Tag: ಮೀನುಗಾರ

  • ಪತ್ನಿಯ ಮಾರ್ಫ್‌ ಫೋಟೋ ಬಳಸಿ ಆ್ಯಪ್‌ ಏಜೆಂಟರ ಕಿರುಕುಳ – 2,000 ರೂ. ಸಾಲ ಪಡೆದಿದ್ದ ವ್ಯಕ್ತಿ ಆತ್ಮಹತ್ಯೆ

    ಪತ್ನಿಯ ಮಾರ್ಫ್‌ ಫೋಟೋ ಬಳಸಿ ಆ್ಯಪ್‌ ಏಜೆಂಟರ ಕಿರುಕುಳ – 2,000 ರೂ. ಸಾಲ ಪಡೆದಿದ್ದ ವ್ಯಕ್ತಿ ಆತ್ಮಹತ್ಯೆ

    ಅಮರಾವತಿ: ತ್ವರಿತ ಸಾಲ ನೀಡುವ ಆ್ಯಪ್‌ (Loan App) ಮೂಲಕ 2,000 ರೂ. ಸಾಲ ಪಡೆದಿದ್ದ ವ್ಯಕ್ತಿಯೊಬ್ಬ ಆ್ಯಪ್‌ ಏಜೆಂಟರ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ.

    ಹೈದರಾಬಾದ್‌ ಮೂಲದ ನರೇಂದ್ರ (25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆ್ಯಪ್‌ ಏಜೆಂಟರು ತನ್ನ ಪತ್ನಿಯ ಮಾರ್ಫ್‌ ಮಾಡಿದ ಅಶ್ಲೀಲ ಫೋಟೋವನ್ನು ನರೇಂದ್ರ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಕಳುಹಿಸಿದ್ದಾರೆ. ಇದರಿಂದ ಮನನೊಂದ ನರೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಮುಂದಿನ 5 ವರ್ಷದಲ್ಲಿ ಆಟೋಮೊಬೈಲ್ ಉದ್ಯಮದಲ್ಲಿ ವಿಶ್ವದಲ್ಲೇ ಭಾರತ ನಂಬರ್‌ 1: ಗಡ್ಕರಿ ಭವಿಷ್ಯ

    fishing boat sea 3

    25 ವರ್ಷದ ನರೇಂದ್ರ ಕಳೆದ 6 ತಿಂಗಳ ಹಿಂದೆಯಷ್ಟೇ ಅಖಿಲಾ ಎಂಬಾಕೆಯೊಂದಿಗೆ ಪ್ರೇಮ ವಿವಾಹವಾಗಿದ್ದ. ದಂಪತಿ ಇಬ್ಬರೂ ವಿಶಾಖಪಟ್ಟಂನಲ್ಲಿ ನೆಲೆಸಿದ್ದರು. ನರೇಂದ್ರ ಮೀನುಗಾರಿಕೆ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಹಮಾವಾನ ವೈಪರಿತ್ಯದಿಂದಾಗಿ ಆರ್ಥಿಕ ನಷ್ಟ ಉಂಟಾಗಿತ್ತು. ಈ ವೇಳೆ ತನ್ನ ಖರ್ಚು ನಿಭಾಯಿಸಲು ತ್ವರಿತ ಸಾಲ ನೀಡುವ ಆ್ಯಪ್‌ನಿಂದ 2,000 ರೂ. ಸಾಲ ಪಡೆದುಕೊಂಡಿದ್ದ. ಸಾಲ ಪಡೆದ ಕೆಲದಿನಗಳ ನಂತರ ಆ್ಯಪ್‌ ಏಜೆಂಟರು ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಅಸಭ್ಯ ಭಾಷೆಗಳಿಂದ ಸಂದೇಶ ಕಳುಹಿಸಿದ್ದಾರೆ. ಇಷ್ಟಕ್ಕೆ ಬಿಡದೇ ನರೇಂದ್ರ ಪತ್ನಿಯ ಮಾರ್ಫ್‌ ಮಾಡಿದ ಅಶ್ಲೀಲ ಫೋಟೋವನ್ನ ಕುಟುಂಬಸ್ಥರು, ಸ್ನೇಹಿತರಿಗೆ ಕಳುಹಿಸಿದ್ದಾರೆ. ಕೊನೆಗೆ ಆತನ ಪತ್ನಿಗೂ ಫೋಟೋ ಕಳುಹಿಸಿದ ಬಳಿಕ ಈ ವಿಷಯ ನರೇಂದ್ರನಿಗೆ ಗೊತ್ತಾಗಿದೆ.

