ಮಂಡ್ಯ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಜಿಂಕೆಯನ್ನು ಗ್ರಾಮಸ್ಥರು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿರುವ ಘಟನೆ ಜಿಲ್ಲೆ ನಾಗಮಂಗಲ ತಾಲೂಕಿನ ಕೆಸವಿನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಜಿಂಕೆಯೊಂದು ಬೆಳಗ್ಗೆಯಿಂದ ಆಹಾರ ಅರಸಿ ಅಡ್ಡಾಡುತ್ತಿತ್ತು. ಗ್ರಾಮದಲ್ಲಿ ಜಿಂಕೆ ಸುತ್ತಾಡುತ್ತಿರುವುದನ್ನು ಗ್ರಾಮದ ನಾಯಿಗಳು ನೋಡಿ ಬೊಗಳಲಾರಂಭಿಸಿದ್ದವು. ನಾಯಿಗಳು ಬೊಗಳುವುದನ್ನು ನೋಡಿ ಗ್ರಾಮಸ್ಥರು ಜಿಂಕೆಗೆ ಯಾವುದೇ ರೀತಿಯ ಅನಾಹುತ ಆಗಬಾರದೆಂದು ರಕ್ಷಿಸಿ ಜಿಂಕೆಯನ್ನು ಹಿಡಿದು ಕಟ್ಟಿಹಾಕಿದ್ದಾರೆ.
Advertisement
ಗ್ರಾಮಸ್ಥರು ನಂತರ ಮೇಲುಕೋಟೆ ವಲಯ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಮೇಲುಕೋಟೆ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಜಿಂಕೆಯನ್ನು ವಶಕ್ಕೆ ಪಡೆದಿದ್ದಾರೆ.