Tuesday, 21st May 2019

4 days ago

ಅಭ್ಯಾಸದ ವೇಳೆ ಗಾಯಗೊಂಡ ಡ್ಯಾನ್ಸರ್ – ನಟ ವರುಣ್‍ರಿಂದ ಚಿಕಿತ್ಸೆಗೆ 5 ಲಕ್ಷ ರೂ. ಸಹಾಯ

ಮುಂಬೈ: ಬಾಲಿವುಡ್ ನಟ ವರುಣ್ ಧವನ್ ಡ್ಯಾನ್ಸ್ ಅಭ್ಯಾಸದ ವೇಳೆ ಗಾಯಗೊಂಡಿದ್ದ ಯುವ ಡ್ಯಾನ್ಸರ್ ಚಿಕಿತ್ಸೆಗೆ 5 ಲಕ್ಷ ರೂ. ನೀಡಿ ಸಹಾಯ ಮಾಡಿದ್ದಾರೆ. ಇಶಾನ್ ಡ್ಯಾನ್ಸ್ ಅಭ್ಯಾಸದ ವೇಳೆ ಡಬಲ್ ಫ್ರಂಟ್ ಫ್ಲಿಪ್ ಒಡೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಕುತ್ತಿಗೆಗೆ ಗಂಭೀರವಾಗಿ ಗಾಯವಾಗಿ ಆಸ್ಪತ್ರೆಗೆ ಸೇರಿದ್ದಾನೆ. ಈ ವಿಷಯ ತಿಳಿದ ಹಲವು ಡ್ಯಾನ್ಸರ್ ಗಳು ಇಶಾನ್ ಚಿಕಿತ್ಸೆಗೆ ಹಣವನ್ನು ಸಂಗ್ರಹಿಸಲು ಶುರು ಮಾಡಿದ್ದರು. ಡ್ಯಾನರ್ಸ್ ಹಣ ಸಂಗ್ರಹಿಸುತ್ತಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದನ್ನು ನೋಡಿದ […]

1 week ago

ಸಾವಿನಂಚಿನಲ್ಲಿದ್ದ ನಟ ಮತ್ತೆ ಬಣ್ಣ ಹಚ್ಚಿದ್ದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡೋದರಲ್ಲಿ ಸದಾ ಮುಂದು. ಆದರೆ ಎಡಗೈಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದೆಂಬಂಥಾ ಸೂಕ್ಷ್ಮವಂತಿಕೆಯನ್ನೂ ಕೂಡಾ ಅವರು ಮೈಗೂಡಿಸಿಕೊಂಡಿದ್ದಾರೆ. ಯಾರಿಗೆ ಅದೆಷ್ಟೇ ಸಹಾಯ ಮಾಡಿದರೂ ತಾವಾಗೇ ಎಂದೂ ಹೇಳಿಕೊಳ್ಳುವ ಜಾಯಮಾನವೂ ಅವರದ್ದಲ್ಲ. ಆದರೆ, ಆಗಾಗ ದರ್ಶನ್ ಅವರ ದೊಡ್ಡತನಗಳು ಫಲಾನುಭವಿಗಳ ಕಡೆಯಿಂದಲೇ ಜಾಹೀರಾಗೋದಿದೆ. ಇದೀಗ ಅಂಥಾದ್ದೇ ಒಂದು ಮನಮಿಡಿಯುವ ವೃತ್ತಾಂತವನ್ನು...

ಕೊಡಗು ಸಂತ್ರಸ್ತರಿಗೆ ಪಿಎಫ್‍ಐ ವತಿಯಿಂದ 18 ಲಕ್ಷ ಧನಸಹಾಯ

2 months ago

ಮಡಿಕೇರಿ: ಕಳೆದ ಆಗಸ್ಟ್ ನಲ್ಲಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ ನೆರವು ನೀಡಲಾಯಿತು. 180 ಕುಟುಂಬಗಳಿಗೆ 18 ಲಕ್ಷ ರೂ. ಧನಸಹಾಯವನ್ನು ಸಂಘಟನೆಯಿಂದ ವಿತರಿಸಲಾಯಿತು. ಮುಖ್ಯವಾಗಿ ಮಳೆಯಿಂದ ಹಾನಿಯಾದ ಮನೆಗಳ ರಿಪೇರಿಗೆ...

ಪಾಕ್ ನಾಗರಿಕರಿಗೆ ಆಹಾರ-ನೀರು ಕೊಟ್ಟು ಮಾನವೀಯತೆ ಮೆರೆದ ಪೊಲೀಸರು

3 months ago

ಚಂಡೀಗಢ: ಭಾರತ ಮತ್ತು ಪಾಕಿಸ್ತಾನ ಜನರು ನಡುವೆ ಸದ್ಯಕ್ಕೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆ ಪಾಕಿಸ್ತಾನದ ಅಧಿಕಾರಿಗಳು ಸಂಜೋತಾ ಎಕ್ಸ್ ಪ್ರೆಸ್ ರೈಲನ್ನು ಸ್ಥಗಿತಗೊಳಿಸಿದ್ದರು. ಇದರಿಂದ ಪಾಕಿಸ್ತಾನಿಯರು ಭಾರತದ ಪಂಜಾಬ್ ನಲ್ಲಿ ಸಿಲುಕಿಕೊಂಡಿದ್ದರು. ಅವರಿಗೆ ಪಂಜಾಬ್ ಪೊಲೀಸರು ಆಹಾರ ನೀಡುವ...

