Tag: ಟ್ರಾಫಿಕ್ ಪೊಲೀಸ್

  • ಶಿಕ್ಷಣ ಸಚಿವರ ಬೆಂಗಾವಲು ವಾಹನ ಡಿಕ್ಕಿ – ರಸ್ತೆಯಲ್ಲೇ ಅಂಬುಲೆನ್ಸ್ ಪಲ್ಟಿ, ರೋಗಿ ಪಾರು!

    ಶಿಕ್ಷಣ ಸಚಿವರ ಬೆಂಗಾವಲು ವಾಹನ ಡಿಕ್ಕಿ – ರಸ್ತೆಯಲ್ಲೇ ಅಂಬುಲೆನ್ಸ್ ಪಲ್ಟಿ, ರೋಗಿ ಪಾರು!

    ತಿರುವನಂತಪುರಂ: ಕೇರಳ ಶಿಕ್ಷಣ ಸಚಿವರ (Kerala Education Minister) ಬೆಂಗಾವಲು ಪಡೆ ವಾಹನ ಅಂಬುಲೆನ್ಸ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಅಂಬುಲೆನ್ಸ್‌ (Ambulance) ನಡುರಸ್ತೆಯಲ್ಲೇ ಎರಡು ಪಲ್ಟಿ ಹೊಡೆದು ಬಿದ್ದಿದೆ. ಈ ವೇಳೆ ರಸ್ತೆಯಲ್ಲಿ ಕರ್ತವ್ಯ ನಿರತರಾಗಿದ್ದ ಇಬ್ಬರು ಪೊಲೀಸರು ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾಗಿರುವ ಘಟನೆ ಕೇರಳದ ತಿರುನಂತರಪುರಂನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಬುಧವಾರ ಘಟನೆ ನಡೆದಿದ್ದು ರಸ್ತೆ ಅಪಘಾತದಲ್ಲಿ (Road Accident) ರೋಗಿಯೂ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಬೆಂಗಾವಲು ಪಡೆ ವಾಹನ ಚಾಲಕ ಹಾಗೂ ಅಂಬುಲೆನ್ಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ACCIDENT

    ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ (V Sivankutty) ಅವರ ಬೆಂಗಾವಲು ಪಡೆಯ ವಾಹನ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ವೇಳೆ ಡಿಕ್ಕಿ ಹೊಡೆದಿದೆ. ನಂತರ ಅಂಬುಲೆನ್ಸ್‌ ಎರಡು ಪಲ್ಟಿ ಹೊಡೆದು ಬಿದ್ದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಚಂದ್ರಯಾನ-3 ಭಾರತದ ಭರವಸೆ, ಕನಸುಗಳನ್ನ ಹೊತ್ತೊಯ್ಯಲಿದೆ – ಪ್ರಧಾನಿ ಶುಭಹಾರೈಕೆ

    ಸಚಿವರು ಬರುತ್ತಿದ್ದ ಕಾರಣಕ್ಕಾಗಿ ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಪೊಲೀಸರು ಮುಂದಾಗಿದ್ದರು. ಆದ್ರೆ ಸಚಿವರ ಬೆಂಗಾವಲು ವಾಹನ ಪ್ರವೇಶಿಸುವ ಸಮಯಕ್ಕೆ ಅಂಬುಲೆನ್ಸ್ ಮಧ್ಯೆ ನುಗ್ಗಿದ್ದರಿಂದ ಡಿಕ್ಕಿ ಹೊಡೆದಿದೆ. ಕೂಡಲೇ ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಘಟನೆ ಬಗ್ಗೆ ಸಚಿವ ಶಿವನಕುಟ್ಟಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಮೂರೇ ದಿನದ ಅಂತರದಲ್ಲಿ ಮತ್ತೊಂದು ಚೀತಾ ಸಾವು – 4 ತಿಂಗಳಲ್ಲಿ 8ನೇ ಘಟನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • France Shooting – ಕಾರು ನಿಲ್ಲಿಸಿದ್ದಕ್ಕೆ ಪೊಲೀಸರಿಂದ ಶೂಟೌಟ್‌ – ಹತ್ಯೆ ಖಂಡಿಸಿ ಹಿಂಸಾಚಾರ

