ತಮನ್ನಾ ಕುಣಿದ ‘ಕಾವಾಲ’ ಸಾಂಗ್ ಸೆನ್ಸೇಷನ್: ಎಲ್ಲೆಲ್ಲೂ ಹುಕ್ ಸ್ಟೆಪ್ ಕ್ರೇಜ್

Public TV
2 Min Read
kavala song tamannaah

ಭಾರತೀಯ ಸಿನಿಮಾ ರಂಗದಲ್ಲಿ ಮತ್ತೊಂದು ಹಾಡು ನೋಡುಗರಿಗೆ  ಹುಚ್ಚೆಬ್ಬಿಸಿದೆ. ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕನ್ನಡದ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಕಾಂಬಿನೇಷನ್ ನ  ‘ಜೈಲರ್’ ಸಿನಿಮಾದ ಕಾವಾಲ ಸಾಂಗ್ ಬಿಡುಗಡೆಯಾಗಿದ್ದು, ಆ ಹಾಡಿಗೆ ಲಕ್ಷಾಂತರ ಜನರು ಹುಕ್ ಸ್ಟೆಪ್ (Hook Step) ಹಾಕಿದ್ದಾರೆ. ಭಾರತದಾದ್ಯಂತ ಈ ಹಾಡಿಗೆ ಕುಣಿದು, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾಗೆ ಅಪ್ ಲೋಡ್ ಮಾಡುತ್ತಿದ್ದಾರೆ.

tamannaah bhatia 3

ಬೋಲ್ಡ್ ಪಾತ್ರಗಳ ಮೂಲಕ ಸಾಕಷ್ಟು ಸುದ್ದಿಯಲ್ಲಿರುವ ನಟಿ ತಮನ್ನಾ ಜೈಲರ್ (Jailer) ಸಿನಿಮಾದಲ್ಲೂ ಅದನ್ನು ಮುಂದುವರೆಸಿದ್ದಾರೆ. ಜೈಲರ್ ಸಿನಿಮಾದ  ಕಾವಾಲ ಹಾಡಿನಲ್ಲಿ ನಟಿ ಮೈಚಳಿ ಬಿಟ್ಟು ಕುಣಿದಿದ್ದಾರೆ. ತಮನ್ನಾ (Tamannaah) ಮೈಮಾಟಕ್ಕೆ ಅಭಿಮಾನಿಗಳು ಸುಸ್ತಾಗಿದ್ದಾರೆ.

tamannaah bhatia 1

ರಜನಿಕಾಂತ್ (Rajinikanth) ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ಸಿನಿಮಾ ಇದಾಗಿದ್ದು,  ಶೂಟಿಂಗ್ ಕಂಪ್ಲೀಟ್ ಆಗಿದೆ. ಮೊನ್ನೆಯಷ್ಟೇ ಈ ಸಿನಿಮಾದ ಡಬ್ಬಿಂಗ್ ಕಾರ್ಯದಲ್ಲೂ ಶಿವರಾಜ್ ಕುಮಾರ್ ಭಾಗಿಯಾಗಿದ್ದರು. ಸಿನಿಮಾದ ಪ್ರಚಾರಕ್ಕೂ ಮುನ್ನ, ಸಿನಿಮಾದ ಮೊದಲ ಹಾಡನ್ನು (Song) ಚಿತ್ರತಂಡ ರಿಲೀಸ್ ಮಾಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹಾಡನ್ನು ಅಭಿಮಾನಿಗಳು ಸವಿದಿದ್ದಾರೆ.

tamannaah bhatia 2

ಜೈಲರ್ ಸಿನಿಮಾದ ಹಾಡು ಯಾವಾಗ ಎಂದು ರಜನಿಕಾಂತ್ ಅಭಿಮಾನಿಗಳು ಕೇಳುತ್ತಿದ್ದರು. ಬೇಗ ಹಾಡು ರಿಲೀಸ್ ಮಾಡಿ ಎನ್ನುವುದು ಅವರ ಆಗ್ರಹ ಕೂಡ ಆಗಿತ್ತು. ಕೊನೆಗೂ ಚಿತ್ರತಂಡ ಅಭಿಮಾನಿಗಳ ಧ್ವನಿಗೆ ಸ್ಪಂದಿಸಿದೆ. ಮೊದಲ ಹಾಡನ್ನು ರಿಲೀಸ್ ಮಾಡುವ ಮೂಲಕ ಅಭಿಮಾನಿಗಳನ್ನು ಕುಣಿಸಿದೆ.  ಇದನ್ನೂ ಓದಿ:ಕನ್ನಡತಿ ಶ್ರೀಲೀಲಾ ಹಿಂದಿಕ್ಕಿದ ‘ಸೀತಾರಾಮಂ’ ಬೆಡಗಿ ಮೃಣಾಲ್

tamannaah bhatia 4

ಶಿವರಾಜ್ ಕುಮಾರ್ (Shivaraj Kumar) ಮತ್ತು ರಜನಿ ಕಾಂಬಿನೇಷನ್ ನ ಮೊದಲ ಸಿನಿಮಾ ಜೈಲರ್. ಇದು ಶಿವಣ್ಣನ 2ನೇ ತಮಿಳು ಸಿನಿಮಾ ಕೂಡ ಹೌದು. ರಜನಿಕಾಂತ್ ಅಳಿಯ ಧನುಷ್ ಜೊತೆ ಶಿವಣ್ಣ ಕ್ಯಾಪ್ಟರ್ ಮಿಲ್ಲರ್ ಎನ್ನುವ ಮತ್ತೊಂದು ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾದ ಶೂಟಿಂಗ್ ಕೂಡ ಮುಗಿದಿದೆ. ಎರಡು ತಮಿಳು ಸಿನಿಮಾದಲ್ಲಿ ಶಿವಣ್ಣ ಏಕಕಾಲದಲ್ಲಿ ನಟಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

 

ಜೈಲರ್ ಸಿನಿಮಾದ ವಿಶೇಷತೆ ಅಂದರೆ, ಕರ್ನಾಟಕದಲ್ಲೂ ಈ ಚಿತ್ರವನ್ನು ಶೂಟ್ ಮಾಡಲಾಗಿದೆ. ಮೈಸೂರು, ಮಂಗಳೂರು ಸೇರಿದಂತೆ ಹಲವು ಕಡೆ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಕರ್ನಾಟಕದ ಕಥೆಯನ್ನೂ ಈ ಸಿನಿಮಾ ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಚಿತ್ರತಂಡ ಈ ಕುರಿತು ಯಾವುದೇ ಮಾಹಿತಿಯನ್ನೂ ನೀಡಿಲ್ಲ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article