DistrictsKalaburagiKarnatakaLatestMain Post

ನಿರ್ಮಲಾನಂದ ಸ್ವಾಮೀಜಿ ಹೆಗಲ ಮೇಲೆ ಕೈಹಾಕಿ ಅಶೋಕ್ ಅಪಮಾನ : ಸಿಎಂ ಇಬ್ರಾಹಿಂ ಕಿಡಿ

-ದೇಶದಲ್ಲಿ ಅಷ್ಟಲಕ್ಷ್ಮೀಯರು ಹೋಗಿ ಇದೀಗ ದರಿದ್ರ ಲಕ್ಷ್ಮಿ ಉಳಿದಿದ್ದಾಳೆ
-ಕಾಂಗ್ರೆಸ್/ಬಿಜೆಪಿ ಇಬ್ಬರು ಒಂದೇ ಬೀದಿಯಲ್ಲಿರುವ ಪತಿವ್ರತೆಯರು

ಕಲಬುರಗಿ: ನಿರ್ಮಲಾನಂದ ಸ್ವಾಮೀಜಿಗೆ (Nirmalananda Swamiji)ಗೌರವ ಕೊಡದೇ ಇರುವುದು ಅಕ್ಷಮ್ಯ ಅಪರಾಧ. ನಿರ್ಮಲಾನಂದ ಸ್ವಾಮೀಜಿ ಹೆಗಲ ಮೇಲೆ ಕೈಹಾಕಿ ಅಶೋಕ್ ಘೋರ ಅಪಮಾನ ಮಾಡಿದ್ದಾರೆ ಎಂದು ಜೆಡಿಎಸ್‌ (JDS) ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಕಿಡಿಕಾರಿದ್ದಾರೆ.

ಕಲಬುರಗಿಯಲ್ಲಿ (Kalburgi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ನಿರ್ಮಲಾನಂದ ಸ್ವಾಮೀಜಿಗೆ ಅಪಮಾನ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರಿಗೆ (BJP) ಅಧಿಕಾರದ ಮದ ನೆತ್ತಿಗೆ ಹತ್ತಿದೆ. ಈ ಹಿಂದೆ ಅಮಿತ್ ಶಾ (Amit Shah) ಸ್ವಾಮೀಜಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತ್ತಿದ್ದರು. ನಿರ್ಮಲಾನಂದ ಸ್ವಾಮೀಜಿಗೆ ಗೌರವ ಕೊಡದೇ ಇರುವುದು ಅಕ್ಷಮ್ಯ ಅಪರಾಧ. ನಿರ್ಮಲಾನಂದ ಸ್ವಾಮೀಜಿ ಹೆಗಲ ಮೇಲೆ ಕೈಹಾಕಿ ಅಶೋಕ್ ಘೋರ ಅಪಮಾನ ಮಾಡಿದ್ದಾರೆ. ಯಾರಿಗೆ ಯಾವ ರೀತಿ ಗೌರವ ಕೊಡಬೇಕು ಎನ್ನುವುದನ್ನು ಬಿಜೆಪಿಯವರು ಮರೆತ್ತಿದ್ದಾರೆ. ಬಿಜೆಪಿಯಲ್ಲಿ ಬುದ್ದಿವಾದ ಹೇಳುವ ಹಿರಿಯರು ಯಾರು ಇಲ್ಲ. ಬೊಮ್ಮಾಯಿ (Basavaraj Bommai) ಬಸವಕೃಪ ಮರೆತು, ಕೇಶವ ಕೃಪಾಕ್ಕೆ ಶರಣಾಗಿದ್ದಾರೆ ಎಂದಿದ್ದಾರೆ.