    France Shooting – ಕಾರು ನಿಲ್ಲಿಸಿದ್ದಕ್ಕೆ ಪೊಲೀಸರಿಂದ ಶೂಟೌಟ್‌ – ಹತ್ಯೆ ಖಂಡಿಸಿ ಹಿಂಸಾಚಾರ

    ಪ್ಯಾರಿಸ್‌: ಕಾರು ನಿಲ್ಲಿಸದ್ದಕ್ಕೆ 17 ವರ್ಷದ ಯುವಕನನ್ನು ಗುಂಡಿನ ದಾಳಿ (France Shooting) ನಡೆಸಿ ಹತ್ಯೆ ಮಾಡಿದ್ದನ್ನು ಖಂಡಿಸಿ ಫ್ರಾನ್ಸ್ (France) ದೇಶಾದ್ಯಂತ ಹಿಂಸಾಚಾರ (Violence)  ನಡೆದಿದೆ.

    ಕಲ್ಲು ತೂರಾಟ ಮಾಡಿರುವ ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. 40ಕ್ಕೂ ಹೆಚ್ಚು ಕಾರುಗಳು ಧಗಧಗಿಸಿವೆ. ಘರ್ಷಣೆಗಳಲ್ಲಿ 25ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.  ಇದನ್ನೂ ಓದಿ: ಚೀನಾ, ಪಾಕಿಸ್ತಾನದೊಂದಿಗೆ ಸಂಬಂಧ ಕಷ್ಟ: ಜೈಶಂಕರ್

    ಪೊಲೀಸರು ಪರಿಸ್ಥಿತಿ ನಿಭಾಯಿಸಲು ಟಿಯರ್ ಗ್ಯಾಸ್ ಪ್ರಯೋಗಿಸಿದ್ದಾರೆ. 160ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಚಾಲಕನನ್ನು ಕೊಂದ ಪೊಲೀಸರ ಕೃತ್ಯವನ್ನು ಖುದ್ದು ದೇಶಾಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಖಂಡಿಸಿದ್ದಾರೆ. ಇದು ಕ್ಷಮಿಸಲಾಗದ ಅಪರಾಧ ಎಂದು ಅಭಿಪ್ರಾಯಪಟ್ಟು ಜನ ಶಾಂತಿಯಿಂದ ಇರಬೇಕು ಎಂದು ಕರೆ ನಿಡಿದ್ದಾರೆ.

    ಚಾಲಕನ ಮೇಲೆ ಗುಂಡು ಹಾರಿಸಿದ್ದ ಪೊಲೀಸ್ ಅಧಿಕಾರಿಯನ್ನು ಬಂಧಿಸಿ ಹತ್ಯೆ ಆರೋಪ ಹೊರಿಸಿ ಕೇಸ್ ದಾಖಲಿಸಲಾಗಿದೆ. ಪ್ಯಾರಿಸ್‌ ಸುತ್ತಮುತ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

    ನಡೆದಿದ್ದು ಏನು?
    ಮಂಗಳವಾರ ಪ್ಯಾರಿಸ್‌ನಲ್ಲಿ ಪೊಲೀಸರು ಎಂದಿನಿಂದ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಚೆಕ್‌ಪಾಯಿಂಟ್‌ನಲ್ಲಿ ಕಾರು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಉತ್ತರ ಆಫ್ರಿಕಾದ ಮೂಲದ ಚಾಲಕ ಕಾರು ಚಲಾಯಿಸಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಿಯಾಯಿತಿ ಕೊಟ್ಟ 9 ದಿನಗಳಲ್ಲಿ 100 ಕೋಟಿಗೂ ಅಧಿಕ ದಂಡ ಸಂಗ್ರಹ

