ದಕ್ಷಿಣ ಭಾರತದ ನಟಿ ನಿವೇತಾ ಪೇತುರಾಜ್ (Nivetha Pethuraj) ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ಖಾಸಗಿ ವಿಚಾರಗಳಿಂದ ಹೆಚ್ಚೆಚ್ಚು ಸುದ್ದಿಯಾಗ್ತಿದ್ದಾರೆ. ಇದೀಗ ಬಾಯ್‌ಫ್ರೆಂಡ್ ತಾವು ಮೋಸ (Cheat) ಹೋಗಿರೋದಾಗಿ ನಟಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:ತಪ್ಪು ಮಾಡಿದ್ದಾಗಿ ಒಪ್ಪಿಕೊಂಡ ನಟಿ ಸಮಂತಾ
ನಾವು ಏನಾದರೂ ನೆಗೆಟಿವ್ ಆಗಿ ಯೋಚಿಸಿದರೆ ಅದು ಸಂಭವಿಸುತ್ತದೆ. ನನ್ನ ಗೆಳೆಯ ನನಗೆ ಮೋಸ ಮಾಡುತ್ತಾನೆ ಎಂದು ಭಾವಿಸಿದೆ. ಅದೇ ಸಂಭವಿಸಿತು. ಆತ ನನಗೆ ಮೋಸ ಮಾಡಿ ಬೇರೆ ಹುಡುಗಿಯ ಜೊತೆ ಹೋಗಿದ್ದಾನೆ ಎಂದು ಬೇಸರದಿಂದ ನಟಿ ನಿವೇತಾ ಮಾತನಾಡಿದ್ದಾರೆ.
ತಮಿಳಿನ ‘ಒರು ನಾಳ್ ಕೂತು’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ನಟಿ ಪಾದಾರ್ಪಣೆ ಮಾಡಿದರು. ಬಳಿಕ ತಮಿಳು ಮತ್ತು ತೆಲುಗಿನಲ್ಲಿ ನಟಿ ಬ್ಯುಸಿಯಾದರು.