ಇದೇ ವೇಳೆ ಕೆಂಪೇಗೌಡ ಪ್ರತಿಮೆ (Kempegowda Statue) ಉದ್ಘಾಟನೆ ಸಮಾರಂಭಕ್ಕೆ ದೇವೇಗೌಡರನ್ನು (H.D.Devegowda) ಆಹ್ವಾನಿಸದೇ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇವೆಗೌಡರು ಪ್ರಧಾನಿಯಾದ ಮೊದಲ ಕನ್ನಡಿಗ. ದೇವೇಗೌಡರಿಗೆ ಕರೆಯದೆ ಇರೋದು ಕನ್ನಡಿಗರಿಗೆ ಮಾಡಿದ ಅವಮಾನ. ಸಿದ್ದರಾಮಯ್ಯರನ್ನು (Siddaramaiah) ಸಹ ಕಾರ್ಯಕ್ರಮಕ್ಕೆ ಕರೆಯಬೇಕಿತ್ತು. ಪ್ರಧಾನಿ ನಾಡು ಕಟ್ಟಲು ರಾಜ್ಯಕ್ಕೆ ಬಂದಿಲ್ಲ, ಬಿಜೆಪಿ ಕಟ್ಟಲು ಬಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿಎಂ ಪತ್ರ ಬರೆದಿದ್ದು ಯಾವಾಗ? ದೇವೇಗೌಡರ ನಿವಾಸಕ್ಕೆ ತಲುಪಿಸಿದ್ದು ಯಾವಾಗ? – ಬಿಜೆಪಿಗೆ ಜೆಡಿಎಸ್ ಪ್ರಶ್ನೆ

ನಂತರ, ಮೋದಿ ರಾಜ್ಯಕ್ಕೆ ಬಂದಿದ್ದು, ಜೆಡಿಎಸ್‍ಗೆ ಲಾಭವಾಗಿದೆ. ಇದೇ ರೀತಿ ಇನ್ನೂ ಎರಡು ಸಲ ರಾಜ್ಯಕ್ಕೆ ಬಂದು ಹೋದರೆ ಜೆಡಿಎಸ್‍ಗೆ ಒಳ್ಳೆಯದು. ಪೆಟ್ರೋಲ್ ಲೀಟರ್‌ಗೆ ನೂರು ರೂಪಾಯಿ ಆಗಿದೆ. ದೇಶದಲ್ಲಿ ಅಷ್ಟಲಕ್ಷ್ಮೀಯರು ಹೋಗಿ ಇದೀಗ ದರಿದ್ರ ಲಕ್ಷ್ಮಿ ಉಳಿದಿದ್ದಾಳೆ. ಕೆಂಪೆಗೌಡರ ಮೂರ್ತಿ ಅನಾವರ ಸಂತೋಷ. ಆದರೆ ಅದು ಬಿಜೆಪಿ ಮಯವಾಗಿದ್ದು ಸರಿಯಲ್ಲ. ಜನಕ್ಕೆ ಮೂರ್ತಿಕ್ಕಿಂತ ರಾಜ್ಯಕ್ಕೆ ಮೋದಿ ಆರ್ಥಿಕ ಶಕ್ತಿ ಏನು ಕೊಟ್ಟಿದ್ದಾರೆ? ರಾಜ್ಯದ ಜಿಎಸ್‍ಟಿ ಸೇರಿದಂತೆ ಯಾವ ವಿಚಾರಗಳನ್ನು ಪ್ರಸ್ತಾಪಿಸಿದರು ಎಂದು ಪ್ರಶ್ನಿಸಿದ್ದಾರೆ.

ನಂತರ ಕಾಂಗ್ರೆಸ್/ಬಿಜೆಪಿ  (Congress/BJP) ಇಬ್ಬರು ಒಂದೇ ಬೀದಿಯಲ್ಲಿರುವ ಪತಿವ್ರತೆಯರು, ಅವರು 40%, ಇವರು 20%. ಎರಡು ಪಕ್ಷಗಳು ಸಾಕಷ್ಟು ಭ್ರಷ್ಟಾಚಾರ ಮಾಡಿವೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮೋದಿ ಎಲೆಕ್ಷನ್ ಗೇಮ್- ಪ್ರಬಲ ಸಮುದಾಯದ ಮೇಲೂ ಹೈಕಮಾಂಡ್ ಕಣ್ಣು

Live Tv

Leave a Reply

Your email address will not be published. Required fields are marked *

Back to top button