ಹೈದರಾಬಾದ್: ನನ್ನನ್ನು ಮದುವೆಯಾಗಲು ಯಾವುದೇ ಷರತ್ತುಗಳಿಲ್ಲ, ಈ ನಂಬರಿಗೆ ಕರೆ ಮಾಡಿ ಎಂದು ವಿಡಿಯೋ ಕಾಲ್ ಮೂಲಕ ಹೇಳಿಕೊಂಡಿದ್ದ ತಮಿಳು ನಟ ಆರ್ಯನಿಗೆ ಕೊನೆಗೂ ಮದುವೆ ಫಿಕ್ಸ್ ಆಗಿದೆ.
ಹೌದು. ಪ್ರೇಮಿಗಳ ದಿನದಂದೇ ನಟ ತಮ್ಮ ಮದುವೆ ಹಾಗೂ ತಾನೂ ವಿವಾಹವಾಗುತ್ತಿರುವ ಹುಡುಗಿಯ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ತಾವು ಮದುವೆಯಾಗುತ್ತಿರುವ ಹುಡುಗಿ ಜೊತೆಗಿನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯಾವುದೇ ಷರತ್ತಿಲ್ಲ, ನನ್ನನ್ನು ಮದ್ವೆಯಾಗಲು ಈ ನಂಬರಿಗೆ ಕರೆ ಮಾಡಿ: ನಟ ಆರ್ಯ
Advertisement
Advertisement
ಟ್ವೀಟ್ ನಲ್ಲೇನಿದೆ..?
ನಟ ಆರ್ಯ ಅವರು ಸಯ್ಯೇಷಾ ಸೈಗಲ್ ಜೊತೆ ಮಾರ್ಚ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿರುವ ಕುರಿತು ಟ್ವಿಟ್ ಮಾಡುವ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. “ಹ್ಯಾಪಿ ವ್ಯಾಲೆಂಟೈನ್ಸ್ ಡೇ ಮತ್ತು ಆಶೀರ್ವಾದಿಸಿ” ಎಂದು ಬರೆದು ತಾವು ಮದುವೆಯಾಗುತ್ತಿರುವ ಹುಡುಗಿ ಜೊತೆಗಿರುವ ಫೋಟೋ ಹಾಕಿದ್ದಾರೆ.
Advertisement
“ನಮ್ಮ ಪೋಷಕರು ಮತ್ತು ಕುಟುಂಬದ ಆಶೀರ್ವಾದದಿಂದ, ನಿಮ್ಮೊಂದಿಗೆ ನಮ್ಮ ಬಾಳಿನ ಅತ್ಯಂತ ಸುಂದರವಾದ ದಿನವನ್ನು ಹಂಚಿಕೊಳ್ಳಲು ನಾವು ಬಯಸುತ್ತೇವೆ. ನಾವು ಮುಂದಿನ ತಿಂಗಳು ಮಾರ್ಚ್ ನಲ್ಲಿ ಮದುವೆಯಾಗುತ್ತಿದ್ದೇವೆ. ನಮ್ಮ ಹೊಸ ಜೀವನ ಪ್ರಯಾಣಕ್ಕೆ ನಿಮ್ಮ ಪ್ರೀತಿಯ ಆಶೀರ್ವಾದ ಬೇಕೆಂದು” ದಂಪತಿ ಮನವಿ ಮಾಡಿಕೊಂಡಿದ್ದಾರೆ.
Advertisement
ಆರ್ಯ ಮತ್ತು ಸಯ್ಯೇಷಾ ಮದುವೆಯಾಗುತ್ತಿರುವ ಬಗ್ಗೆ ತಿಳಿಸಿದ್ದು, ಆದರೆ ತಮ್ಮ ಮದುವೆಯ ದಿನಾಂಕವನ್ನು ಮಾತ್ರ ಬಹಿರಂಗಪಡಿಸಲಿಲ್ಲ. ಕಳೆದ ತಿಂಗಳಿನಿಂದ ಆರ್ಯ ಮತ್ತು ಸಯ್ಯೇಷಾ ಮದುವೆಯಾಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಈಗ ಸ್ವತಃ ಆರ್ಯ ಅವರೇ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಮಾರ್ಚ್ 9 ರಂದು ಆರ್ಯ ಹಾಗೂ ಸಯ್ಯೇಷಾ ಮದುವೆ ಮುಸ್ಲಿಂ ಸಂಪ್ರದಾಯದಂತೆ ನಡೆಯಲಿದೆ ಎಂದು ತಿಳಿದುಬಂದಿದೆ.
ಸಯ್ಯೇಷಾ ಸೈಗಲ್ ಯಾರು?
ಸಯ್ಯೇಷಾ ಅವರು ನಟ-ನಿರ್ಮಾಪಕ ಸುಮೇತ್ ಸೈಗಲ್ ಮತ್ತು ನಟಿ ಶಹೀನ್ ಬಾನು ಅವರ ಮಗಳಾಗಿದ್ದು, ಶಹೀನ್ ಅವರು ‘ಮಹಾ-ಸಂಗ್ರಮ್’ ಮತ್ತು’ ಆಯಿ ಮಿಲಾನ್ ಕಿ ರಾತ್’ ನಂತಹ ಸಿನಿಮಾಗಲ್ಲಿ ಹೆಸರುವಾಸಿಯಾಗಿದ್ದಾರೆ. 2018 ರ ‘ಘಜಿನಿಕಾಂತ್’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಯ್ಯೇಷಾ ಅವರು ನಟ ಆರ್ಯರನ್ನು ಭೇಟಿಯಾಗಿದ್ದರು.
Happy Valentines Day ???? #Blessed ???? @sayyeshaa pic.twitter.com/WjRgOGssZr
— Arya (@arya_offl) February 14, 2019
ಸದ್ಯಕ್ಕೆ ಈ ಜೋಡಿಯು ಮೋಹನ್ ಲಾಲ್ ಮತ್ತು ಸೂರ್ಯ ಅಭಿನಯಿಸಿರುವ ‘ಕಾಪ್ಪಾನ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಕಾಪ್ಪಾನ್’ ಅಕ್ಟೋಬರ್ 2019 ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv