ಚೆನ್ನೈ: ತಮಿಳುನಾಡಿನ (Tamilnadu) 2ನೇ ಅತಿದೊಡ್ಡ ನಗರವಾಗಿರುವ ಕೊಯಮತ್ತೂರಿನಲ್ಲಿ ಅಕ್ಟೋಬರ್ 23ರಂದು ಸಂಭವಿಸಿದ್ದ ಕಾರು ಸ್ಫೋಟ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಅಂದು ದೇಗುಲದ ಎದುರು ಕಾರು ಸ್ಫೋಟದಲ್ಲಿ (Car Blast) ಬಲಿಯಾದ 29 ವರ್ಷದ ಇಂಜಿನಿಯರಿಂಗ್ ಪದವೀಧರನು (Engineering Graduate) ಓರ್ವ ಆತ್ಮಾಹುತಿ ಬಾಂಬರ್ (Suicide Bomb Attack). ದೇಗುಲ ಹಾಗೂ ಅದರ ಸುತ್ತಲಿನ ಮನೆಗಳನ್ನು ಗುರಿಯಾಗಿಸಿಕೊಂಡೇ ದಾಳಿ ನಡೆಸಲು ಆತ ಬಂದಿದ್ದ ಎನ್ನುವ ಸ್ಫೋಟಕ ಮಾಹಿತಿ ತನಿಖೆ ವೇಳೆ ಬಹಿರಂಗಗೊಂಡಿದೆ. ಇದನ್ನೂ ಓದಿ: ಹ್ಯಾಲೋವೀನ್ ಹಬ್ಬದ ಸಂಭ್ರಮ – ಸಿಯೋಲ್‌ನಲ್ಲಿ ಕಾಲ್ತುಳಿಕ್ಕೆ 150 ಮಂದಿ ಬಲಿ
Advertisement
Advertisement
ಮುಬಿನ್ ಪ್ಲ್ಯಾನ್ ಏನಿತ್ತು?
ಕಾರು ಸ್ಫೋಟದಲ್ಲಿ ಬಲಿಯಾದ ಜಮೀಶಾ ಮುಬಿನ್ ನನ್ನು 2019ರಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಪ್ರಕರಣವೊಂದರ ಸಂಬಂಧ ವಿಚಾರಣೆಗೆ ಒಳಪಡಿಸಿತ್ತು. ಈತನೇ ಕೊಯಮತ್ತೂರಿನ ಕೊಟ್ಟೆಮೇಡುವಿನಲ್ಲಿರುವ ಸಂಗಮೇಶ್ವರ ದೇಗುಲದ ಬಳಿ ಕಾರು ಸೋಟಕ್ಕೆ ಅ.23ರ ನಸುಕಿನ ಜಾವ 4ಕ್ಕೆ ಬಲಿಯಾಗಿದ್ದ.
Advertisement
ನೋಡ ನೋಡುತ್ತಿದ್ದಂತೆ ಸುಟ್ಟು ಕರಕಲಾಗಿದ್ದ. ಆದರೆ ಮುಬಿನ್ ಯೋಜಿಸಿದ್ದಂತೆ ಕಾರಿನಲ್ಲಿದ್ದ ಎರಡೂ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರೆ ದೇಗುಲ ಹಾಗೂ ಅದರ ಸುತ್ತಲಿರುವ ಸಾಲು-ಸಾಲು ಮನೆಗಳಿಗೆ ಭಾರಿ ಹಾನಿಯಾಗಿಬಿಡುತ್ತಿತ್ತು. ಆದರೆ ಸ್ಫೋಟಕ್ಕೆ ಸಂಬಂಧಿಸಿದಂತೆ ಆತನಿಗೆ ಅನುಭವ ಇಲ್ಲದೇ ಇರುವ ಕಾರಣ ಘೋರ ದುರಂತ ತಪ್ಪಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಿಗರೇಟು ಸೇದೋಕೆ ಕಾರು ನಿಲ್ಲಿಸಿದ ಮಾಲೀಕ – 75 ಲಕ್ಷ ಹಣದೊಂದಿಗೆ ಚಾಲಕ ಎಸ್ಕೇಪ್
Advertisement
ಈವರೆಗೆ ಐಸಿಸ್ (ISIS) ಬಗ್ಗೆ ಸಹಾನುಭೂತಿ ಹೊಂದಿದ್ದ 6 ಮಂದಿಯನ್ನು ಬಂಧಿಸಲಾಗಿದೆ. ಅವರ ಹೇಳಿಕೆಯ ಪ್ರಕಾರ, ಆತ್ಮಾಹುತಿ ಬಾಂಬ್ ದಾಳಿ ನಡೆಸುವ ತನ್ನ ಯೋಜನೆ ಸಾಕಾರವಾದರೇ ದೇಗುಲದ ಸುತ್ತಲಿನ 50ರಿಂದ 100 ಮೀಟರ್ ಪ್ರದೇಶ ಸಂಪೂರ್ಣ ನಾಶವಾಗಲಿದೆ. ಅದರಲ್ಲಿ ದೇಗುಲ, ವಸತಿ ಕಟ್ಟಡಗಳೂ ಇರಲಿವೆ ಎಂದು ಮುಬಿನ್ ಬಲವಾಗಿ ನಂಬಿದ್ದ ಎನ್ನಲಾಗಿದೆ.
ತನಿಖಾಧಿಕಾರಿಗಳ ಪ್ರಕಾರ, ಮುಬಿನ್ ಐಸಿಸ್ ಸಾಹಿತ್ಯ ಓದಿಕೊಂಡೇ ಮೂಲಭೂತವಾದಿಯಾಗಿದ್ದ. ಆತನಿಗೆ ಭಯೋತ್ಪಾದಕ ಕೃತ್ಯ ಕುರಿತಂತೆ ತರಬೇತಿಯಾಗಿರಲಿಲ್ಲ. ಹೀಗಾಗಿ ಇಂಟರ್ನೆಟ್‌ನಲ್ಲಿ ಬಾಂಬ್ ತಯಾರಿ ಕುರಿತು ಲಭ್ಯವಿರುವ ಮಾಹಿತಿಯನ್ನು ಓದಿ ಸ್ಫೋಟಕ ನಿರ್ವಹಣೆ ಬಗ್ಗೆ ತಿಳಿದುಕೊಂಡಿದ್ದ ಎಂದು ಹೇಳಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಿಜೆಪಿ ನಾಯಕ ಅಣ್ಣಾಮಲೈ (K Annamalai) ಪೊಲೀಸರು ಇದನ್ನು ಆತ್ಮಾಹುತಿ ಬಾಂಬ್ ದಾಳಿ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದರು.