ತಮಿಳು ಸಿನಿಮಾ ರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಯನತಾರಾ (Nayantara) ಮೇಲೆ ಅಲ್ಲಿನ ನಿರ್ಮಾಪಕರು ಕೋಪಗೊಂಡಿದ್ದಾರೆ. ತಮಗೊಂದು ಬೇರೆಯವರಿಗೊಂದು ರೂಲ್ಸ್ ಮಾಡಿಕೊಳ್ಳುವ ನಯನತಾರಾ ಅವರ ಇಬ್ಬಂದಿತನವನ್ನು ಪ್ರಶ್ನಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕೋಪ ಎಲ್ಲಿಗೆ ತಿರುಗುತ್ತದೆಯೋ ಕಾದು ನೋಡಬೇಕಿದೆ. ಅಷ್ಟಕ್ಕೂ ನಯನತಾರಾ ಮೇಲೆ ನಿರ್ಮಾಪಕರು ಮುನಿಸಿಕೊಳ್ಳುವುದಕ್ಕೆ ಕಾರಣವಿದೆ. ಆ ಕಾರಣವನ್ನು ಕೆಲವರು ಬಹಿರಂಗವಾಗಿಯೇ ಪ್ರಶ್ನೆ ಮಾಡಿದ್ದಾರೆ.
ನಯನತಾರಾ ತಮ್ಮ ಬದುಕಿನಲ್ಲಿ ಒಂದು ಬದ್ಧತೆಯನ್ನು ಮಾಡಿಕೊಂಡಿದ್ದರು. ಅದನ್ನು ಈಗ ಅವರು ತಮ್ಮ ಗಂಡನಿಗಾಗಿ ಮುರಿದಿದ್ದಾರೆ. ಇದೇ ನಿರ್ಮಾಪಕರ ಕೋಪಕ್ಕೆ ಕಾರಣವಾಗಿದೆ. ನಯನತಾರಾ ಸಿನಿಮಾಗಳನ್ನು ಒಪ್ಪಿಕೊಂಡರೆ, ಅಲ್ಲೊಂದು ನಿಬಂಧನೆ ಹಾಕುತ್ತಿದ್ದರು. ತಮ್ಮ ಕೆಲಸ ಕೇವಲ ನಟಿಸುವುದು ಮಾತ್ರ. ಯಾವುದೇ ಕಾರಣಕ್ಕೂ ಸಿನಿಮಾ ಪ್ರಚಾರಕ್ಕೆ ಬರುವುದಿಲ್ಲ ಎಂದು ಅಗ್ರಿಮೆಂಟ್ ಹಾಕಿಕೊಳ್ಳುತ್ತಿದ್ದರು. ಈವರೆಗೂ ಅದನ್ನು ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ಅವರು ಅದನ್ನು ಮುರಿದಿದ್ದಾರೆ. ಇದನ್ನೂ ಓದಿ: ಡೇಂಜರ್ ಝೋನ್ನಲ್ಲಿ 8 ಸ್ಪರ್ಧಿಗಳು, ಯಾರ ಆಟಕ್ಕೆ ಬ್ರೇಕ್ ಹಾಕಲಿದ್ದಾರೆ ಬಿಗ್ ಬಾಸ್
ನಯನತಾರಾ ಪತಿ ವಿಘ್ನೇಶ್ ಶಿವನ್ (Vignesh Sivan) ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಕನೆಕ್ಟ್’ (Connect) ಸಿನಿಮಾ ಇದೇ ತಿಂಗಳು 23ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ನಯನತಾರಾ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರದಲ್ಲಿ ಅವರು ತೊಡಗಿದ್ದಾರೆ. ಚಿತ್ರಮಂದಿರಗಳಿಗೆ ಭೇಟಿ ನೀಡಿ ಪ್ರಚಾರ ಮಾಡುತ್ತಿದ್ದಾರೆ. ಈ ಕೆಲಸವೇ ನಿರ್ಮಾಪಕರನ್ನು ಕೆಣಕಿದೆ. ತಮಗೊಂದು ರೂಲ್ಸ್ ಬೇರೆಯವರಿಗೊಂದು ರೂಲ್ಸ್ ನಯನತಾರಾ ಮಾಡುವುದು ಯಾಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ತಮಿಳು ಸಿನಿಮಾ ರಂಗದಲ್ಲಿ ಈ ರೀತಿ ರೂಲ್ಸ್ (Rules) ಮಾಡಿಕೊಳ್ಳುವುದು ಹೊಸದೇನೂ ಅಲ್ಲ. ಅಜಿತ್ ಅವರು ಇದನ್ನು ಪಾಲಿಸಿಕೊಂಡು ಬಂದಿದ್ದಾರೆ. ಅಜಿತ್ ಯಾವುದೇ ಸಿನಿಮಾದ ಪ್ರಮೋಷನ್ ಮಾಡುವುದಿಲ್ಲ. ನಟಿಸಿ ಹಿಂದಕ್ಕೆ ಸರಿದು ಬಿಡುತ್ತಾರೆ. ನಯನತಾರಾ ಇದನ್ನೇ ಪಾಲಿಸಿಕೊಂಡು ಬಂದಿದ್ದರು. ಆದರೆ, ಇದೀಗ ಗಂಡನ ಸಿನಿಮಾಗಾಗಿ ಆ ರೂಲ್ಸ್ ಅನ್ನು ಬ್ರೇಕ್ ಮಾಡಿದ್ದಾರೆ. ಈ ನಡೆಯೇ ಚರ್ಚೆಗೆ ಕಾರಣವಾಗಿದೆ.