    ರಿಯಾಯಿತಿ ಕೊಟ್ಟ 9 ದಿನಗಳಲ್ಲಿ 100 ಕೋಟಿಗೂ ಅಧಿಕ ದಂಡ ಸಂಗ್ರಹ

    ಬೆಂಗಳೂರು: ರಾಜ್ಯದಲ್ಲಿ 50 ಪರ್ಸೆಂಟ್ ಡಿಸ್ಕೌಂಟ್ ದಂಡಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಶನಿವಾರ ಕೊನೆಯ ದಿನವಾಗಿದ್ದು, ದಂಡದ ಮೊತ್ತ 100 ಕೋಟಿ ಗಡಿ ದಾಟಿದೆ. ದಂಡ ಪಾವತಿಗೆ ಅವಧಿ ವಿಸ್ತರಣೆಗೆ ಸರ್ಕಾರ ಮುಂದಾಗುವ ಸಾಧ್ಯತೆ ಹೆಚ್ಚಾಗಿದ್ದು, ಈ ಬಗ್ಗೆ ಸಾರಿಗೆ ಇಲಾಖೆಯೊಂದಿಗೆ (Transport Department) ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ಇದನ್ನೂ ಓದಿ: ಲಾರಿಗೆ ಡಿಕ್ಕಿ ಹೊಡೆದ ಕಾರು – 2 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವ ದಂಪತಿ ಸಾವು

    TRAFFIC 3

    ಕೊನೆಯ ದಿನವಾದ ಶನಿವಾರ ದಂಡ ಪಾವತಿಗೆ ನೂಕು ನುಗ್ಗಲು ಹೆಚ್ಚಾಗಿತ್ತು. ಕೆಲ ಪೊಲೀಸ್ ಠಾಣೆ (Bengaluru Traffic Police) ಮುಂಭಾಗ ಜನರು ಸಾಲುಗಟ್ಟಿ ನಿಂತಿದ್ದರಿಂದ ಪೊಲೀಸರೂ ಹೈರಾಣಾಗಿದ್ದರು. ಇದನ್ನೂ ಓದಿ: `ರಿಷಬ್’ ಜೊತೆ ಕಾಣಿಸಿಕೊಂಡ ಊರ್ವಶಿ ರೌಟೇಲಾ: `ಕಾಂತಾರ 2′ ಬಗ್ಗೆ ಅಪ್‌ಡೇಟ್

    26.26 ಲಕ್ಷ ಸಂಚಾರ ನಿಮಯ ಉಲ್ಲಂಘನೆ (Traffic Violations) ಮಾಡಿರೋ ಕೇಸ್‌ಗಳು ವಿಲೇವಾರಿಯಾಗಿದೆ. ಒಟ್ಟಿನಲ್ಲಿ ಆಫ್ ರೇಟ್, ಚೀಪ್ ರೇಟ್‌ಗೆ ಬೆಂಗಳೂರಿಗರು (Bengaluru) ಕೆಲಸ ಕಾರ್ಯ ಬಿಟ್ಟು ಕೇಸ್ ಕ್ಲಿಯರ್ ಮಾಡಿಕೊಂಡಿದ್ದರೆ, ಮತ್ತಷ್ಟು ಮಂದಿ ಕೊನೆ ದಿನಾಂಕದವರೆಗೆ ಕಾದು ದಂಡ ಕಟ್ಟೋದಕ್ಕೆ ಆಗದೇ ಸುಮ್ಮನಾಗಿದ್ದಾರೆ.