    ಬಳಿಕ 2 ಸಾವಿರ ರೂ. ಸಾಲ ತೀರಿಸಲು ಬೇರೊಬ್ಬರ ಬಳಿ ಸಹಾಯ ಕೇಳಿದ್ದರು. ಆದ್ರೆ ಹಣ ಸಿಗದೇ ಸಾಲ ಮರುಪಾವತಿ ಮಾಡಲಾಗಲಿಲ್ಲ. ಇದರಿಂದ ಆ್ಯಪ್‌ ಏಜೆಂಟರು ನಿರಂತರವಾಗಿ ಕಿರುಕುಳ ನೀಡಲು ಶುರು ಮಾಡಿದರು. ಕೊನೆಗೆ ಮನನೊಂದ ನರೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ | ಹಣಕ್ಕಾಗಿ ಕೇಸ್‌ ಮೇಲೆ ಕೇಸ್‌ – ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌

    ಒಂದೇ ವಾರದಲ್ಲಿ 3 ಕೇಸ್‌:
    ಆಂಧ್ರಪ್ರದೇಶದಲ್ಲಿ ಕಳೆದ ಒಂದು ವಾರದಲ್ಲಿ ತ್ವರಿತ ಆ್ಯಪ್‌ನಿಂದ ಸಾಲ ಪಡೆದವರ 3ನೇ ಆತ್ಮಹತ್ಯೆ ಪ್ರಕರಣ ಇದಾಗಿದೆ. ಇದಲ್ಲದೇ ನೆಂದ್ಯಾಲ್‌ ಜಿಲ್ಲೆಯಲ್ಲಿ ಇಂದು (ಡಿ.11) ಸಹ ಯುವತಿಯೊಬ್ಬಳು ಆಪ್‌ ಏಜೆಂಟರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಳು, ಅದೃಷ್ಟವಶಾತ್‌ ಪೊಲೀಸರು ಆಕೆಯನ್ನ ರಕ್ಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಶರಾವತಿ ಜಲವಿದ್ಯುತ್‌ ಯೋಜನೆ – ಸಂಸತ್‌ನಲ್ಲಿ ಕನ್ನಡದಲ್ಲೇ ಪ್ರಸ್ತಾಪಿಸಿದ ಬಿ.ವೈ.ರಾಘವೇಂದ್ರ

  • ಶ್ರೀಲಂಕಾ ನೌಕಾಪಡೆಯಿಂದ 6 ಭಾರತೀಯ ಮೀನುಗಾರರ ಬಂಧನ

    ಶ್ರೀಲಂಕಾ ನೌಕಾಪಡೆಯಿಂದ 6 ಭಾರತೀಯ ಮೀನುಗಾರರ ಬಂಧನ

    ಕೊಲಂಬೋ: ಶ್ರೀಲಂಕಾದ ನೌಕಾಪಡೆಯು ಭಾನುವಾರ ಗಡಿ ದಾಟಿದ ಆರೋಪದ ಮೇರೆಗೆ 6 ಭಾರತೀಯ ಮೀನುಗಾರರನ್ನು ಬಂಧಿಸಿದೆ.

    ಭಾರತೀಯ ಮೀನುಗಾರರು ಶ್ರೀಲಂಕಾದ ಜಲಪ್ರದೇಶಕ್ಕೆ ಹೋದ ಹಿನ್ನೆಲೆಯಲ್ಲಿ ಅವರ ಬೋಟ್‍ನ್ನು ವಶಪಡಿಸಿಕೊಂಡು, 6 ಮೀನುಗಾರರನ್ನು ಬಂಧಿಸಿದ್ದಾರೆ. ಇದು ಒಂದು ತಿಂಗಳ ಅವಧಿಯಲ್ಲಿ ಎರಡನೇ ಘಟನೆಯಾಗಿದೆ.

    Fishermen 1

    ಮನ್ನಾರ್ ದ್ವೀಪದ ವಾಯುವ್ಯ ಕರಾವಳಿಯಲ್ಲಿರುವ ವಸಾಹತು ಪ್ರದೇಶವಾದ ತಲೈಮನ್ನಾರ್‌ನಲ್ಲಿ ಮೀನುಗಾರರನ್ನು ಬಂಧಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ. ತಲೈಮನ್ನಾರ್‌ನಲ್ಲಿ ನೌಕಾಪಡೆಯ ವಶದಲ್ಲಿರುವ ಮೀನುಗಾರರನ್ನು ಮನ್ನಾರ್‌ನಲ್ಲಿರುವ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಶಾಕ್‍ನಿಂದ ದಂಪತಿ ಸಾವು- ಪತ್ನಿ ಉಳಿಸಲು ಹೋಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದುರ್ಮರಣ

