CrimeLatestMain PostNational

ಸಿಧು ಮೂಸೆವಾಲಾ ಹತ್ಯಾ ಪ್ರಕರಣ – ದೆಹಲಿಯಲ್ಲಿ ಗುಂಡು ಹಾರಿಸಿದವನ ಬಂಧನ

ನವದೆಹಲಿ: ಪಂಜಾಬ್‌ನ ಖ್ಯಾತ ಗಾಯಕ ಹಾಗೂ ರಾಜಕಾರಣಿ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಕೊಂದ ಆರೋಪಿಯನ್ನು ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿದೆ.

ಸೋಮವಾರ ದೆಹಲಿ ಪೊಲೀಸರ ತಂಡ ಲಾರೆನ್ಸ್ ಬಿಷ್ಣೋಯ್ ಗೋಲ್ಡಿ ಬ್ರಾರ್ ಗ್ಯಾಂಗ್‌ಗೆ ಸೇರಿದ ಇಬ್ಬರು ದರೋಡೆಕೋರರನ್ನು ಬಂಧಿಸಿದ್ದು, ಇಬ್ಬರ ಪೈಕಿ ಅಂಕಿತ್ ಸಿರ್ಸಾ, ಸಿಧು ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದ ಶೂಟರ್‌ಗಳಲ್ಲಿ ಒಬ್ಬ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಿಗ್ 29 ಬದಲಿಸಲು ಮಲೇಷ್ಯಾದ ಮೊದಲ ಆಯ್ಕೆ ಭಾರತದ ತೇಜಸ್

ಪಂಜಾಬಿ ಗಾಯಕನ ಹತ್ಯೆಯಲ್ಲಿ ಭಾಗಿಯಾಗಿದ್ದಲ್ಲದೇ, ಆರೋಪಿ ಅಂಕಿತ್ ರಾಜಸ್ಥಾನದಲ್ಲಿ ನಡೆದ 2 ಕೊಲೆ ಯತ್ನ ಪ್ರಕರಣಗಳಲ್ಲೂ ಭಾಗಿಯಾಗಿದ್ದ. ಬಂಧಿತ ಇನ್ನೋರ್ವ ಆರೋಪಿ ಸಚಿನ್ ಭಿವಾನಿ, ಸಿಧು ಮೂಸೆವಾಲಾ ಹತ್ಯಾ ಪ್ರಕರಣದಲ್ಲಿ 4 ಜನ ಶೂಟರ್‌ಗಳಿಗೆ ಆಶ್ರಯ ನೀಡಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪಿಎಸ್‌ಐ ಅಕ್ರಮ -ADGP ಅಮೃತ್‌ ಪೌಲ್ ಅರೆಸ್ಟ್‌

ಮೇ 29ರಂದು ಸಿಧು ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಹತ್ಯೆಗೂ ಹಿಂದಿನ ದಿನ ಮೂಸೆವಾಲಾ ಅವರ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿತ್ತು. ಸಿಧು ಅವರೊಂದಿಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಸೋದರ ಸಂಬಂಧಿ ಹಾಗೂ ಸ್ನೇಹಿತರು ಕೂಡಾ ದಾಳಿಯ ವೇಳೆ ಗಾಯಗೊಂಡಿದ್ದರು.

Live Tv

Leave a Reply

Your email address will not be published.

Back to top button