tripathi) ಜೊತೆ ಮದುವೆಗೆ ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಲಂಡನ್‌ನಲ್ಲಿ ‘ಸಲಾರ್’ ನಟಿ ಶ್ರುತಿ ಹಾಸನ್ ನ್ಯೂ ಫೋಟೋಶೂಟ್
ಹಲವು ವರ್ಷಗಳಿಂದ ವರುಣ್- ಲಾವಣ್ಯ ಪ್ರೀತಿಸುತ್ತಿದ್ದು, ಇಬ್ಬರ ಪ್ರೀತಿಗೆ ಮನೆ ಕಡೆಯಿಂದ ಸಮ್ಮತಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಬ್ಯಾಚುಲರ್ ಲೈಫ್‌ಗೆ ಗುಡ್ ಬೈ ಹೇಳಿ, ಇದೇ ಜೂನ್‌ಗೆ ಲಾವಣ್ಯ ಜೊತೆ ವರುಣ್ ನಿಶ್ಚಿತಾರ್ಥ ನಡೆಯಲಿದ್ದು, ವರ್ಷದ ಅಂತ್ಯದಲ್ಲಿ ಮದುವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮೆಗಾ ಫ್ಯಾಮಿಲಿಯವರು ಅಧಿಕೃತ ಅಪ್‌ಡೇಟ್ ನೀಡುವವರೆಗೂ ಕಾದುನೋಡಬೇಕಿದೆ.