DistrictsKarnatakaLatestLeading NewsMain PostMysuru

ಪಬ್ಲಿಕ್ ಟಿವಿ ಸುದ್ದಿ ನೋಡಿ ಆ್ಯಸಿಡ್ ಸಂತ್ರಸ್ತೆ ಸಹಾಯಕ್ಕೆ ನಿಂತ ವಿದ್ಯಾರ್ಥಿನಿ

- ಇಂಗ್ಲೆಂಡ್‍ನಲ್ಲಿ ಓದುತ್ತಿರೋ ಮೈಸೂರಿನ ಸೃಷ್ಟಿ ನೆರವು

ಮೈಸೂರು: ಬೆಂಗಳೂರಿನಲ್ಲಿ ಆ್ಯಸಿಡ್ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಯುವತಿಗೆ ಮೈಸೂರು ವಿದ್ಯಾರ್ಥಿನಿ ಸಹಾಯಹಸ್ತ ಚಾಚಿದ್ದಾರೆ.

ಇಂಗ್ಲೆಂಡ್‍ನಲ್ಲಿ ಓದುತ್ತಿರುವ ಮೈಸೂರು ಮೂಲದ ವಿದ್ಯಾರ್ಥಿನಿ ಸೃಷ್ಟಿ ಯುವತಿಯ ಚಿಕಿತ್ಸೆಗೆ 50 ಸಾವಿರ ರೂಪಾಯಿ ನೀಡಿದ್ದಾರೆ. ಮೈಸೂರಿನ ಅಂಬಾರಿ ಕನ್ವೆನ್ಷನ್ ಹಾಲ್ ಮಾಲೀಕರಾದ ಸ್ವೀಟ್ ಮಹೇಶ್ ಅವರ ಪುತ್ರಿ ಸೃಷ್ಟಿ, ಈ ಘಟನೆಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಮ್ಮ ತಂದೆ ಓದಿದಾಗಿ ನೀಡುತ್ತಿದ್ದ ಹಣದಲ್ಲಿ ಉಳಿಸಿದ್ದ 50 ಸಾವಿರ ರೂಪಾಯಿಯನ್ನು ಆ್ಯಸಿಡ್ ದಾಳಿಗೆ ಒಳಗಾದ ಯುವತಿಯ ಚಿಕಿತ್ಸೆಗೆ ನೀಡಿದ್ದಾರೆ. ಇದನ್ನೂ ಓದಿ: ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಸಹಾಯಹಸ್ತ

ಈ ಸಂಬಂಧ ವೀಡಿಯೋ ಮಾಡಿರುವ ಸೃಷ್ಟಿ, ಬೆಂಗಳೂರಿನಲ್ಲಿ ನಡೆದ ಆ್ಯಸಿಡ್ ದಾಳಿ ಸುದ್ದಿ ಕೇಳಿ ಮನಸ್ಸಿಗೆ ನೋವಾಗಿದೆ. ಈ ಸುದ್ದಿಯನ್ನು ಪಬ್ಲಿಕ್ ಟಿವಿಯಲ್ಲಿ ನೋಡಿದೆ. ಹೆಣ್ಣು ಮಕ್ಕಳ ಮೇಲೆ ಅಷ್ಟೊಂದು ಕ್ರೈಂಗಳು ನಡೆಯುತ್ತಿದ್ದರೂ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ತುಂಬಾ ಕೋಪ ಬಂತು. ಹೀಗಾಗಿ ಈ ಪ್ರಕರಣವನ್ನಾದರೂ ಗಂಭೀರವಾಗಿ ಪರಗಣಿಸಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಹೇಳುತ್ತಾ ಶೀಘ್ರವೇ ಸಂತ್ರಸ್ತೆ ಗುಣಮುಖರಾಗಲಿ ಎಂದು ಪ್ರಾರ್ಥಿಸಿಕೊಂಡರು.

ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ. ತಮ್ಮ ತಂದೆ ಓದಿದಾಗಿ ನೀಡುತ್ತಿದ್ದ ಹಣದಲ್ಲಿ ಉಳಿಸಿದ್ದ 50 ಸಾವಿರ ರೂಪಾಯಿಯನ್ನು ಆ್ಯಸಿಡ್ ದಾಳಿಗೆ ಒಳಗಾದ ಯುವತಿಯ ಚಿಕಿತ್ಸೆಗೆ ನೀಡುವುದಾಗಿ ತಿಳಿಸಿದರು. ಇಂದು ನಾವು ಸಂತ್ರಸ್ತೆ ಪರವಾಗಿ ಹೋರಾಡಬೇಕಿದೆ. ನಿಮಗೆ ಎಷ್ಟು ಸಹಾಯ ಮಾಡಲು ಸಾಧ್ಯವಾಗುತ್ತೋ ಅಷ್ಟು ಸಹಾಯ ಮಾಡಿ ಎಂದು ಇದೇ ವೇಳೆ ಸೃಷ್ಟಿ ಮನವಿ ಮಾಡಿಕೊಂಡರು. ಇದನ್ನೂ ಓದಿ: ಆ್ಯಸಿಡ್ ದಾಳಿಗೆ ತುತ್ತಾದ ಯುವತಿಯ ಚಿಕಿತ್ಸೆಗೆ 1 ಲಕ್ಷ ರೂ. ಪರಿಹಾರ ಘೋಷಿಸಿದ ಮುರುಗೇಶ್ ನಿರಾಣಿ 

 

Leave a Reply

Your email address will not be published.

Back to top button