ಭೋಪಾಲ್: ಕೊಳೆಯಾಗಿದೆ ಎಂದು ಕ್ಲಾಸ್‌ರೂಮ್‌ನಲ್ಲಿ ಮಕ್ಕಳ ಎದುರೇ 10 ವರ್ಷದ ಆದಿವಾಸಿ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕನನ್ನು ಅಮಾನತುಗೊಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.
ಶಾಹದೋಲ್ ಜಿಲ್ಲೆಯಲ್ಲಿ ನಡೆದ ಘಟನೆಯ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ 5ನೇ ತರಗತಿ ವಿದ್ಯಾರ್ಥಿಯು ತನ್ನ ಒಳ ಉಡುಪುಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾಳೆ. ಶಿಕ್ಷಕ ಶ್ರವಣ್ ಕುಮಾರ್ ತ್ರಿಪಾಠಿ ಆಕೆಯ ಬಟ್ಟೆಗಳನ್ನು ತೊಳೆಯುತ್ತಿರುವುದು ಮತ್ತು ಇತರ ಹುಡುಗಿಯರು ಹತ್ತಿರದಲ್ಲಿ ನಿಂತಿರುವ ದೃಶ್ಯವಿದೆ. ಇದನ್ನೂ ಓದಿ: ಕ್ಲಿನಿಕ್‌ನಲ್ಲಿ ಬೆಂಕಿ – ವೈದ್ಯ, ಆತನ ಇಬ್ಬರು ಮಕ್ಕಳು ದಾರುಣ ಸಾವು
Advertisement
Advertisement
ಬಟ್ಟೆ ಒಣಗುವವರೆಗೆ ವಿದ್ಯಾರ್ಥಿನಿ ಸುಮಾರು ಎರಡು ಗಂಟೆಗಳ ಕಾಲ ವಸ್ತ್ರವಿಲ್ಲದ ಸ್ಥಿತಿಯಲ್ಲೇ ಕುಳಿತುಕೊಳ್ಳಬೇಕಾಯಿತು ಎಂದು ಕೆಲವು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.
Advertisement
ಬುಡಕಟ್ಟು ವ್ಯವಹಾರಗಳ ಇಲಾಖೆಯಿಂದ ನಡೆಸಲ್ಪಡುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ತ್ರಿಪಾಠಿ, ಇಲಾಖೆಯ ವಾಟ್ಸಾಪ್ ಗ್ರೂಪ್‌ನಲ್ಲಿ ಘಟನೆಯ ಚಿತ್ರಗಳನ್ನು ಹಂಚಿಕೊಂಡಿದ್ದರು. ತಾವು ʻಸ್ವಚ್ಛತಾ ಮಿತ್ರʼ ಎಂದು ಬರೆದುಕೊಂಡಿದ್ದರು. ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿವಾಹಿತ ಬಾಯ್‌ಫ್ರೆಂಡ್‌ಗೆ ಹಾಸ್ಟೆಲ್‌ಮೇಟ್ಸ್ ಬೆತ್ತಲೆ ವೀಡಿಯೋ ಕಳಿಸಿದ BED ಪದವೀಧರೆ- ಇಬ್ಬರೂ ಅರೆಸ್ಟ್
Advertisement
ಮಧ್ಯಪ್ರದೇಶದ ಬುಡಕಟ್ಟು ಕಲ್ಯಾಣ ಇಲಾಖೆಯ ಸಹಾಯಕ ಆಯುಕ್ತ ಆನಂದ್ ರೈ ಸಿನ್ಹಾ ಅವರು ವಿಷಯ ತಿಳಿಯುತ್ತಿದ್ದಂತೆ ಶಿಕ್ಷಕನನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೇ ಘಟನೆ ಕುರಿತು ತನಿಖೆ ನಡೆಸುವಂತೆ ಸೂಚಿಸಿದ್ದಾರೆ.