    ಆಗಸ್ಟ್ 22 ರಂದು ಶ್ರೀಲಂಕಾದ ಗಡಿ ಪ್ರವೇಶಿಸಿದ ಆರೋಪದ ಮೇಲೆ 10 ಭಾರತೀಯ ಮೀನುಗಾರರನ್ನು ಬಂಧಿಸಿದ್ದರು. ಇದಾದ ಬಳಿಕ ಇಂದು ಮತ್ತೆ ಬಂಧಿಸಿದ್ದಾರೆ. ಇದನ್ನೂ ಓದಿ: ಗಣೇಶ ಮೂರ್ತಿಯೊಂದಿಗೆ ಸಾವರ್ಕರ್ ಫೋಟೋವನ್ನೂ ಇಡ್ತೀವಿ – ಚಕ್ರವರ್ತಿ ಸೂಲಿಬೆಲೆ

    Live Tv
    [brid partner=56869869 player=32851 video=960834 autoplay=true]

  • ಮಲ್ಪೆ ಬಂದರಿನಲ್ಲಿ ಬಲೆಗೆ ಬಿತ್ತು 250 ಕೆ.ಜಿಯ ಗರಗಸ ಮೀನು..!

    ಮಲ್ಪೆ ಬಂದರಿನಲ್ಲಿ ಬಲೆಗೆ ಬಿತ್ತು 250 ಕೆ.ಜಿಯ ಗರಗಸ ಮೀನು..!

    ಉಡುಪಿ: ಅತ್ಯಂತ ಅಪರೂಪದ ಗರಗಸ ಮೀನು (Sawfish) ಮಲ್ಪೆ ಬಂದರಿನಲ್ಲಿ ಮೀನುಗಾರರ ಬಲೆ ಬಿದ್ದಿದೆ. ಇದನ್ನು ಇಂಗ್ಲಿಷ್ ನಲ್ಲಿ ಕಾರ್ಪೆಂಟರ್ ಶಾರ್ಕ್ (Carpenter Shark) ಎಂದು ಕರೆಯಲಾಗುತ್ತಿದೆ. ಈ ವಿಶೇಷ ಮೀನನ್ನು ನೋಡಲು ಜನಸಮೂಹವೇ ಸ್ಥಳದಲ್ಲಿ ನೆರೆದಿತ್ತು.

    ಬಲೆಗೆ ಬಿದ್ದ ಸುಮಾರು 250 ಕೆ.ಜಿಯ ಈ ಮೀನನ್ನು ಬೋಟಿನಲ್ಲಿ ಬಂದರಿಗೆ ತರಲಾಗಿತ್ತು. ನಂತರ ಅಲ್ಲಿಂದ ಕ್ರೇನ್ ಮೂಲಕ ಎತ್ತಲಾಯಿತು. ಬಳಿಕ ಲಾರಿ ಮೂಲಕ ಮಂಗಳೂರಿಗೆ ಸಾಗಿಸಲಾಯಿತು. ಮೀನಿನ ಮುಖದ ಭಾಗದಲ್ಲಿ ಗರಗಸದಂತೆ ಹೋಲುವ ಉದ್ದದ ಅಲಗು ಇದ್ದು, ನೋಡಲು ಜನಸಾಗರವೇ ಸ್ಥಳದಲ್ಲಿ ಜಮಾಯಿಸಿತ್ತು. ಇದನ್ನೂ ಓದಿ: DCC ಬ್ಯಾಂಕ್‌ನಲ್ಲಿ ಕಳ್ಳತನ- 4.37ಕೋಟಿ ನಗದು, 1.63ಕೋಟಿ ಮೌಲ್ಯದ ಚಿನ್ನಾಭರಣ ವಶ

    ಹಲವು ಇದರ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಇದೀಗ ಅವುಗಳು ವೈರಲ್ ಆಗಿವೆ. ಈ ಅಪರೂಪದ ಮೀನುಗಳು ಆಳಸಮುದ್ರದಲ್ಲಿ ಮಾತ್ರ ಇರುತ್ತವೆ. ಸದ್ಯ ಈ ಮೀನುಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಅಳಿವಿನಂಚಿನಲ್ಲಿರುವ ಸಂತತಿ ಎಂದು ಹೇಳಲಾಗುತ್ತಿದೆ. ಶಾರ್ಕ್ ಜಾತಿಯ ಮೀನುಗಳಲ್ಲಿ ಇದು ಕೂಡ ಒಂದಾಗಿದ್ದು, ನೋಡಲು ತುಂಬಾನೇ ಆಕರ್ಷಕವಾಗಿರುತ್ತವೆ.