ಹುತಾತ್ಮ ಯೋಧರ ಕುಟುಂಬಕ್ಕಾಗಿ ಲತಾ ಮಂಗೇಶ್ಕರಿಂದ 1 ಕೋಟಿ ರೂ. ಅನುದಾನ

3 months ago

ನವದೆಹಲಿ: ಪುಲ್ವಾಮಾ ಭಯೋತ್ಪಾದಕರ ದಾಳಿಯಲ್ಲಿ ಸುಮಾರು 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಅವರ ಕುಟುಂಬದವರಿಗೆ ಸರ್ಕಾರ ಸೇರಿದಂತೆ ನಟರು, ನಿರ್ಮಾಪಕರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಈಗ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಭಾರತೀಯ ಸೈನಿಕರಿಗೆ 1 ಕೋಟಿ ರೂ. ಅನುದಾನ...

ಬಂಡೀಪುರ ಬೆಂಕಿ ಪ್ರಕರಣ- ಸಹಾಯ ಚಾಚುವವರು ಈ ಕೆಳಗಿನ ವಸ್ತುಗಳನ್ನು ನೀಡಬಹುದು

3 months ago

ಮೈಸೂರು: ಕಳೆದೊಂದು ವಾರದಿಂದ ಬಂಡೀಪುರದ ಅರಣ್ಯ ಪ್ರದೇಶ ಧಗಧಗನೇ ಹೊತ್ತಿ ಉರಿಯುತ್ತಿದೆ. ಅಲ್ಲದೇ ಅರಣ್ಯ ಸಿಬ್ಬಂದಿ, ನೂರಾರು ಸ್ವಯಂ ಸೇವಕರು ಹಗಲಿರುಳೆನ್ನದೇ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಂಕಿಯ ಘಟನೆಗೆ ಸಹಾಯ ಹಸ್ತ ಚಾಚಲು ಇಚ್ಚಿಸುವ ಸಾರ್ವಜನಿಕರಿಗಾಗಿ ಮೈಸೂರು ಮೃಗಾಲಯದಲ್ಲಿ ಕೌಂಟರ್...

ನಟಿ ವಿಜಯಲಕ್ಷ್ಮಿ ಚಿಕಿತ್ಸೆಗೆ ಸಹಾಯಹಸ್ತ ಚಾಚಿದ ಕಿಚ್ಚ

3 months ago

ಬೆಂಗಳೂರು: ನಟಿ ವಿಜಯಲಕ್ಷ್ಮಿಯವರು ಅನಾರೋಗ್ಯದ ವಿಷಯ ತಿಳಿದು ನಟ ಕಿಚ್ಚ ಸುದೀಪ್ ಅವರು 1 ಲಕ್ಷ ರೂಪಾಯಿಗಳನ್ನು ನೀಡಿ ಸಹಾಯ ಹಸ್ತ ಚಾಚಿದ್ದಾರೆ. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿಗಳಾದ ಬಾ.ಮ.ಹರೀಶ್ ಅವರು ಮಾಹಿತಿ ನೀಡಿದ್ದು, ವಿಜಯ ಲಕ್ಷ್ಮಿ...

ಕೆಟ್ಟು ನಿಂತ ಟೆಂಪೋವನ್ನು 7 ಕಿ.ಮೀ ಎಳೆದ ಬೈಕ್! – ವಿಡಿಯೋ ನೋಡಿ

3 months ago

ಉಡುಪಿ: ಟೂ ವ್ಹೀಲರ್ ಕೈಕೊಟ್ಟಾಗ ಗೆಳೆಯನ ಬೈಕಿನಲ್ಲಿ ಬಂದು ಕೆಟ್ಟ ಬೈಕಿಗೆ ಹಿಂಬದಿಯಿಂದ ಕಾಲಿಟ್ಟು ತಳ್ಳುತ್ತಾ ಗ್ಯಾರೇಜ್ ತನಕ ಡ್ರಾಪ್ ಮಾಡೋದನ್ನು ನೋಡಿದ್ದೇವೆ. ಅದೇ ರೀತಿ ದೊಡ್ಡ ಗಾಡಿ ಕೆಟ್ಟು ನಿಂತಾಗ ಟೋಯಿಂಗ್ ವಾಹನ ಎಳೆದುಕೊಂಡು ಹೋಗುತ್ತದೆ. ಇಷ್ಟೆಲ್ಲದರ ನಡುವೆ ಉಡುಪಿಯಲ್ಲಿ...