ಮಡಿಕೇರಿ: ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಕೊಡಗು- ದಕ್ಷಿಣ ಕನ್ನಡದ ಗಡಿಯಲ್ಲಿರುವ ಕಲ್ಲುಗುಂಡಿ ಗ್ರಾಮದಲ್ಲಿ ಸೆರೆಹಿಡಿಯಲಾಗಿದೆ.
ಗ್ರಾಮದ ಮಣಿ ಕುಮಾರ್ ಎಂಬುವವರ ಮನೆಯ ತೋಟದಲ್ಲಿ ಸುಮಾರು 14 ಆಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿತ್ತು. ಭಾರೀ ಗಾತ್ರದ ಹಾವನ್ನು ಕಂಡು ಗಾಬರಿಗೊಂಡು ತಕ್ಷಣ ಉರಗ ತಜ್ಞರಿಗೆ ಕರೆ ಮಾಡಿದ್ದಾರೆ.
Advertisement
Advertisement
ಮಾಹಿತಿ ತಿಳಿದ ಜಾಲ್ಸೂರಿನ ಸ್ನೇಕ್ ಶ್ಯಾಮ್ ಪ್ರಸಾದ್ ಅವರು ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಪಿಲಿಕುಳ ನಿಸರ್ಗಧಾಮದ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
Advertisement
ಸ್ನೇಕ್ ಶ್ಯಾಮ್ ಪ್ರಸಾದ್ ಈವರೆಗೆ ಅನೇಕ ಕಾಳಿಂಗದಂತಹ ವಿಷಕಾರಿ ಸಾಕಷ್ಟು ವಿಷಕಾರಿ ಹಾವುಗಳನ್ನು ಸೆರೆಹಿಡಿದಿದ್ದಾರೆ. ನಂತರ ಹಾವನ್ನು ಸಾರ್ವಜನಿಕರಿಗೆ ಪ್ರದರ್ಶನ ಮಾಡಿ, ಮಾಹಿತಿ ನೀಡಿ ಹಾವುಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಾರೆ.