Recent News

2 years ago

ರೈಲ್ವೆ ಸ್ಟೇಷನ್‍ನಲ್ಲಿ 15 ಅಡಿ ಉದ್ದದ ಹೆಬ್ಬಾವು ಕಂಡು ಹೌಹಾರಿದ್ರು ಜನ- ವಿಡಿಯೋ ವೈರಲ್

ಶ್ರೀನಗರ: ಸುಮಾರು 15 ಅಡಿ ಉದ್ದದ ಹೆಬ್ಬಾವೊಂದು ಜಮ್ಮುವಿನ ಕಾತ್ರ ರೈಲ್ವೇ ನಿಲ್ದಾಣದಲ್ಲಿ ಕಾಣಿಸಿಕೊಂಡಿದೆ. ಇದನ್ನು ವೈಷ್ಣೋ ದೇವಿಯ ಭಕ್ತರು ನೋಡಿ ಭಯಭೀತರಾಗಿದ್ದರು. ಈ ಘಟನೆ ಸುಮಾರು 2 ವಾರಗಳ ಹಿಂದೆಯೇ ನಡೆದಿದ್ದು, ಅದರ ವಿಡಿಯೋ ಇಂದಿಗೂ ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದ ಪ್ರಕಾರ, ಈ ಘಟನೆ ದೀಪಾವಳಿ ಹಬ್ಬದ ಮುಂಚೆಯೇ ಅಂದರೆ ಅಕ್ಟೋಬರ್ 18 ರಂದು ನಡೆದಿದೆ. ಜನಸಂದಣಿ ಇದ್ದ ರೈಲ್ವೇ ನಿಲ್ದಾಣದ ಒಂದು ಕಂಬಕ್ಕೆ ಬೃಹದಾಕಾರದ ಹೆಬ್ಬಾವು ಸುತ್ತಿಕೊಂಡಿರುವುದು ಸೆರೆಯಾಗಿದೆ. ಸ್ಟೇಷನ್ […]

2 years ago

ಮೃಗಾಲಯದಲ್ಲಿ ಪಕ್ಷಿಗಳನ್ನು ತಿನ್ನುತ್ತಿದ್ದ ಹಾವಿನ ಸ್ಥಳಾಂತರ

ಚಿತ್ರದುರ್ಗ: ಜಿಲ್ಲೆಯಲ್ಲಿರುವ ಕಿರು ಮೃಗಾಲಯದಲ್ಲಿ ಪಕ್ಷಿಗಳ ಮೊಟ್ಟೆ ಹಾಗು ಪಾರಿವಾಳ ನುಂಗುತಿದ್ದ ನಾಗರಹಾವನ್ನು ಉರಗತಜ್ಞರ ಸಹಾಯದಿಂದ ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದೆ. ಉರಗತಜ್ಞ ಚೇತನ್ ಅವರ ಸಹಾಯದಿಂದ ನಾಗರವನ್ನು ಸೆರೆ ಹಿಡಿದಿದ್ದು, ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯದ ಆವರಣದಿಂದ ಸ್ಥಳಾಂತರಿಸಿ ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಮೃಗಾಲಯದ ಆವರಣದಲ್ಲಿ ಈ ಹಾವು ಹಲವು ದಿನಗಳಿಂದ ನಿರ್ಭಯವಾಗಿ...

ಕೆಂಡ ಹಾಯುವಾಗ ಆಕಸ್ಮಿಕವಾಗಿ ಮುಗ್ಗರಿಸಿ ಬಿದ್ದ ಮಹಿಳೆ

2 years ago

ಬೆಂಗಳೂರು: ಕೆಂಡ ಹಾಯುವಾಗ ಆಕಸ್ಮಿಕವಾಗಿ ಮುಗ್ಗರಿಸಿ ಬಿದ್ದು ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ನಗರದ ಟಿ.ದಾಸರಹಳ್ಳಿಯ ಬಾಗಲಗುಂಟೆ ಬಳಿ ಘಟನೆ ನಡೆದಿದೆ. ಕೆಂಡಕ್ಕೆ ಬಿದ್ದ ಮಹಿಳೆಯನ್ನು ಗೌರಮ್ಮ ಎಂದು ಗುರುತಿಸಲಾಗಿದೆ. ಬಾಗಲಗುಂಟೆ ಗ್ರಾಮದೇವತೆ ಉತ್ಸವದ ವೇಳೆ ಅವಘಡ ಸಂಭವಿಸಿದೆ. ಗೌರಮ್ಮ...

ಸಿಂಹದ ಮರಿ ಜೊತೆ ಸೆಲ್ಫೀ ತೆಗೆದು ಎಫ್‍ಬಿಯಲ್ಲಿ ಪೋಸ್ ಕೊಟ್ಟಿದ್ದ ವ್ಯಕ್ತಿ ಪೊಲೀಸರ ವಶಕ್ಕೆ

2 years ago

ಪ್ಯಾರಿಸ್: ಸಿಂಹದ ಮರಿಯನ್ನು ಬಾಡಿಗೆಗೆ ಪಡೆದು ಅದರ ಜೊತೆ ಸೆಲ್ಫೀ ತೆಗೆದುಕೊಂಡು ಫೇಸ್‍ಬುಕ್‍ನಲ್ಲಿ ಶೋ ಆಫ್ ಮಾಡಿದ್ದ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದ ಘಟನೆ ಫ್ರಾನ್ಸ್‍ನಲ್ಲಿ ನಡೆದಿದೆ. 24 ವಯಸ್ಸಿನ ವ್ಯಕ್ತಿಯೊಬ್ಬ ಸಿಂಹದ ಮರಿ ಜೊತೆ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಿಗೆ...

ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ – ಬಳ್ಳಾರಿಯಲ್ಲಿ ಮರವೇರಿ ಕುಳಿತಿದ್ದ ಅಂಗವಿಕಲ ರೈತನ ರಕ್ಷಣೆ

2 years ago

ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರಿದಿದೆ. ತಡರಾತ್ರಿಯೂ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಇನ್ನೂ ಬಿಸಿಲ ನಗರಿ ಬಳ್ಳಾರಿಯಲ್ಲಿ ಭೀಕರ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸಿಂಧವಾಳ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ರೈತರೊಬ್ಬರನ್ನು ರಕ್ಷಣೆ ಮಾಡಲಾಗಿದೆ. ಗುರುವಾರ ಎಂದಿನಂತೆ...

ಗದಗ, ದಾವಣಗೆರೆಯಲ್ಲಿ ಭಾರೀ ಮಳೆ: ಹಳ್ಳದ ನೀರಿನಲ್ಲಿ ಸಿಲುಕಿಕೊಂಡವು ವಾಹನಗಳು

2 years ago

ಗದಗ/ದಾವಣಗೆರೆ: ಪ್ರತಿದಿನ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗುತ್ತಲೇ ಇವೆ. ಮಳೆಯಿಂದಾಗಿ ಕಾರೊಂದು ಕೊಚ್ಚಿ ಹೋಗಿದ್ದು, ಅದನ್ನು ಸ್ಥಳೀಯರು ಹೊರ ತೆಗೆದಿರುವ ಘಟನೆ ದಾವಣಗೆರೆ ತಾಲೂಕಿನ ಕುಂಟಪಾಲನಹಳ್ಳಿಯ ಸಮೀಪದಲ್ಲಿ ನಡೆದಿದೆ. ಮಂಗಳವಾರ ಪ್ರೊ.ನಿಂಗಪ್ಪ ಎಂಬುವವರ ಕಾರನ್ನು ಚಾಲಕ ಸಂಬಂಧಿಕರನ್ನು ಕರೆತರಲು ದಾವಣಗೆರೆಯಿಂದ ಲೋಕಿಕೆರೆ ಗ್ರಾಮಕ್ಕೆ...

ದೇವನಹಳ್ಳಿ ಏರ್ಪೋಟ್ ಟೋಲ್ ಬಳಿ ಧಗಧಗನೆ ಹೊತ್ತಿ ಉರಿದ ಮಾರುತಿ 800

2 years ago

ಬೆಂಗಳೂರು: ಏರ್ಪೋಟ್ ರಸ್ತೆ ಮಧ್ಯೆದಲ್ಲಿಯೇ ಮಾರುತಿ 800 ಕಾರು ಇದ್ದಕ್ಕಿದ್ದಾಗೆ ಹೊತ್ತಿ ಉರಿದಿರುವ ಘಟನೆ ದೇವನಹಳ್ಳಿ ಬಳಿಯ ಏರ್ಪೋಟ್ ಟೋಲ್ ಬಳಿ ನಡೆದಿದೆ. ಮಾರತ್ತಹಳ್ಳಿಯ ಜಗದೀಶ್ ಎಂಬವರು ತಮ್ಮ ಕಾರಿನಲ್ಲಿ ಬಳ್ಳಾರಿ ಕಡೆ ಹೋಗುತ್ತಿದ್ದರು. ದಾರಿ ಮಧ್ಯ ಅಂದರೆ ಬೆಂಗಳೂರು ಗ್ರಾಮಾಂತರ...

ಲಾರಿಗೆ ಹಿಂಬದಿಯಿಂದ ಮಿನಿ ಲಾರಿ ಡಿಕ್ಕಿ – ಇಬ್ಬರಿಗೆ ಗಂಭೀರ ಗಾಯ

2 years ago

ಹುಬ್ಬಳ್ಳಿ: ವೇಗವಾಗಿ ಬಂದ್ ಮಿನಿಲಾರಿ ಇನ್ನೊಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಕ್ಲೀನರ್ ಮಿನಿ ಲಾರಿಯಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಘಟನೆ ಹುಬ್ಬಳ್ಳಿಯ ಗಬ್ಬೂರು ಕ್ರಾಸ್ ಬಳಿ ನಡೆದಿದೆ. ಹಾವೇರಿ ಮೂಲದ ಮಿನಿ...