    TRAFFIC 1

    ಈ ಬಗ್ಗೆ `ಪಬ್ಲಿಕ್ ಟಿವಿ’ಯೊಂದಿಗೆ (Public TV) ಮಾತನಾಡಿದ ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಪ್ಪ, 50 ಪರ್ಸೆಂಟ್ ದಂಡ ಪಾವತಿಸುವ ಅವಧಿ ವಿಸ್ತರಣೆ ಮಾಡುವ ಬಗ್ಗೆ ಚರ್ಚಿಸಲು ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗಿದೆ. ಸರ್ಕಾರ ಸಹ ಈ ಬಗ್ಗೆ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಿಯಾಯ್ತಿ ದಂಡ ವಸೂಲಿಗಿಂದು ಕೊನೆ ದಿನ- ಬೆಂಗ್ಳೂರಲ್ಲಿ ನಕಲಿ ನಂಬರ್ ಜಾಲ ಬೆಳಕಿಗೆ

    ರಿಯಾಯ್ತಿ ದಂಡ ವಸೂಲಿಗಿಂದು ಕೊನೆ ದಿನ- ಬೆಂಗ್ಳೂರಲ್ಲಿ ನಕಲಿ ನಂಬರ್ ಜಾಲ ಬೆಳಕಿಗೆ

    ಬೆಂಗಳೂರು: ರಿಯಾಯ್ತಿ ದರದಲ್ಲಿ ದಂಡ ವಸೂಲಿಗೆ ಮುಂದಾಗಿರೋ ಸಂಚಾರಿ ಪೊಲೀಸ್ ಇಲಾಖೆ (Traffic Police) ಗೆ ಮತ್ತೊಂದು ತಲೆನೋವು ಶುರುವಾಗಿದೆ. ದಂಡ (Traffic Fine) ವಸೂಲಿ ವೇಳೆ ಈ ವಿಚಾರ ತಿಳಿದು ಪೊಲೀಸರೇ ಶಾಕ್ ಆಗಿದ್ದಾರೆ.

    TRAFFIC FINE

    ಹೌದು. ಬೆಂಗಳೂರು ಸಂಚಾರಿ ಪೊಲೀಸರು ರಿಯಾಯ್ತಿ ದರದಲ್ಲಿ ವಾಹನಗಳ ದಂಡ ವಸೂಲಿ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಪ್ರತಿದಿನ ಕೋಟಿ ಕೋಟಿ ದಂಡ ಕೂಡ ಕಟ್ಟಿ ವಾಹನಗಳ ಮೇಲಿನ ಕೇಸ್ ಗಳನ್ನು ಕ್ಲಿಯರ್ ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ದಂಡದ ಸಮಯವನ್ನು ವಿಸ್ತರಿಸುವಂತೆ ಒತ್ತಾಯವೂ ಕೇಳಿ ಬರುತ್ತಿದೆ. ಈ ದಂಡ ಕಟ್ಟೋಕೆ ಬಂದ ವಾಹನ ಸಮಸ್ಯೆಗಳನ್ನು ಕೇಳಿ ಪೊಲೀಸರೇ ಫುಲ್ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಸಂಚಾರಿ ಪೊಲೀಸರ ಖಜಾನೆಗೆ ಕೋಟಿ ಕೋಟಿ ದಂಡ – 6 ದಿನದಲ್ಲಿ 51 ಕೋಟಿ ವಸೂಲಿ

    TRAFFIC FINE 1

    ನಕಲಿ ನಂಬರ್ ಪ್ಲೇಟ್‍ಗಳನ್ನು ಬಳಸಿಕೊಂಡು ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಎಷ್ಟೋ ಜನರು, ತಮ್ಮ ವಾಹನಗಳನ್ನು ಬಳಸದೇ ಇರೋ ದಿನಗಳಲ್ಲೂ, ಫೈನ್ ಬಿದ್ದಿವೆ. ತಮ್ಮದಲ್ಲದ ಏರಿಯಾಗಳಲ್ಲೂ ಅದೇ ಗಾಡಿಯ ನಂಬರ್ ಪ್ಲೇಟ್ ಇರುವ ವಾಹನಗಳು ನಿಯಮ ಉಲ್ಲಂಘನೆ ಮಾಡಿ ಕೇಸ್ ಬಿದ್ದಿವೆ. ವಾಹನಗಳ ದಂಡ ಕಟ್ಟೋಕೆ ಬಂದ ಜನರಿಗೆ ಈ ಫೇಕ್ ನಂಬರ್ ಪ್ಲೇಟ್ ಬಳಸಿರೋದು ನೋಡಿ ಶಾಕ್ ಆಗಿದ್ದಾರೆ.

