ಕನ್ನಡದ ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ (Rashmika Mandanna) ಅವರು ತೆಲುಗು- ಬಾಲಿವುಡ್ ರಂಗದಲ್ಲಿ ಬ್ಯುಸಿಯಿದ್ದಾರೆ. ನಿತಿನ್ ಸಿನಿಮಾದಿಂದ ಹೊರ ನಡೆದ ಮೇಲೆ ಹೊಸ ಸಿನಿಮಾವನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ. ನಟ ಸಿದ್ದು ಜೊತೆ ಕೂರ್ಗ್ ಚೆಲುವೆ ರಶ್ಮಿಕಾ ರೊಮ್ಯಾನ್ಸ್ ಮಾಡಲಿದ್ದಾರೆ.
- Advertisement 2
ಟಾಲಿವುಡ್ನಲ್ಲಿ ಶ್ರೀಲೀಲಾ (Sreeleela) ಹವಾ ಜೋರಾಗಿ ನಡೆಯುತ್ತಿದ್ದರು. ರಶ್ಮಿಕಾ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ. ಪ್ಯಾನ್ ಇಂಡಿಯಾ ನಾಯಕಿಗೆ ಈಗಲೂ ವಿಭಿನ್ನ ಕಥೆಗಳು ಅರಸಿ ಬರುತ್ತಿದೆ. ರಶ್ಮಿಕಾ ಮಂದಣ್ಣ ಅವರು ನಿತಿನ್ ಜೊತೆ ಸಿನಿಮಾ ಮಾಡಬೇಕಿತ್ತು. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣಕ್ಕೆ ಅವರು ಸಿನಿಮಾದಿಂದ ಹೊರ ನಡೆದರು. ರಶ್ಮಿಕಾ ಅವರು ಈಗ ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ. ಈ ಪೈಕಿ ಅವರಿಗೆ ಒಂದು ಕಥೆ ಇಷ್ಟವಾಗಿದೆ. ಈ ಚಿತ್ರಕ್ಕೆ ಸಿದ್ದು ಜೊನ್ನಲಗಡ್ಡ (Siddu Jonnalagadda) ಅವರು ನಾಯಕನಾಗಿದ್ದು, ಫ್ಯಾಷನ್ ಸ್ಟೈಲೀಸ್ಟ್ ನೀರಜ ಕೋನ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ. ಇದು ಅವರ ನಿರ್ದೇಶನದ ಮೊದಲ ಸಿನಿಮಾವಾಗಿದೆ. ಇದನ್ನೂ ಓದಿ:‘ಸಂಜು ವೆಡ್ಸ್ ಗೀತಾ 2’ ಸಿನಿಮಾವನ್ನು ಅಪ್ಪು ಬಾಸ್ಗೆ ಅರ್ಪಿಸಿದ ನಾಗಶೇಖರ್
- Advertisement 3
- Advertisement 4
ಸಿದ್ದು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 2019ರಲ್ಲಿ ಬಂದ ‘ಜೋಶ್’ ಚಿತ್ರದಲ್ಲಿ ಅವರು ಮುಖ್ಯ ಪಾತ್ರ ಒಂದನ್ನು ನಿರ್ವಹಿಸಿದ್ದರು. ‘ಎಲ್ಬಿಡಬ್ಲ್ಯೂ: ಲೈಫ್ ಬಿಫೋರ್ ವೆಡ್ಡಿಂಗ್’ ಚಿತ್ರದ ಮೂಲಕ ಅವರು ಹೀರೋ ಆದರು. ಕಳೆದ ವರ್ಷ ರಿಲೀಸ್ ಆದ ‘ಡಿಜೆ ಟಿಲ್ಲು’ ಸಿನಿಮಾ ಮೂಲಕ ಸಿದ್ದು ಯಶಸ್ಸು ಕಂಡರು. ಈಗ ಮೂರ್ನಾಲ್ಕು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಈಗ ರಶ್ಮಿಕಾ ಜೊತೆಗಿನ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಹೀರೋ ಸಿದ್ದುಗಿಂತ ರಶ್ಮಿಕಾ ಅವರು ದುಬಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಸಿದ್ದು-ರಶ್ಮಿಕಾ ಇದೇ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡ್ತಿದ್ದಾರೆ. ತೆರೆಯ ಮೇಲೆ ನೋಡೋಕೆ ಇದು ಹೊಸ ಜೋಡಿಯಾಗಿದೆ. ಸಿದ್ದು- ರಶ್ಮಿಕಾ ಲವ್ ರೊಮ್ಯಾನ್ಸ್ ನೋಡೋಕೆ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಅಪ್ಡೇಟ್ ಸಿಗಲಿದೆ.
ರಶ್ಮಿಕಾ ಮಂದಣ್ಣ ಅವರು ಪುಷ್ಪ 2, ರೈನ್ಬೋ, ಅನಿಮಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪ ಸಕ್ಸಸ್ ನಂತರ ಶ್ರೀವಲ್ಲಿಯನ್ನ ಪಾರ್ಟ್ 2ನಲ್ಲಿ ನೋಡೋಕೆ ಕಾಯ್ತಿದ್ದಾರೆ.