ನವದೆಹಲಿ: ಮೂರು ದಿನಗಳ ಅಧಿಕೃತ ಭೇಟಿಯನ್ನು ಮುಗಿಸಿ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (Joseph Vijay) ಅವರು ದೆಹಲಿಯಿಂದ ಹೊರಟಿದ್ದಾರೆ. ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲು ಉಡುಪಿಯತ್ತ ಸಿಎಂ ಪ್ರಯಾಣ ಬೆಳೆಸಿದ್ದಾರೆ.
ಇಂದು ಬೆಳಗ್ಗೆ ಸಿಎಂ ವಿಜಯ್ ಅವರು ದೆಹಲಿಯ ತಮಿಳುನಾಡು ಭವನದಿಂದ ಹೊರಟರು. ಬಳಿಕ ದೆಹಲಿ ಏರ್‌ಪೋರ್ಟ್‌ಗೆ ಬಂದು ಇಳಿದಿದ್ದು, ಕರ್ನಾಟಕದ ಮಂಗಳೂರಿನ ಕಡೆ ಪ್ರಯಾಣ ಬೆಳೆಸಲಿದ್ದಾರೆ.
#WATCH | Delhi: Chief Minister of Tamil Nadu C. Joseph Vijay arrives at the Delhi Airport. pic.twitter.com/iRgIAnhuf0
— ANI (@ANI) June 12, 2026
ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಿಎಂ ವಿಜಯ್ ಉಡುಪಿಯಲ್ಲಿ ಕೊಲ್ಲೂರು ಮೂಕಾಂಬಿಕಾ (Kollur Mookambika Temple) ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಲಿದ್ದಾರೆ. ಬಳಿಕ ತಮಿಳುನಾಡಿಗೆ ವಾಪಸ್ ಆಗಲಿದ್ದಾರೆ.
ಮೂರು ದಿನ ದೆಹಲಿ ಪ್ರವಾಸ
ಜೂ.10 ರಿಂದ ಮೂರು ದಿನಗಳ ಕಾಲ ತಮಿಳುನಾಡು ಸಿಎಂ ವಿಜಯ್ ದೆಹಲಿ ಪ್ರವಾಸ ಕೈಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಸಿಎಂ ಭಾಗವಹಿಸಿದ್ದರು.