    SALEEM

    ಕಳೆದ ಒಂದು ವಾರದಲ್ಲಿ ಬರೋಬ್ಬರಿ ಐದು ಸಾವಿರಕ್ಕೂ ಹೆಚ್ಚು ನಕಲಿ ನಂಬರ್ ಪ್ಲೇಟ್‍ಗಳ ಕೇಸ್‍ಗಳು ಪತ್ತೆಯಾಗಿವೆ. ಕೆಲವರು ಒಂದು ಸಂಖ್ಯೆಯನ್ನು ಚೇಂಜ್ ಮಾಡಿ ವಾಹನಗಳನ್ನು ಬಳಸ್ತಿದ್ದಾರೆ. ಇನ್ನೂ ಕೆಲವರು ಸಂಪೂರ್ಣ ನಂಬರನ್ನೇ ಚೇಂಜ್ ಮಾಡಿ ಬಳಸುತ್ತಿದ್ದಾರೆ. ಹಾಗಾಗಿ ಇಂಥವರನ್ನು ಪತ್ತೆ ಮಾಡಲೇಬೇಕಾದ ಪರಿಸ್ಥಿತಿಗೆ ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ನಕಲಿ ನಂಬರ್ ಪ್ಲೇಟ್ (Fake Number Plate) ಗಳನ್ನು ಬಳಸುವ ವಾಹನ ಸವಾರರ ಪತ್ತೆ ಮಾಡೋಕೆ ವಿವಿಧ ತಂಡವಾಗಿ ಕೆಲಸ ಮಾಡೋಕೆ ಪೊಲೀಸರು ನಿರ್ಧಾರ ಮಾಡಿದ್ದಾರೆ.

    traffic fine

    ನಕಲಿ ನಂಬರ್ ಪ್ಲೇಟ್‍ಗಳ ವಾಹನ ಸವಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಸಿದ್ಧತೆ ಕೂಡ ನಡೆಸಲಾಗಿದೆ. ಸದ್ಯ ಫೈನ್ ಅಮೌಂಟ್ ಸಮಯ ವಿಸ್ತರಣೆ ಮತ್ತಷ್ಟು ದಿನ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ. ಇಂದು ಈ ಬಗ್ಗೆ ಅಧಿಕೃತ ಅದೇಶ ಬರುವ ನಿರೀಕ್ಷೆ ಇದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟ್ರಾಫಿಕ್‌ ದಂಡಕ್ಕೆ ಶೇ.50 ಡಿಸ್ಕೌಂಟ್‌ – ಯಾವುದಕ್ಕೆ ಎಷ್ಟು?

    ಟ್ರಾಫಿಕ್‌ ದಂಡಕ್ಕೆ ಶೇ.50 ಡಿಸ್ಕೌಂಟ್‌ – ಯಾವುದಕ್ಕೆ ಎಷ್ಟು?

    ಬೆಂಗಳೂರು: ಟ್ರಾಫಿಕ್ ದಂಡ (Traffic Fine) ಪಾವತಿಗೆ ಶೇ.50 ಡಿಸ್ಕೌಂಟ್ ಮಾಡಿ ಸರ್ಕಾರದ ಆದೇಶ ಪ್ರಕಟಿಸಿದ ಬೆನ್ನಲ್ಲೇ ಟ್ರಾಫಿಕ್ ಪೊಲೀಸರಿಂದ ಕೇಸ್‌ಗಳ ಪಟ್ಟಿ ಬಿಡುಗಡೆಯಾಗಿದೆ.