  • ಮೀನುಗಾರನ ತಲೆಕೆಳಗಾಗಿಸಿ ನೇತು ಹಾಕಿ ಹಲ್ಲೆ – 6 ಆರೋಪಿಗಳ ಬಂಧನ

    ಮೀನುಗಾರನ ತಲೆಕೆಳಗಾಗಿಸಿ ನೇತು ಹಾಕಿ ಹಲ್ಲೆ – 6 ಆರೋಪಿಗಳ ಬಂಧನ

    ಮಂಗಳೂರು: ಕಡಲನಗರಿ ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಅಮಾನುಷ ಘಟನೆಯೊಂದು ನಡೆದಿದೆ. ಆಂಧ್ರಪ್ರದೇಶ ಮೂಲದ ಮೀನುಗಾರಿಕಾ ಕಾರ್ಮಿಕರು ವ್ಯಕ್ತಿಯೊಬ್ಬನನ್ನು ಉಲ್ಟಾ ನೇತು ಹಾಕಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ.

    VAILU SEENA

    ನಮ್ಮ ರಾಜ್ಯದ ಮೀನುಗಾರಿಕೆಯಲ್ಲಿ ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ ಮೂಲದ ಕಾರ್ಮಿಕರು ಕೆಲಸ ಮಾಡುತ್ತಾರೆ. ಇದೇ ರೀತಿ ಮಂಗಳೂರಿನಲ್ಲಿ ಮೀನುಗಾರಿಕ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವೈಲ ಶೀನು ಎಂಬ ಆಂಧ್ರಪ್ರದೇಶ ಮೂಲದ ಕಾರ್ಮಿಕನಿಗೆ ಸಹೋದ್ಯೋಗಿಗಳೇ ಸೇರಿಕೊಂಡು ಅಮಾನುಷ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರ

    MNG FISHERS

    ಮೊಬೈಲ್ ಕದ್ದ ಆರೋಪದಲ್ಲಿ ವೈಲ ಶೀನುನನ್ನು ಮೀನುಗಾರಿಕ ಬೋಟ್‍ನಲ್ಲಿಯೇ ಉಲ್ಟಾ ನೇತು ಹಾಕಿ ಆಂಧ್ರಪ್ರದೇಶ ಮೂಲದ ಆರು ಜನ ಮೀನುಗಾರಿಕಾ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆ ನಡೆಸಿದ ಆರು ಜನ ಆರೋಪಿಗಳನ್ನು  ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಬಂಧಿತರನ್ನು ಕೊಂಡೂರು ಪೋಲಯ್ಯ, ಅವುಲ ರಾಜ್ ಕುಮಾರ್, ಕಾಟಂಗರಿ ಮನೋಹರ್, ವೂಟುಕೋರಿ ಜಾಲಯ್ಯ, ಕರಪಿಂಗಾರ ರವಿ, ಪ್ರಲಯಕಾವೇರಿ ಗೋವಿಂದಯ್ಯ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮತಾಂತರ ತಡೆ ಮಸೂದೆಯಲ್ಲಿರುವ ಪ್ರಮುಖ ಅಂಶಗಳು ಏನು? 

    MNG FISHERS 1

    ಡಿ.14ರಂದು ಆರೋಪಿಗಳು ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಶೈಲೇಶ್ 2 ಎಂಬ ಬೋಟಿನಲ್ಲಿ ಪಾರ್ಟಿಯೊಂದನ್ನು ಮಾಡಿದ್ದಾರೆ. ಆ ಪಾರ್ಟಿಗೆ ಪರಿಚಯದ ವೈಲ ಶೀನುನನ್ನು ಕರೆದಿದ್ದಾರೆ ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಪಾರ್ಟಿಯಲ್ಲಿದ್ದವರ ಎರಡು ಮೊಬೈಲ್ ಮಿಸ್ಸಿಂಗ್ ಆಗಿರುತ್ತದೆ. ಈ ಮೊಬೈಲ್‍ನ್ನು ವೈಲ ಶೀನು ಕದ್ದಿದ್ದಾನೆ ಎಂದು ಆರೋಪಿಸಿ ಉಲ್ಟಾ ನೇತು ಹಾಕಿ ಸರಪಳಿಯಿಂದ ಹಲ್ಲೆ ನಡೆಸಿದ್ದಾರೆ. ಆ ಬಳಿಕ ಸಾರ್ವಜನಿಕರ ಸಹಾಯಯಿಂದ ವೈಲ ಶೀನು ಪಾರಾಗಿ ಕಾರವಾರಕ್ಕೆ ತೆರಳಿದ್ದಾನೆ. ಈ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆ ಹಲ್ಲೆ ನಡೆಸಿದ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಇದೀಗ ಬಂಧಿಸಿದ್ದಾರೆ. ವೈಲ ಶೀನುವಿನ ಕಾಲುಗಳನ್ನು ಕಟ್ಟಿ ಸಮುದ್ರಕ್ಕೆ ಬಿಸಾಡಿ ಕೊಲೆ ನಡೆಸಲು ಆರೋಪಿಗಳು ಮಾತುಕತೆ ನಡೆಸಿದ್ದರು. ಹೀಗಾಗಿ ಸದ್ಯ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

  • ಅರ್ಧ ಗಂಟೆ ಥರ್ಮಾಕೋಲ್ ಸಹಾಯದಿಂದ ಈಜು – ಬದುಕುಳಿದ ಮೀನುಗಾರ

    ಅರ್ಧ ಗಂಟೆ ಥರ್ಮಾಕೋಲ್ ಸಹಾಯದಿಂದ ಈಜು – ಬದುಕುಳಿದ ಮೀನುಗಾರ

    ಮಂಗಳೂರು: ಮೀನುಗಾರಿಕಾ ದೋಣಿಯಿಂದ ಎಸೆಯಲ್ಪಟ್ಟ ಮೀನುಗಾರ ಅರ್ಧ ಗಂಟೆ ಸಮುದ್ರದಲ್ಲಿ ಈಜಿ ಬದುಕುಳಿದ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಅಳಿವೆಬಾಗಿಲು ಆಳಸಮುದ್ರದಲ್ಲಿ ನಡೆದಿದೆ.

    ಮಂಗಳೂರಿನ ಕಸಬ ಬೆಂಗ್ರೆಯ ನಿವಾಸಿ ನವಾಝ್(35) ಬದುಕುಳಿದ ಮೀನುಗಾರ. ಕಸಬಾ ಬೆಂಗ್ರೆಯ ನಾಡದೋಣಿ ಅಳಿವೆ ಬಾಗಿಲಿನತ್ತ ಹಿಂದಿರುಗುತ್ತಿದ್ದಾಗ ಸಮುದ್ರದ ನಡುವೆ ಕೆಟ್ಟು ನಿಂತಿತ್ತು. ಈ ಸಂದರ್ಭ ಮೀನಿಗೆ ಹಾಕಿದ್ದ ಬಲೆಯನ್ನು ಎಳೆಯಲು ನವಾಝ್ ಯತ್ನಿಸುತ್ತಿದ್ದರು. ಇದನ್ನೂ ಓದಿ: ಡಿಸ್ಕಸ್ ಥ್ರೋ ವಿನೋದ್ ಕುಮಾರ್ ಕಂಚಿನ ಪದಕಕ್ಕೆ ತಡೆ

    Fisherman rescued at sea Mangaluru 1

    ಈ ವೇಳೆ ಭಾರೀ ಗಾತ್ರದ ಅಲೆ ಅಪ್ಪಳಿಸಿ ನವಾಝ್ ಸಮುದ್ರ ಪಾಲಾಗಿದ್ದರು. ಆದರೆ ಅವರು ಅರ್ಧ ಗಂಟೆ ಥರ್ಮಾಕೋಲಿನ ಸಹಾಯದಿಂದ ಈಜಾಡಿದ್ದಾರೆ. ಈ ವೇಳೆ ಅದೇ ದಾರಿಯಿಂದ ಮೀನುಗಾರಿಕೆ ಮುಗಿಸಿ ವಾಪಸಾಗುತ್ತಿದ್ದ ಮೀನುಗಾರರಿಂದ ರಕ್ಷಣೆಗೊಳಗಾಗಿದ್ದಾರೆ. ಇದನ್ನೂ ಓದಿ: ಶಾಂತಿಯಿಂದ ಆಗಲಿಲ್ಲ – ಈಗ ಪಂಜ್‍ಶೀರ್ ವಶಕ್ಕೆ ತಾಲಿಬಾನಿಗಳ ಕುತಂತ್ರ

    ಪ್ರೇಮ್ ಪ್ರಕಾಶ್, ಸೂರ್ಯಪ್ರಕಾಶ್, ಅನಿಲ್ ಮೊಂತೇರೋ, ಅಜಿತ್ ಬೆಂಗರೆ, ರಿತೀಶ್ ಹೊಯ್ಗೆ ಬಜಾರ್ ರಿಂದ ನವಾಝ್ ರನ್ನು ರಕ್ಷಣೆ ಮಾಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

