ಮೈಸೂರು: ಮೈಸೂರು (Mysuru) ಅಥವಾ ಶ್ರೀರಂಗಪಟ್ಟಣದಲ್ಲಿ (Srirangapattana) 100 ಅಡಿ ಎತ್ತರದ ಟಿಪ್ಪು ಪ್ರತಿಮೆ (Tippu Statue) ನಿರ್ಮಾಣ ಖಚಿತ ಎಂದು ಶಾಸಕ ತನ್ವೀರ್ ಸೇಠ್ (Tanveer Sait) ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ನಿರ್ಮಿಸುವುದು ಖಚಿತ. ಕಂಚಿನ ಪ್ರತಿಮೆನಾ ಅಥವಾ ಪಂಚಲೋಹದ ಪ್ರತಿಮೆನಾ ಎನ್ನುವ ತೀರ್ಮಾನ ಸದ್ಯದಲ್ಲಿಯೇ ಮಾಡುತ್ತೇವೆ. ಪ್ರತಿಮೆ ಸ್ಥಾಪನೆ ಮುಸ್ಲಿಂ ಧರ್ಮದಲ್ಲಿ ನಿಷೇಧ ಇದ್ದರೂ, ಇಂದಿನ ಪರಿಸ್ಥಿತಿಗಾಗಿ ಪ್ರತಿಮೆ ನಿರ್ಮಾಣ ಮಾಡುವುದು ಅನಿವಾರ್ಯವಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಪ್ರತಿಮೆ ಸ್ಥಾಪನೆಗೆ ಮುನ್ನವೇ ಅದನ್ನು ಕೆಡವುವ ಮಾತು ಬಂದಿವೆ. ಪ್ರಮೋದ್ ಮುತಾಲಿಕ್ (Pramod Mutalik) ಕಟ್ಟುವ ಕಾರ್ಯದಲ್ಲಿ ಯಾವತ್ತೂ ಇಲ್ಲ. ಬರೀ ಕೆಡವುವ ಕಾರ್ಯದಲ್ಲಿ ಅವರು ಮುಂದಿದ್ದಾರೆ. ಯಾರ ವಿರೋಧಕ್ಕೂ ನಾವು ಬಗ್ಗುವುದಿಲ್ಲ. ನಮ್ಮ ರಕ್ಷಣೆಗೆ ಸಂವಿಧಾನವಿದೆ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಸಿಎಂ ಪತ್ರ ಬರೆದಿದ್ದು ಯಾವಾಗ? ದೇವೇಗೌಡರ ನಿವಾಸಕ್ಕೆ ತಲುಪಿಸಿದ್ದು ಯಾವಾಗ? – ಬಿಜೆಪಿಗೆ ಜೆಡಿಎಸ್ ಪ್ರಶ್ನೆ
Advertisement
Advertisement
ಟಿಪ್ಪು ವಿರೋಧಿಸಿದರೆ ತಮಗೆ ಲಾಭ ಎಂದು ಟಿಪ್ಪು ಹೆಸರನ್ನು ಬಿಜೆಪಿ (BJP) ಬಳಸುತ್ತಿದೆ. ಅದು ಬಿಜೆಪಿಯ ಭ್ರಮೆಯಷ್ಟೇ. ಸರ್ಕಾರದ ಕುಮ್ಮಕ್ಕಿನಿಂದ ಮೈಸೂರಿನ ರಂಗಾಯಣದಲ್ಲಿ ಟಿಪ್ಪು ವಿರುದ್ಧದ ನಾಟಕ ಪ್ರದರ್ಶನಕ್ಕೆ ಸಿದ್ಧವಾಗಿದೆ. ಇದಕ್ಕೆ ನನ್ನ ವಿರೋಧವಿದ್ದು ಇದನ್ನು ತಡೆಯಲು ಕೋರ್ಟ್ ಮೊರೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ತೆಗೆಯಲು ನಿಖಿಲ್‍ರನ್ನು ಬಲಿ ಕೊಟ್ರು: ಎಲ್.ಆರ್.ಶಿವರಾಮೇಗೌಡ