ರಾಮ್ ಪೋತಿನೇನಿ ಜೊತೆ ‘ಬೇಬಿ’ ವೈಷ್ಣವಿ ಡ್ಯುಯೆಟ್

Public TV
1 Min Read
vaishnavi chaitanya

ಟಾಲಿವುಡ್‌ನಲ್ಲಿ (Tollywood) ಈಗ ತೆಲುಗಿನ ಅಮ್ಮಾಯಿ ವೈಷ್ಣವಿ ಚೈತನ್ಯ(Vaishnavi Chaitanya) ಹಂಗಾಮ ಜೋರಾಗಿದೆ. ‘ಬೇಬಿ’ (Baby) ಸಿನಿಮಾ ನಟನೆಯಿಂದ ಈ ಚಿತ್ರದ ಸಕ್ಸಸ್‌ನಿಂದ ಇಡೀ ತೆಲುಗಿನ ಮಂದಿ ವೈಷ್ಣವಿ ಕಡೆ ತಿರುಗಿ ನೋಡುವಂತೆ ಆಗಿದೆ. ಆನಂದ್ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಿದ ಮೇಲೆ ಇಸ್ಮಾರ್ಟ್ ಶಂಕರ್ ರಾಮ್‌ಗೆ ಜೋಡಿಯಾಗಲು ವೈಷ್ಣವಿ ರೆಡಿಯಾಗಿದ್ದಾರೆ.

vaishnavi chaitanya

ಯೂಟ್ಯೂಬ್‌ನಲ್ಲಿ ಶಾರ್ಟ್ ಫಿಲ್ಮ್ಸ್, ಅಲಾ ವೈಕುಂಠಪುರಮಲ್ಲೋ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ತಂಗಿ ವೈಷ್ಣವಿ ಚೈತನ್ಯ ನಟಿಸಿದ್ದರು. ಈಗ ಬೇಬಿ ಸಿನಿಮಾದಲ್ಲಿ ನಾಯಕಿಯಾಗಿ ಗೆದ್ದು ಬೀಗಿದ್ದಾರೆ. ಈ ಬೆನ್ನಲ್ಲೇ ವೈಷ್ಣವಿಗೆ ಬಂಪರ್ ಆಫರ್ ಬರುತ್ತಿದೆ. ರಾಮ್ ಪೋತಿನೇನಿ ಜೊತೆ ವೈಷ್ಣವಿ ಡ್ಯುಯೇಟ್ ಹಾಡಲು ಸಜ್ಜಾಗಿದ್ದಾರೆ.‌ ಇದನ್ನೂ ಓದಿ:‘ಡಿಜೆ ಟಿಲ್ಲು’ ಹೀರೋ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್

Ram Pothineni 2

‘ಲೈಗರ್’ (Liger) ಸೋಲಿನ ನಂತರ ರಾಮ್ ಪೋತಿನೇನಿ (Ram Pothineni) ಜೊತೆ ಸಿನಿಮಾ ಮಾಡಲು ನಿರ್ದೇಶಕ ಪುರಿ ಜಗನ್ನಾಥ್ ಕೈಜೋಡಿಸಿದ್ದಾರೆ. ಡಬಲ್ ಇಸ್ಮಾರ್ಟ್ ಅಂತಾ ಟೈಟಲ್ ಫಿಕ್ಸ್ ಆಗಿದೆ. ಈ ಚಿತ್ರಕ್ಕೆ ‘ಬೇಬಿ’ (Baby) ಗರ್ಲ್ ವೈಷ್ಣವಿ ನಾಯಕಿಯಾಗಿದ್ದಾರೆ.

ಹೊಸ ಪ್ರೇಮಕಥೆಯ ಜೊತೆ ನಯಾ ಜೋಡಿ ರಾಮ್ ಪೋತಿನೇನಿ- ವೈಷ್ಣವಿ ಬರುತ್ತಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಮತ್ತು ಆ್ಯಕ್ಷನ್ ಸ್ಟೋರಿ ನೋಡಲು ಕೆಲ ಸಮಯ ಕಾಯಲೇಬೇಕಿದೆ. ಇನ್ನೂ ‘ಬೇಬಿʼ ಸಕ್ಸಸ್ ನೋಡಿ ರಾಮ್ ಪೋತಿನೇನಿ ಅವರು ವೈಷ್ಣವಿ ಅವರಿಗೆ ಬೊಕ್ಕೆ ಕಳುಹಿಸಿ ಶುಭ ಕೋರಿದ್ದರು. ಕನ್ನಡತಿ ನಾಯಕಿಯರ ದರ್ಬಾರ್ ನಡುವೆ ತೆಲುಗು ನಟಿ ವೈಷ್ಣವಿ ಮಿಂಚ್ತಿರೋದು ಟಾಲಿವುಡ್ ಮಂದಿಗೆ ಖುಷಿ ಕೊಟ್ಟಿದೆ.

Share This Article