ಹಾಸನ: ಕೆರೆಯಲ್ಲಿ ಮುಳುಗಿ ಮಾವ-ಅಳಿಯ (Father In Law – Son In Law) ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆ, ಅರಸೀಕೆರೆ (Arsikere) ತಾಲೂಕಿನ, ಎನ್.ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಪ್ರಭಾಕರ್ (45), ಪ್ರತೀಕ್ (12) ಮೃತ ದುರ್ದೈವಿಗಳು. ಪ್ರತೀಕ್ ಮೂಲತಃ ದುದ್ದ ಹೋಬಳಿ, ಸೋಮನಹಳ್ಳಿ ಗ್ರಾಮದವನು. ಬೇಸಿಗೆ ರಜೆ ಹಿನ್ನಲೆ ಮಾವ ಪ್ರಭಾಕರ್ ಮನೆಗೆ ಬಂದಿದ್ದ. ಮಾವ-ಅಳಿಯ ಇಬ್ಬರೂ ಕೆರೆಯ ಏರಿ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾಲು ಜಾರಿ ಪ್ರತೀಕ್ ಕೆರೆಗೆ ಬಿದ್ದಿದ್ದಾನೆ. ಪ್ರತೀಕ್‌ನನ್ನು ರಕ್ಷಿಸಿಲು ಮಾವ ಪ್ರಭಾಕರ್ ಕೂಡ ಕೆರೆಗೆ ಇಳಿದಿದ್ದಾರೆ. ಈಜು ಬಾರದ ಕಾರಣ ಇಬ್ಬರೂ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬಿರು ಬೇಸಿಗೆಗೆ ಬತ್ತುತ್ತಿವೆ ಬೆಂಗಳೂರಿನ ಪ್ರಮುಖ ಕೆರೆಗಳು – ನಾಲ್ಕೈದು ಅಡಿ ಕುಸಿದ ನೀರಿನ ಮಟ್ಟ
ಸದ್ಯ ಇಬ್ಬರ ಮೃತದೇಹಗಳನ್ನು ಅಗ್ನಿಶಾಮಕದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ತೆರೆದ ಗಂಗೋತ್ರಿ, ಯಮುನೋತ್ರಿ ದೇವಾಲಯಗಳ ಬಾಗಿಲು – ಚಾರ್ ಧಾಮ್ ಯಾತ್ರೆ ಪ್ರಾರಂಭ

