ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮ ಟ್ವಿಟ್ಟರ್ ಪ್ರೊಫೈಲ್ ಫೋಟೋವನ್ನು ಬದಲಾಯಿಸಿದ್ದಾರೆ.
ಹೌದು, ಎಂ.ಕೆ ಸ್ಟಾಲಿನ್ ಅವರು, ಭಾರತದ ತ್ರಿವರ್ಣ ಧ್ವಜದೊಂದಿಗೆ ಎಂ.ಕರುಣಾನಿಧಿ ಅವರು ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಮೂಲಕ ಧ್ವಜಾರೋಹಣ ಹಕ್ಕನ್ನು ಸಿಎಂಗಳು ಹೊಂದಿರುತ್ತಾರೆ ಎಂಬುವುದನ್ನು ತೋರಿಸಿ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Advertisement
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತ್ರಿವರ್ಣ ಧ್ವಜದ ಫೋಟೋವನ್ನು ಹಂಚಿಕೊಂಡ ಕೆಲವೇ ದಿನಗಳಲ್ಲಿ ಆಡಳಿತಾರೂಢ ಡಿಎಂಕೆ ಅಧ್ಯಕ್ಷರಾಗಿರುವ ಸ್ಟಾಲಿನ್ ಅವರು, ಎಲ್ಲರೂ ಸೇರಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗುರುತಿಸಿ, ಎಲ್ಲರೂ ಒಟ್ಟಾಗಿ ಆಚರಿಸೋಣ ಎಂದು ಜನರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಯವರು ಕಂಡರೆ ನುಗ್ಗಿ ಹೊಡೆಯುತ್ತೇವೆ: ಕುಲಕರ್ಣಿ
Advertisement
ஆகஸ்ட் 15-ஆம் நாளன்று மாநில முதலமைச்சர்கள் கொடியேற்றும் உரிமையை 1974-ஆம் ஆண்டு பெற்றுத் தந்தவர் முத்தமிழறிஞர் கலைஞர்!
#NewProfilePic pic.twitter.com/mWgAtmbQ9L
— M.K.Stalin (@mkstalin) August 4, 2022
Advertisement
1974ರ ಆಗಸ್ಟ್ 15ರಂದು ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ರಾಜ್ಯದ ಮುಖ್ಯಮಂತ್ರಿಗಳ ಹಕ್ಕನ್ನು ಮುತಮಿಳ್ ಅರಿಗ್ನರ್ (ತಮಿಳು ವಿದ್ವಾಂಸ) ಕಲೈಂಜರ್ ಅವರು ಖಚಿತಪಡಿಸಿದರು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೆ ಟಾಪ್‌ಲೆಸ್ ಅವತಾರದಲ್ಲಿ ಬಂದ ಉರ್ಫಿ ಜಾವೇದ್: ನೆಟ್ಟಿಗರಿಂದ ನಟಿಗೆ ಕ್ಲಾಸ್
ಫೋಟೋದಲ್ಲಿ ದಿವಂಗತ ಕರುಣಾನಿಧಿ ಅವರನ್ನು ಅಧಿಕಾರಿಗಳು ಸುತ್ತುವರೆದಿದ್ದು, ಮೆಟ್ಟಿಲುಗಳನ್ನು ಇಳಿಯುತ್ತಿರುವುದನ್ನು ಕಾಣಬಹುದಾಗಿದೆ. ಬಹುಶಃ ರಾಜ್ಯ ಸೆಕ್ರೆಟರಿಯೇಟ್ ಇರುವಲ್ಲಿ ಫೋರ್ಟ್ ಸೇಂಟ್ ಜಾರ್ಜ್ ಇದೆ. ಭಾರತದ ರಾಷ್ಟ್ರಧ್ವಜವು ಹಿಂಭಾಗದಲ್ಲಿ ಎತ್ತರದ ಮಾಸ್ಟ್ ಮೇಲೆ ಹಾರುತ್ತಿರುವುದನ್ನು ನೋಡಬಹುದಾಗಿದೆ.