ಕಾಳಿ ದೇವಿ ಕೈಯಲ್ಲಿ ಸಿಗರೇಟು: ಇದು ಹಿಂದೂಗಳ ದೌರ್ಬಲ್ಯ – ಪ್ರಮೋದ್ ಮುತಾಲಿಕ್ ಕಿಡಿ

Public TV
2 Min Read
KALI DEVI POSTER

ಧಾರವಾಡ: ತಮ್ಮದೇ ಸಾಕ್ಷ್ಯಾಚಿತ್ರವೊಂದರಲ್ಲಿ ತಮಿಳುನಾಡಿನ ಕಾಳಿ ದೇವತೆಯ ಕೈಯಲ್ಲಿ ಸಿಗರೇಟು ಇರಿಸಿದ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಖ್ಯಾತ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಹ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಕಾಳಿ ಕೈಲಿ ಸಿಗರೇಟು ವಿವಾದ : ಲೀನಾ ಮೇಲೆ ಹಲವು ದೂರು ದಾಖಲು

FotoJet 6 1

ಇದಕ್ಕೆ ಕಾರಣ ಹಿಂದೂಗಳ ದೌರ್ಬಲ್ಯ. ಹಿಂದೂ ಸಮಾಜ ಒಗ್ಗಟ್ಟಾಗಿ ಪ್ರತಿಕ್ರಿಯೆ ಮಾಡದೇ ಇರುವುದೇ ಇದಕ್ಕೆ ಕಾರಣ. ಈ ರೀತಿಯ ಘಟನೆ ಇದೇ ಮೊದಲೇನಲ್ಲ. ಈ ಹಿಂದೆಯೂ ಅವಮಾನಕರ ಚಿತ್ರೀಕರಣ ಮಾಡಿದ್ದಾರೆ. ಚಪ್ಪಲಿ, ಬನಿಯನ್, ಶೌಚಾಲಯಗಳಲ್ಲಿ ಅಶ್ಲೀಲವಾಗಿ ಚಿತ್ರೀಕರಿಸಿ ಅವಮಾನ ಮಾಡಿದ್ದಾರೆ. ಮುಂದೆಯೂ ಈ ರೀತಿ ಆಗಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022’ ಸುಂದರಿ ಸಿನಿ ಶೆಟ್ಟಿಯ ಸಂಪೂರ್ಣ ಪರಿಚಯ : ನಮ್ಮೂರು, ನಮ್ಮೂರು ಹುಡುಗಿ

FotoJet 8 1

ಹಿಂದೂಗಳಾದ್ರೆ ಬೇಕಾದ್ದು ಮಾಡಬಹುದಾ?
ಕಾನೂನು ದುರ್ಬಲವಾಗಿವೆ. ತಕ್ಷಣ ಕ್ರಮ ಕೈಗೊಳ್ಳುವುದಿಲ್ಲ. ಮುಸ್ಲಿಮರಾದರೆ ತಕ್ಷಣ ಕ್ರಮ ತೆಗೆದುಕೊಳ್ಳುತ್ತದೆ. ಒಬ್ಬ ನ್ಯಾಯಮೂರ್ತಿ ಇಡೀ ದೇಶದಲ್ಲಿ ನೂಪುರ್ ಶರ್ಮಾ ಅವರಿಂದ ಗಲಭೆ ಆಗಿದೆ ಎಂದು ಹೇಳುತ್ತಾರೆ. ಹಾಗಾದ್ರೆ ಕಾಳಿಕಾ ಮಾತೆಯ ಕೈಯಲ್ಲಿ ಸಿಗರೇಟ್ ಇಟ್ಟು ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಅವರಿಂದಲೂ ಗಲಾಟೆ ಆಗುತ್ತದೆ ಎಂದು ಹೇಳಿ, ಒದ್ದು ಒಳಗೆ ಹಾಕೋಕಾಗಲ್ವಾ? ಹಿಂದೂಗಳಾದರೆ ಬೇಕಾದ್ದು ಮಾಡಬಹುದಾ? ಎಂದು ಪ್ರಶ್ನಿಸಿದ್ದಾರೆ.

https://twitter.com/manu_cm_342/status/1543900026174259200

ಈ ಬೆಳವಣಿಯಿಂದ ನ್ಯಾಯಾಂಗ ವ್ಯವಸ್ಥೆಯೂ ಕಡೆಗಣನೆಯಾಗುತ್ತಿದೆ. ಎಂ.ಎಫ್.ಹುಸೇನ್ ಹಿಂದೂ ದೇವತೆಗಳನ್ನು ವಿರೂಪಗೊಳಿಸಿದ ಚಿತ್ರೀಕರಣ ಮಾಡಿದ್ದರು. ಆ ಸಂದರ್ಭದಲ್ಲಿಯೂ ಹಿಂದೂ ಸಮಾಜ ನ್ಯಾಯ ಸಮ್ಮತವಾಗಿಯೇ ಹೋರಾಟ ಮಾಡಿತ್ತು. 1 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಇದರಿಂದ ಎಂ.ಎಫ್.ಹುಸೇನ್ ಓಡಿಯೇ ಹೋದ. ಇವತ್ತು ಸ್ವಯಂಪ್ರೇರಿತವಾಗಿ ದಾಖಲಿಸಬೇಕಿತ್ತು. ಸರ್ಕಾರ ಹಾಗೂ ಪೊಲೀಸ್ ಇಲಾಖೆ ದುರ್ಬಲವಾಗಿರುವುದರಿಂದಲೇ ಇದೆಲ್ಲವೂ ಆಗುತ್ತಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯಾ ಪ್ರಕರಣ – ದೆಹಲಿಯಲ್ಲಿ ಗುಂಡು ಹಾರಿಸಿದವನ ಬಂಧನ

ಹಿಂದೂ ಸಮಾಜದ ಇನ್ಮುಂದೆ ಸಹನೆ ಮಾಡದೇ ತಕ್ಕ ಉತ್ತರ ಕೊಡಬೇಕಾಗುತ್ತದೆ. ಈಗಾಗಲೇ ನಿರ್ದೇಶಕಿ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದೇನೆ. ತಮಿಳುನಾಡಿನಲ್ಲೂ ಪ್ರತಿಭಟನೆ ನಡೆಸಲಾಗುವುದು. ಎಲ್ಲ ಮಾಹಿತಿ ಕಲೆಹಾಕಿ ಹೈಕೋರ್ಟ್ನಲ್ಲಿ ಕೇಸ್ ದಾಖಲು ಮಾಡಲಿದ್ದೇವೆ ಎಂದು ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *