ಬೀಜಿಂಗ್: ಯುವಜನರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿರುವ ಟಿಕ್‌ಟಾಕ್ (TikTok) ಇದೀಗ ಎಲೋನ್ ಮಸ್ಕ್ ನೇತೃತ್ವದ ಟ್ವಿಟ್ಟರ್ (Twitter) ಹಾಗೂ ಇನ್ಸ್ಟಾಗ್ರಾಮ್ (Instagram) ಅಪ್ಲಿಕೇಷನ್‌ಗಳಿಗೆ ಸೆಡ್ಡು ಹೊಡೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಅದಕ್ಕಾಗಿಯೇ ಇನ್ಮುಂದೆ ಟಿಕ್‌ಟಾಕ್‌ನಲ್ಲಿ ವೀಡಿಯೋ ರೀಲ್ಸ್ ಮಾತ್ರವಲ್ಲದೇ ಪಠ್ಯ ಸಂದೇಶಗಳನ್ನೂ ಪೋಸ್ಟ್ ಮಾಡುವ ಅವಕಾಶವನ್ನ ಬಳಕೆದಾರರಿಗೆ ನೀಡುವುದಾಗಿ ಘೋಷಿಸಿದೆ.
Advertisement
ಇನ್ಸ್ಟಾಗ್ರಾಮ್ (Instagram) ಖಾತೆಗೆ ಲಿಂಕ್ ಹೊಂದಿರುವ ಥ್ರೆಡ್ಸ್ ಈ ತಿಂಗಳ ಆರಂಭದಲ್ಲಿ ಚಾಲ್ತಿಗೆ ಬಂದಿತು. ಟ್ವಿಟ್ಟರ್ ಆಯ್ಕೆಗಳನ್ನ ಒಳಗೊಂಡ ಹಾಗೂ ಇನ್ಸ್ಟಾಗ್ರಾಮ್ ರೀತಿಯನ್ನೇ ಹೋಲುವ ಥ್ರೆಡ್ಸ್ ಅನ್ನು ಟಿಟ್ಟರ್‌ಗೆ ಪರ್ಯಾಯವಾಗಿ ಬಳಸಲು ಜಾರಿಗೆ ತರಲಾಯಿತು. ಇನ್ನೂ ಈ ಹಿಂದೆ ಟ್ವಿಟ್ಟರ್ ಲೋಗೋವನ್ನ ನಾಯಿ ಮರಿಯಾಗಿ ಬದಲಾಯಿಸಿದ್ದ ಮಸ್ಕ್ ಇದೀಗ ನೀಲಿ ಹಕ್ಕಿಗೆ ಗುಡ್‌ಬೈ ಹೇಳಿ ʻX’ ಎಂದು ಮರುನಾಮಕರಣ ಮಾಡಿದ್ದಾರೆ.
Advertisement
Advertisement
ಈ ನಡುವೆ ಮೆಟಾ ಮಾಲೀಕತ್ವದ ಥ್ರೆಡ್ಸ್ ಹಾಗೂ ಟ್ವಿಟ್ಟರ್ ನಂತೆಯೇ 1.4 ಶತಕೋಟಿ ಬಳಕೆದಾರರನ್ನ ಒಳಗೊಂಡಿರುವ ಟಿಕ್ ಟಾಕ್ ಪಠ್ಯಸಂದೇಶ ಪೋಸ್ಟ್ ಹಂಚಿಕೊಳ್ಳುವ ಆಯ್ಕೆ ಕಲ್ಪಿಸಲು ಮುಂದಾಗಿದೆ. ಆದ್ರೆ ಥ್ರೆಡ್ಸ್‌ನಂತೆ ಇದಕ್ಕಾಗಿ ಪ್ರತ್ಯೇಕ ಆ್ಯಪ್ ಸಿದ್ಧ ಮಾಡುವ ಬದಲಿಗೆ ಅದೇ ಆ್ಯಪ್ನಲ್ಲಿ ಪಠ್ಯ ವೈಶಿಷ್ಟ್ಯವನ್ನು ಒಳಗೊಳ್ಳುವ ಆಯ್ಕೆ ಸಂಯೋಜಿಸಲಿದೆ. ಇದು ಟ್ವಿಟ್ಟರ್ ಮತ್ತು ಥ್ರೆಡ್ಸ್ ಗಿಂತಲೂ ಭಿನ್ನವಾಗಿ ಕಾಣುತ್ತದೆ. ಜೊತೆಗೆ ಬಳಕೆದಾರರು ಬರಹದ ಹಿನ್ನೆಲೆಗೆ ಕಲರ್ ಮತ್ತು ಮ್ಯೂಸಿಕ್ ಅನ್ನು ಸೇರಿಸಿ ಸಂದೇಶವನ್ನ ಹಂಚಿಕೊಳ್ಳಬಹುದು ಎಂದು ಚೀನಾ-ಮಾಲೀಕತ್ವದ ಕಂಪನಿ ಹೇಳಿದೆ.
Advertisement
ಸದ್ಯ ಚೀನಾ ಮಾಲೀಕತ್ವದ ಟಿಕ್‌ಟಾಕ್ ಆ್ಯಪ್ ಅನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನ ಲೋಗೋ ಇದೀಗ ಅಧಿಕೃತವಾಗಿ ಬದಲಾವಣೆಯಾಗಿದೆ. ವರ್ಷಗಳ ಐಕಾನಿಕ್ ನೀಲಿ ಬಣ್ಣದ ಹಕ್ಕಿ ಮಾಯವಾಗಿದ್ದು, ಎಕ್ಸ್ ಲೋಗೋ ಇದೀಗ ಕಾಣಿಸಿಕೊಳ್ಳುತ್ತಿದೆ. ಈ ನಡುವೆ ವೆರಿಫೈಡ್ ಟ್ವಿಟ್ಟರ್ ಖಾತೆಗಳನ್ನು ಹೊಂದಿರುವ ಕಂಟೆಂಟ್ ಕ್ರಿಯೇಟರ್ಸ್‌ಗಳಿಗೆ ಜಾಹೀರಾತು ಆದಾಯದಲ್ಲಿ ಹಣ ನೀಡುವುದಾಗಿ ಟ್ವಿಟ್ಟರ್ ಸಂಸ್ಥೆ ಘೋಷಣೆ ಮಾಡಿದೆ.
Web Stories