ದಾವಣಗೆರೆ/ವಿಜಯನಗರ: ಡೀಸೆಲ್ ಸಾಗಿರುತ್ತಿದ್ದ ಟ್ಯಾಂಕರ್ ಬಿದ್ದ ಪರಿಣಾಮ ಭಾರೀ ಪ್ರಮಾಣದ ಬೆಂಕಿ ಹುಟ್ಟಿಕೊಂಡ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನಲ್ಲಿರುವ ರೈಲ್ವೇ ಗೇಟ್ ಬಳಿ ನಡೆದಿದೆ.
ಘಟನೆಯಲ್ಲಿ ಟ್ಯಾಂಕರ್‌ನಲ್ಲಿದ್ದ ಇಬ್ಬರು ಸುಟ್ಟು ಕರಕಲಾಗಿದ್ದು, ಚಾಲಕನಿಗೆ ಗಂಭೀರವಾದ ಸುಟ್ಟ ಗಾಯಗಳಾಗಿವೆ. ಚಾಲಕ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದರೆ, ಸುಟ್ಟು ಹೋದ ಇಬ್ಬರ ಮಾಹಿತಿ ಇನ್ನೂ ಸಿಕ್ಕಿಲ್ಲ. ಇದನ್ನೂ ಓದಿ: ಯೂತ್ ಕೈ ಕಾರ್ಯಕರ್ತರ ನಡುವೆ ಮಾರಾಮಾರಿ- ರಾಜೀನಾಮೆಗೆ ಮುಂದಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಡೀಸೆಲ್ ತುಂಬಿದ ಟ್ಯಾಂಕರ್ ಬೆಟ್ಟದ ರಸ್ತೆಯಲ್ಲಿ ಮೇಲೆ ಏರಲು ಸಾಧ್ಯವಾಗದೆ ಆಯಾ ತಪ್ಪಿ ಕೆಳಗೆ ಉರುಳಿದೆ ಎನ್ನಲಾಗಿದೆ. ಘಟನೆ ವೇಳೆ ಸ್ಥಳದಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ: ಮನೆಗೆ ಹಿಂದಿರುಗುತ್ತಿದ್ದಾಗ ಸಿಂಹ ದಾಳಿ- ಕಾರ್ಮಿಕ ದುರ್ಮರಣ
ಹೆಚ್‌ಪಿ ಕಂಪನಿಗೆ ಸೇರಿದ ಡೀಸೆಲ್ ಹೊತ್ತುಕೊಂಡಿದ್ದ ಟ್ಯಾಂಕರ್ ದಾವಣಗೆರೆಯಿಂದ ಹರಪ್ಪನಹಳ್ಳಿ ಕಡೆ ಬರುತ್ತಿತ್ತು. ಟ್ಯಾಂಕರ್‌ನಲ್ಲಿ 8 ಸಾವಿರ ಲೀ. ಡೀಸೆಲ್ ಹಾಗೂ 4 ಸಾವಿರ ಲೀ. ಪೆಟ್ರೋಲ್ ಹೊತ್ತುಕೊಂಡಿತ್ತು ಎನ್ನಲಾಗಿದೆ.