ಸೌತ್ ನಟಿ ನಯನತಾರಾಗೆ (Nayanthara) 40 ವರ್ಷವಾದ್ರೂ ಚಿತ್ರರಂಗದಲ್ಲಿ ಅವರಿಗೆ ಬೇಡಿಕೆಯಿದೆ. ಇದೀಗ ಚಿರಂಜೀವಿ ಜೊತೆ ನಟಿಸಲು 18 ಕೋಟಿ ಸಂಭಾವನೆಗೆ ನಟಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ‘ಹಿಟ್ಲರ್ ಕಲ್ಯಾಣ’ ಖ್ಯಾತಿಯ ಶೌರ್ಯ ಶಶಾಂಕ್
ಡೈರೆಕ್ಟರ್ ಅನಿಲ್ ರವಿಪುಡಿ ನಿರ್ದೇಶನದ ಮತ್ತು ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕಾಂಬಿನೇಷನ್ ಚಿತ್ರದಲ್ಲಿ ನಟಿಸಲು ನಯನತಾರಾಗೆ ಅವಕಾಶ ಅರಸಿ ಬಂದಿದೆ. ಪ್ರಮುಖ ಪಾತ್ರದಲ್ಲೇ ನಟಿಸಲು ಅವರಿಗೆ ಆಫರ್ ನೀಡಲಾಗಿದೆ. ಹೀಗಾಗಿ ಈ ಚಿತ್ರದಲ್ಲಿ ನಟಿಸಲು 18 ಕೋಟಿ ರೂ. ಸಂಭಾವನೆಯನ್ನು ನಯನತಾರಾ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಅವರ ಸಂಭಾವನೆ ವಿಚಾರ ಕೇಳಿ ಸಿನಿಮಾ ಮಂದಿ ಶಾಕ್ ಆಗಿದ್ದಾರೆ. ಈ ವಿಚಾರ ಚಿತ್ರರಂಗದಲ್ಲಿ ಹಾಟ್ ಟಾಪಿಕ್ ಆಗಿದೆ. ಇದನ್ನೂ ಓದಿ: ವರುಣ್ ಧವನ್ ಸಿನಿಮಾಗೆ KGF ನಟಿ ಮೌನಿ ರಾಯ್ ಎಂಟ್ರಿ
ನಯನತಾರಾ ಕೇಳಿದಷ್ಟು ಸಂಭಾವನೆಯನ್ನು ನೀಡಲು ಚಿತ್ರತಂಡ ಒಪ್ಪಿಕೊಂಡಿದೆಯಾ. ಅವರು ಈ ಚಿತ್ರದ ಭಾಗವಾಗ್ತಾರಾ? ಎಂಬುದನ್ನು ಚಿತ್ರತಂಡ ತಿಳಿಸುವವರೆಗೂ ಕಾದುನೋಡಬೇಕಿದೆ.
ಅಂದಹಾಗೆ, ಈ ಹಿಂದೆ ‘ಜವಾನ್’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ನಟಿಸಲು 10 ಕೋಟಿ ರೂ. ಸಂಭಾವನೆ ನಟಿ ಪಡೆದಿದ್ದರು ಎನ್ನಲಾದ ಸುದ್ದಿ ಹರಿದಾಡಿತ್ತು.