  • ಲೇಡಿಸ್ ಬೀಚ್‍ನಲ್ಲಿ ಮೂರು ದಿನದಿಂದ ಆಹಾರವಿಲ್ಲದೆ ಸಿಲುಕಿಕೊಂಡಿದ್ದ ಮೀನುಗಾರನ ರಕ್ಷಣೆ

    ಲೇಡಿಸ್ ಬೀಚ್‍ನಲ್ಲಿ ಮೂರು ದಿನದಿಂದ ಆಹಾರವಿಲ್ಲದೆ ಸಿಲುಕಿಕೊಂಡಿದ್ದ ಮೀನುಗಾರನ ರಕ್ಷಣೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೈತಕೋಲ್ ಸಮೀಪದ ಲೇಡಿಸ್ ಬೀಚ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಮರಳಿ ಬರಲಾಗದೇ ಮೂರು ದಿನದಿಂದ ಅನ್ನಹಾರವಿಲ್ಲದೇ ಸಿಲುಕಿಕೊಂಡಿದ್ದರು. ಅವರನ್ನು ಕರಾವಳಿ ಕಾವಲುಪಡೆ ರಕ್ಷಣೆ ಮಾಡಿದೆ.

    UDP

    ಒಡಿಶಾ ಮೂಲದ ನಿರ್ಮಲ್ ಕುಸಮ್(45) ಎಂಬವರು ಕಳೆದ ಮೂರು ದಿನಗಳಿಂದ ಆಹಾರವಿಲ್ಲದೆ ಬೀಚ್‍ನಲ್ಲಿ ಸಿಲುಕಿಕೊಂಡಿದ್ದರು. ಕಾರವಾರದ ಕರಾವಳಿ ಕಾವಲುಪಡೆಯ ಸಿಪಿಐ ನಿಶ್ಚಲ್ ಕುಮಾರ್ ನೇತೃತ್ವದ ತಂಡ ರಕ್ಷಿಸಿ ಕಾರವಾರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
    ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಸಿಕ್ಕ ಚೀಲದಲ್ಲಿ ಸಿಕ್ತು ನವಜಾತ ಶಿಶು

    KWR

    ಒಡಿಶಾ ಮೂಲದ ನಿರ್ಮಲ್ ಕುಸಮ್ ಲೇಡಿಸ್ ಬೀಚ್ ಗೆ ಹೇಗೆ ತೆರಳಿದ್ದಾರೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದ್ದು, ಮೀನುಗಾರಿಕೆ ಕೆಲಸಕ್ಕಾಗಿ ಒರಿಸ್ಸಾದಿಂದ ಕಾರವಾರಕ್ಕೆ ಬಂದಿರುವುದಾಗಿ ಮಾತ್ರ ಮಾಹಿತಿ ದೊರೆತಿದೆ. ಮೂರು ದಿನದ ಹಿಂದೆ ಲೇಡಿಸ್ ಬೀಚ್ ಬಳಿ ಮೀನುಗಾರಿಕೆಗೆ ತೆರಳಿದ್ದಾಗ ಅಲ್ಲಿಯೇ ಉಳಿದಿರುವ ಸಾಧ್ಯತೆ ಇದ್ದು, ಮೂರು ದಿನದಿಂದ ಉಪವಾಸವಿದ್ದು ಅಲ್ಲೇ ದಿನ ಕಳೆದಿದ್ದಾರೆ. ಇಂದು ಅವರನ್ನು ರಕ್ಷಣೆ ಮಾಡಿ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಚೇತರಿಸಿಕೊಳ್ಳುತಿದ್ದು, ಹೆಚ್ಚಿನ ವಿವರ ತಿಳಿದುಬರಬೇಕಿದೆ. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಬುದ್ಧಿವಂತ ರಾಜಕಾರಣಿ: ಸಿ.ಟಿ ರವಿ

  • ತಾನೇ ಹಾಕಿದ ಬಲೆಗೆ ಸಿಲುಕಿ ಮೀನುಗಾರ ಸಾವು

    ತಾನೇ ಹಾಕಿದ ಬಲೆಗೆ ಸಿಲುಕಿ ಮೀನುಗಾರ ಸಾವು

    ಯಾದಗಿರಿ: ತಾನೇ ಹಾಕಿದ ಬಲೆಗೆ ಸಿಲುಕಿ ಮೀನುಗಾರ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುಂಡ್ಲೂರು ಸಮೀಪದಲ್ಲಿ ನಡೆದಿದೆ.

