DistrictsKarnatakaLatestMain PostMandya

ನನ್ನ ತೆಗೆಯಲು ನಿಖಿಲ್‍ರನ್ನು ಬಲಿ ಕೊಟ್ರು: ಎಲ್.ಆರ್.ಶಿವರಾಮೇಗೌಡ

ಮಂಡ್ಯ: ಜಿಲ್ಲೆಯ ಜೆಡಿಎಸ್ ನಾಯಕರು ನನ್ನ ಮಟ್ಟ ಹಾಕಲು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರನ್ನು ಮಂಡ್ಯದಲ್ಲಿ ಬಲಿಕೊಟ್ಟಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ (L.R.Shivaramegowda) ಹೇಳಿದ್ದಾರೆ.

 

ನಿಖಿಲ್ ಅವರನ್ನು ಮಂಡ್ಯಗೆ (Mandya) ತರುವ ಯೋಚನೆ ಹೆಚ್‌.ಡಿ. ಕುಮಾರಸ್ವಾಮಿ (H.D.Kumarswamy) ಅವರಿಗೆ ಇರಲಿಲ್ಲ. ನನ್ನನ್ನು ತೆಗೆಯಲು ಮಂಡ್ಯ ಜಿಲ್ಲೆಯ ಕೆಲ ಶಾಸಕರು ಏನೇನೋ ಕಥೆ ಕಟ್ಟಿದ್ದರು. 75 ಸಾವಿರ ಮತ ಹಾಕುವುದು ನನ್ನ ಜವಾಬ್ದಾರಿ, ನೀವು ನಿಖಿಲ್ ನಿಲ್ಲಿಸಿ ಎಂದು ಕುಮಾರಸ್ವಾಮಿ ಜೊತೆ ಮಾತುಕಥೆ ಮಾಡಿದ್ದರು. ಇದನ್ನೂ ಓದಿ: ನಿರ್ಮಲಾನಂದ ಸ್ವಾಮೀಜಿ ಹೆಗಲ ಮೇಲೆ ಕೈಹಾಕಿ ಅಶೋಕ್ ಅಪಮಾನ : ಸಿಎಂ ಇಬ್ರಾಹಿಂ ಕಿಡಿ

ನನ್ನನ್ನು ಮಂಡ್ಯ ಜಿಲ್ಲೆಯಲ್ಲಿ ಸೈಡ್ ಲೈನ್ ಮಾಡಲು ಹೋಗಿ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರು ನಿಖಿಲ್ ಅವರನ್ನು ಬಲಿ ಕೊಟ್ಟಿದ್ದಾರೆ. ನಿಖಿಲ್‍ಗೆ ತುಂಬಾ ಅವಕಾಶವಿತ್ತು, ಅವರು ಒಳ್ಳೆಯ ಸಿನಿಮಾ ನಟ. ಅವರು ಚುನಾವಣೆಗೆ ನಿಲ್ಲಲು ರೆಡಿ ಇರಲಿಲ್ಲ, ಮಂಡ್ಯ ಜಿಲ್ಲೆಯ ಶಾಸಕರ ಒತ್ತಡದ ಮೇಲೆ ಕುಮಾರಸ್ವಾಮಿ ಅವರು ಚುನಾವಣೆಗೆ ನಿಲ್ಲಿಸಿದರು. ಇದರಿಂದ ಅವರಿಗೆ ಕೆಟ್ಟ ಹೆಸರು ಬಂದಿದೆ ಎಂದಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ – ಮತದಾರರ ಕೈಯಲ್ಲಿ 412 ಅಭ್ಯರ್ಥಿಗಳ ಭವಿಷ್ಯ

Live Tv

Leave a Reply

Your email address will not be published. Required fields are marked *

Back to top button