ಬೆಂಗಳೂರು: ಗಾಂಧೀ ಬಜಾರ್‌ನಲ್ಲಿರುವ ಪ್ರಸಿದ್ಧ ವಿದ್ಯಾರ್ಥಿ ಭವನ (Vidyarthi Bhavan) ಹೋಟೆಲಿಗೆ ಟೀಂ ಇಂಡಿಯಾ ಮಾಜಿ ನಾಯಕ, ಸ್ಪಿನ್ ಬೌಲರ್ ಅನಿಲ್ ಕುಂಬ್ಳೆ (Anil Kumble) ಭೇಟಿ ನೀಡಿದ್ದಾರೆ.
ತಮ್ಮ ಕುಟುಂಬ ಸದಸ್ಯರ ಜೊತೆ ಭೇಟಿ ನೀಡಿದ ಕುಂಬ್ಳೆ ವಿದ್ಯಾರ್ಥಿ ಭವನದ ಫೇಮಸ್ ಮಸಾಲೆ ದೋಸೆಯನ್ನು (Masala Dosa) ಸವಿದಿದ್ದಾರೆ. ಇದನ್ನೂ ಓದಿ: ಕದ್ದ ಬೈಕ್‍ಗಳನ್ನು ಮೆಜೆಸ್ಟಿಕ್‍ನಲ್ಲಿ ಪಾರ್ಕ್ ಮಾಡಿ ಪರಾರಿ
Pleasure to have this lovely couple at VB today https://t.co/csJ1s5jFdO pic.twitter.com/82fR3pbjFl
— Vidyarthi Bhavan (@VidyarthiBhavan) April 28, 2024
ಕುಂಬ್ಳೆ ಬಂದ ವಿಚಾರವನ್ನು ವಿದ್ಯಾರ್ಥಿ ಭವನ ಎಕ್ಸ್‌ನಲ್ಲಿ ತಿಳಿಸಿದ್ದು, ಇಂದು ವಿದ್ಯಾರ್ಥಿ ಭವನದಲ್ಲಿ ಸುಂದರ ಜೋಡಿಯನ್ನು ನೋಡಿ ಸಂತೋಷವಾಯಿತು ಎಂದು ಹೇಳಿದೆ.
ಬೆಂಗಳೂರಿನ ಗಾಂಧೀ ಬಜಾರ್ ಬಡಾವಣೆಯಲ್ಲಿರುವ ವಿದ್ಯಾರ್ಥಿ ಭವನ 70 ವರ್ಷಕ್ಕಿಂತ ಹಳೆಯದಾದ ಸಸ್ಯಾಹಾರಿ ಹೋಟೆಲ್ ಆಗಿದ್ದು ಈಗಲೂ ಜನಪ್ರಿಯತೆ ಮತ್ತು ಗುಣಮಟ್ಟವನ್ನು ಉಳಿಸಿಕೊಂಡು ಬಂದಿದೆ. ಭಾರತ ಸೇರಿದಂತೆ ವಿದೇಶದ ಹಲವು ಗಣ್ಯರು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಆಹಾರ ಸೇವಿಸುತ್ತಾರೆ.