    CKD KRISHNA RIVER 2

    ವಡಗೇರಾ ತಾಲೂಕಿನ ಅಗ್ನಿಹಾಳ ಗ್ರಾಮದ ಮನು(20) ಈ ಅವಘಡದಲ್ಲಿ ಮೃತ ಮೀನುಗಾರ. ಇಂದು ಬೆಳಗ್ಗೆ ತನ್ನ ತಂದೆ ಜೊತೆಗೆ ಕೃಷ್ಣಾನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಮನು, ಥರಮಾಕೋಲ್ ದೋಣಿಯ ಮೂಲಕ ಬಲೆ ಹಾಕಲು ಮುಂದಾಗಿದ್ದ, ಈ ವೇಳೆ ಮನು ಕಾಲಿಗೆ ಬಲೆ ಸಿಕ್ಕು ಹಾಕಿಕೊಂಡಿದೆ. ಇದರಿಂದಾಗಿ ನೀರಿನಲ್ಲಿ ಕಾಲು ಅಲುಗಾಡಿಸಲಾಗದೇ ದೋಣಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ.

    fish man 2 medium

    ಸದ್ಯ ಸಹ ಮೀನುಗಾರರು ಮೃತದೇಹ ಹೊರ ತೆಗೆದಿದ್ದು, ನದಿ ತೀರದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಭಾಗಮಂಡಲ ಜಲಾವೃತ – ಘಟಪ್ರಭಾ, ಕೃಷ್ಣ ನದಿ ತೀರದ ಜನರಿಗೆ ಪ್ರವಾಹ ಭೀತಿ

  • ಬೈಂದೂರು ದೋಣಿ ದುರಂತ- ನಾಲ್ವರ ಪೈಕಿ ಒಬ್ಬ ಮೀನುಗಾರನ ಮೃತದೇಹ ಪತ್ತೆ

    ಬೈಂದೂರು ದೋಣಿ ದುರಂತ- ನಾಲ್ವರ ಪೈಕಿ ಒಬ್ಬ ಮೀನುಗಾರನ ಮೃತದೇಹ ಪತ್ತೆ

    ಉಡುಪಿ: ಬೈಂದೂರು ತಾಲೂಕಿನಲ್ಲಿ ನಡೆದ ದೋಣಿ ದುರಂತಕ್ಕೆ ಸಂಬಂಧಪಟ್ಟಂತೆ ಓರ್ವ ಮೀನುಗಾರರ ಮೃತದೇಹ ಪತ್ತೆಯಾಗಿದೆ. ದುರ್ಘಟನೆ ನಡೆದ ಕಿರಿಮಂಜೇಶ್ವರ ದಿಂದ ಕೊಂಚ ದೂರದಲ್ಲಿರುವ ನಾಗೂರು ಪ್ರದೇಶದಲ್ಲಿ ಮೃತದೇಹ ಬೀಚ್ ಬದಿಯಲ್ಲಿ ಕಾಣಿಸಿಕೊಂಡಿದೆ.

    ಕಣ್ಮರೆಯಾದವರ ಪೈಕಿ 55 ವರ್ಷದ ನಾಗ ಕಾರ್ವಿ ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದರು. ಕೋಸ್ಟ್ ಗಾರ್ಡ್ ಕರಾವಳಿ ಕಾವಲು ಪಡೆ, ಸ್ಥಳೀಯ ಮೀನುಗಾರರು ಪೊಲೀಸರು ಶೋಧ ನಡೆಸಿದ್ದರು. ಕ್ರೈನ್, ಬಲೆಗಳನ್ನು ಬಳಸಿ ಪತ್ತೆಗಾಗಿ ಹರಸಾಹಸ ಮಾಡಲಾಗಿತ್ತು. ಕತ್ತಲಾದ್ದರಿಂದ ಶೋಧಕಾರ್ಯವನ್ನು ನಿಲ್ಲಿಸಿದ್ದರು. ಇಂದು ಬೆಳಗ್ಗೆ ನಾಗರಾಜ ಖಾರ್ವಿ ಮೃತದೇಹ ಪತ್ತೆಯಾಗಿದ್ದು, ಮಿಕ್ಕುಳಿದ ಮೂವರಿಗಾಗಿ ಶೋಧ ಮುಂದುವರಿದಿದೆ.

    UDP Byndoor Boat 1 medium

    ಅರಬ್ಬಿ ಸಮುದ್ರದಲ್ಲಿ ಅಲೆಗಳ ನಡುವೆ ದೋಣಿಯಲ್ಲಿ ಇಳಿದು ಹುಡುಕಾಟ ನಡೆಸುವುದು ಕಷ್ಟಸಾಧ್ಯ ಎಂದು ಸ್ಥಳೀಯರು ತಿಳಿಸಿದ್ದಾರೆ. ಶೇಖರ್ ಖಾರ್ವಿ, ಲಕ್ಷ್ಮಣ್ ಖಾರ್ವಿ, ಮಂಜುನಾಥ ಖಾರ್ವಿ ಕಣ್ಮರೆಯಾಗಿದ್ದು ಹುಡುಕಾಟ ಮುಂದುವರಿದಿದೆ. ನಿತ್ಯಾನಂದ, ಅಣ್ಣಪ್ಪ, ಸತೀಶ್, ಮಹಾಬಲ, ಜನಾರ್ದನ್, ವೆಂಕಟರಮಣ್, ಚಂದ್ರಶೇಖರ್, ಹಾಗೂ ಚಂದ್ರ ಪಾರಾಗಿದ್ದು, ಆಸ್ಪತ್ರೆ ಮತ್ತು ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

