CrimeInternationalLatestLeading NewsMain Post

ಹ್ಯಾಲೋವೀನ್ ಹಬ್ಬದ ಸಂಭ್ರಮ – ಸಿಯೋಲ್‌ನಲ್ಲಿ ಕಾಲ್ತುಳಿಕ್ಕೆ 150 ಮಂದಿ ಬಲಿ

- 100ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

ಸಿಯೋಲ್: ದಕ್ಷಿಣ ಕೊರಿಯಾ (SouthKorea)ರಾಜಧಾನಿ ಸಿಯೋಲ್‌ನಲ್ಲಿ (Seoul) ಭೀಕರ ಕಾಲ್ತುಳಿಕ್ಕೆ 150 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ.

ಗಾಯಗೊಂಡ ಹಲವರಿಗೆ ಹೃದಯಾಘಾತ (Heart Attack) ಆಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸಿಯೋಲ್‌ನಲ್ಲಿ ಹ್ಯಾಲೋವೀನ್ ಹಬ್ಬದ (Halloween Festivities) ಆಚರಣೆ ವೇಳೆ ಈ ದುರಂತ ಸಂಭವಿಸಿದೆ. ಇಟಾವಾನ್ ಲೆಸ್ಸರ್ ಜಿಲ್ಲೆಯ ಕಿರಿದಾದ ರಸ್ತೆಯಲ್ಲಿ ಜನಸಂದಣಿ ಜಮಾಯಿಸಿದ್ದರಿಂದ ಕಾಲ್ತುಳಿತಕ್ಕೆ ಸಿಕ್ಕಿ ಈ ದುರಂತ ಸಂಭವಿಸಿದೆ. ಇದನ್ನೂ ಓದಿ: ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನ – ತುಮಕೂರಿಗೂ ಲಗ್ಗೆ ಇಟ್ಟ ನಕಲಿ ಭಗವದ್ಗೀತೆ ಪುಸ್ತಕ ಜಾಲ

ಏನಿದು ಘಟನೆ?
ಹಬ್ಬದ ಸಂಭ್ರಮಕ್ಕೆಂದು ಮಾರುಕಟ್ಟೆಯಲ್ಲಿ ಸೇರಿದ್ದ 100ಕ್ಕೂ ಹೆಚ್ಚು ಮಂದಿ ಏಕಾಏಕಿ ಕುಸಿದು ಬಿದ್ದಿದ್ದರು. ಒಂದು ಲಕ್ಷಕ್ಕೂ ಅಧಿಕ ಮಂದಿ ಮಾರುಕಟ್ಟೆಯಲ್ಲಿದ್ದರು. ಈ ವೇಳೆ ನೂರಾರು ಮಂದಿ ಏಕಾಏಕಿ ಉಸಿರಾಟದ ಸಮಸ್ಯೆಯಿಂದ ಕುಸಿದು ಬಿದ್ದಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ಇದನ್ನೂ ಓದಿ: ಹಬ್ಬದ ಸಂಭ್ರಮಕ್ಕೆ ಮಾರ್ಕೆಟ್‍ನಲ್ಲಿದ್ದ 100ಕ್ಕೂ ಅಧಿಕ ಮಂದಿಗೆ ಹೃದಯ ಸ್ತಂಭನ

ಕಳೆದರಡು ವರ್ಷಗಳಿಂದ ಕೊರೊನಾದಿಂದಾಗಿ ದಕ್ಷಿಣ ಕೊರಿಯಾದಲ್ಲಿ ಸ್ಥಗಿತಗೊಂಡಿದ್ದ ಹ್ಯಾಲೋವೀನ್ ಹಬ್ಬವನ್ನು (Halloween Festivities) ಈ ವರ್ಷ ಆಚರಿಸಲು ಸರ್ಕಾರ ಅವಕಾಶ ನೀಡಿದೆ. ಹಾಗಾಗಿ ಜನ ಹಬ್ಬದ ಖರೀದಿಗಾಗಿ ಮಾರುಕಟ್ಟೆಯಲ್ಲಿ (Market) ಸೇರಿದ್ದರು. ಈ ವೇಳೆ ಹಲವರಿಗೆ ಹೃದಯಾಘಾತ (HeartAttack) ಉಂಟಾಯಿತು. 81 ಮಂದಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ 150 ಮಂದಿ ಬಲಿಯಾಗಿದ್ದು, 100ಕ್ಕೂ ಹೆಚ್ಚು ಮಂದಿ ಗಂಭಿರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಇದನ್ನೂ ಓದಿ: ನನ್ನ ಭಾಗವಹಿಸುವಿಕೆ ಬಯಸಿದ್ರೆ ರಾಜಕೀಯಕ್ಕೆ ಬರುವೆ – ಕಂಗನಾ ಬಿಗ್ ಸ್ಟೇಟ್‌ಮೆಂಟ್

ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಹ್ಯಾಲೋವೀನ್ ಹಬ್ಬವನ್ನು ಆಚರಿಸಲಾಗುತ್ತದೆ.

Live Tv

Leave a Reply

Your email address will not be published. Required fields are marked *

Back to top button