ಮುಂಬೈ: ಶಿಕ್ಷಕಿಯೊಬ್ಬರು ಶಾಲೆಯ(School) ಲಿಫ್ಟ್ನ ಬಾಗಿಲಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಖಾಸಗಿ ಶಾಲೆಯಲ್ಲಿ ನಡೆದಿದೆ.
ಮಲಾಡ್ ವೆಸ್ಟ್ನಲ್ಲಿರುವ ಸೇಂಟ್ ಮೇರಿ ಇಂಗ್ಲಿಷ್ ಶಾಲೆಯ ಶಿಕ್ಷಕಿ(Teacher ) ಜಿನೆಲ್ ಫೆರ್ನಾಂಡಿಸ್(26) ಶಾಲೆಯ ಲಿಫ್ಟ್(Lift) ಬಾಗಿಲಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 1 ರಿಂದ 2 ಗಂಟೆಯ ನಡುವೆ ಈ ಘಟನೆ ನಡೆದಿದೆ. ಶಾಲೆಯ 6ನೇ ಮಹಡಿಯಲ್ಲಿ ತರಗತಿ ಮುಗಿಸಿ ಲಿಫ್ಟ್ ಮೂಲಕ ಸ್ಟಾಪ್ ರೂಂಗೆ ಹೋಗುವವರಿದ್ದರು. ಆ ಪ್ರಕಾರವಾಗಿಯೇ ಜಿನೆಲ್ 6ನೇ ಫ್ಲೋರ್ ನಲ್ಲಿ ಲಿಫ್ಟ್ ಹತ್ತಿದ್ದಾರೆ. ಆದರೆ ಕಾಲೊಂದು ಒಳಗೆ ಇಟ್ಟ ತಕ್ಷಣ ಬಾಗಿಲು ಮುಚ್ಚಿಕೊಂಡಿದ್ದು, ದೇಹವೆಲ್ಲ ಹೊರಗಡೆಯೇ ಇತ್ತು. ಅದಾದ ಬಳಿಕ ಲಿಫ್ಟ್ 7ನೇ ಮಹಡಿಗೆ ಹೋಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ದೇಹದಾನ ಮಾಡಿ ಸಾರ್ಥಕತೆ ಮೆರೆದ ಅಭಿಮಾನಿ ಶಿಲ್ಪಾ
ಇದರಿಂದಾಗಿ ಜಿನೆಲ್ ಸಹಾಯಕ್ಕಾಗಿ ಕಿರುಚಿದ್ದಾರೆ. ಅಷ್ಟೇ ಅಲ್ಲದೇ ಲಿಫ್ಟ್ ಹಾಗೂ ಗೊಡೆಯ ಮಧ್ಯೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿನೆಲ್ ಅವರು ಕಿರುಚಿದ್ದನ್ನು ಕೇಳಿ ಅಲ್ಲಿದ್ದ ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಸಹಾಯಕ್ಕೆ ಧಾವಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸಡು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಂಧ್ರದಲ್ಲಿ ಎಟಿಎಂಗೆ ಹಣ ತುಂಬುವ ವಾಹನ ಕಳ್ಳತನ- ಕರ್ನಾಟಕದಲ್ಲಿ 53.5 ಲಕ್ಷ ನಗದು ಸೀಜ್