  • ನಾಪತ್ತೆಯಾಗಿದ್ದ ಎರಡು ದಿನದ ನಂತ್ರ ಮೀನುಗಾರರು ಶವವಾಗಿ ಪತ್ತೆ

    ನಾಪತ್ತೆಯಾಗಿದ್ದ ಎರಡು ದಿನದ ನಂತ್ರ ಮೀನುಗಾರರು ಶವವಾಗಿ ಪತ್ತೆ

    ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಸಿದ್ದನಾಥ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಮೀನುಗಾರರು ಎರಡು ದಿನಗಳ ಬಳಿಕ ಶವವಾಗಿ ಇಂದು ಪತ್ತೆಯಾಗಿದ್ದಾರೆ.

    ಸಿದ್ದನಾಥ ಆರ್ಸಿಯ ಆಲಮಟ್ಟಿ ಡ್ಯಾಮ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದ ಪರಶುರಾಮ ಲಮಾಣಿ (36) ಮತ್ತು ರಮೇಶ ಲಮಾಣಿ (38) ಶವವಾಗಿ ಪತ್ತೆಯಾಗಿದ್ದಾರೆ.

    vlcsnap 2020 06 13 15h17m34s188

    ಗುರುವಾರ ಸಂಜೆ ತೆಪ್ಪದ ಮೂಲಕ ಮೂವರು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಭಾರೀ ಮಳೆಗಾಳಿಗೆ ತೆಪ್ಪ ಮುಗುಚಿ ಬಿದ್ದಿದೆ. ಹೀಗಾಗಿ ಮೂವರ ಪೈಕಿ ಅಕ್ಷಯ ಲಮಾಣಿ ಎಂಬಾತ ಈಜಿ ದಡ ಸೇರಿದ್ದರು. ಆದರೆ ಉಳಿದ ಇಬ್ಬರೂ ಇನ್ನೂ ಪತ್ತೆಯಾಗಿರಲಿಲ್ಲ.

    ಈ ಹಿನ್ನೆಲೆಯಲ್ಲಿ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಶೋಧ ನಡೆಸಲಾಗಿತ್ತು. ಆದರೆ ಪತ್ತೆಯಾಗಿರಲಿಲ್ಲ. ಆದರೆ ಎರಡು ದಿನಗಳ ನಂತರ ಪರಶುರಾಮ ಮತ್ತು ರಮೇಶ ಶವವಾಗಿ ನದಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.

    ಈ ಕುರಿತು ಕೋಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    BIJ 3 1

  • ಮೀನುಗಾರಿಕೆಗೆ ತೆರಳಿದ್ದ ಮೂವರಲ್ಲಿ ಇಬ್ಬರು ನಾಪತ್ತೆ

    ಮೀನುಗಾರಿಕೆಗೆ ತೆರಳಿದ್ದ ಮೂವರಲ್ಲಿ ಇಬ್ಬರು ನಾಪತ್ತೆ

    ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಸಿದ್ದನಾಥ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದಾರೆ.

    ಪರಶುರಾಮ ಲಮಾಣಿ(35) ಹಾಗೂ ರಮೇಶ ಲಮಾಣಿ (38) ನಾಪತ್ತೆಯಾಗಿರುವ ಮೀನುಗಾರರು. ಗುರುವಾರ ಸಂಜೆ ತೆಪ್ಪದ ಮೂಲಕ ಮೂವರು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಭಾರೀ ಮಳೆಗಾಳಿಗೆ ತೆಪ್ಪ ಮುಗಿಚಿ ಬಿದ್ದಿದೆ. ಹೀಗಾಗಿ ಮೂವರ ಪೈಕಿ ಅಕ್ಷಯ ಲಮಾಣಿ ಎಂಬಾತ ಈಜಿ ದಡ ಸೇರಿದ್ದಾನೆ.

    BIJ 1

    ಆದರೆ ಉಳಿದ ಇಬ್ಬರೂ ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ಭೇಟಿ ಕೊಲ್ಹಾರ ತಹಶೀಲ್ದಾರ್ ಎಂ ಎಸ್ ಭಾಗವಾನ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ನಾಪತ್ತೆಯಾಗಿರುವವರಿಗಾಗಿ ಸ್ಥಳಿಯ ಮೀನುಗಾರರ ಸಹಾಯದೊಂದಿಗೆ ಶೋಧ ನಡೆಸಲಾಗುತ್ತಿದೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    BIJ 2