    ಸಾರಿಗೆ ಇಲಾಖೆಯ ಫೆ.11ರ ಒಳಗೆ ಇತ್ಯರ್ಥವಾಗುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ದಂಡದ ಮೊತ್ತದಲ್ಲಿ ಶೇ.50ರಷ್ಟು ವಿನಾಯಿತಿ ನೀಡಿ ಆದೇಶ ಪ್ರಕಟಿಸಲಾಗಿದೆ.

    ಯಾವ ಪ್ರಕರಣಗಳಿಗೆ ಎಷ್ಟು ದಂಡ? ಎಷ್ಟು ಡಿಸ್ಕೌಂಟ್‌ (Discount) ಅಂತಾ ಚಾರ್ಟ್ ಬಿಡುಗಡೆ ಮಾಡಲಾಗಿದ್ದು ಸವಾರರು ಪರಿಶೀಲಿಸಬಹುದು.

    ಯಾವುದಕ್ಕೆ ಎಷ್ಟು ದಂಡ? ರೂಪಾಯಿನಲ್ಲಿ ನೀಡಲಾಗಿದೆ
    ಪುಟ್ ಪಾತ್ ಪಾರ್ಕಿಂಗ್: 1,000 ರೂ. – 500 ರೂ.

    ಡೆಫೆಕ್ಟೀವ್ ಪ್ಲೇಟ್ –
    ಮೊದಲ ತಪ್ಪು: 500 – 250
    ಎರಡನೇ ತಪ್ಪು: 1,500 – 750

    ಜಂಪಿಂಗ್ ಸಿಗ್ನಲ್: 500 – 250
    ಓವರ್ ಸ್ಪೀಡ್: 1,000 – 500  ಇದನ್ನೂ ಓದಿ: Union Budget 2023ːಕರ್ನಾಟಕಕ್ಕೆ ಬಂಪರ್ ಕೊಡುಗೆ – ರೈಲ್ವೆಗೆ ದಾಖಲೆಯ 7,561 ಕೋಟಿ ಅನುದಾನ

    ಒನ್ ವೇ
    ಫಸ್ಟ್ ಟೈಂ: 500 – 250
    ರಿಪೀಟೆಡ್: 1500 – 750

    ಫುಟ್ ಫಾತ್ ಡ್ರೈವಿಂಗ್
    ಫಸ್ಟ್ ಟೈಂ: 500 – 250
    ರಿಪೀಟೆಡ್ : 1500 – 750

    ಮೊಬೈಲ್‌ ಬಳಕೆ (LMV)
    ಫಸ್ಟ್ ಟೈಂ: 3,000 – 1,500
    ರಿಪೀಟೆಡ್: 10,000 – 5,000

    ಯೂಸಿಂಗ್ ಮೊಬೈಲ್ ಬೈಕ್: 1500 -750
    ಹೆಲ್ಮೆಟ್ ಧರಿಸದೇ ಚಾಲನೆ : 500 – 250

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟ್ರಾಫಿಕ್ ಇಲಾಖೆ ಆಫರ್‌ಗೆ ಸವಾರರಿಂದ ಭರ್ಜರಿ ರೆಸ್ಪಾನ್ಸ್- ಮೊದಲ ದಿನವೇ 5 ಕೋಟಿ ದಂಡ ಸಂಗ್ರಹ

    ಟ್ರಾಫಿಕ್ ಇಲಾಖೆ ಆಫರ್‌ಗೆ ಸವಾರರಿಂದ ಭರ್ಜರಿ ರೆಸ್ಪಾನ್ಸ್- ಮೊದಲ ದಿನವೇ 5 ಕೋಟಿ ದಂಡ ಸಂಗ್ರಹ

    ಬೆಂಗಳೂರು: ಸಂಚಾರ ನಿಯಮಗಳನ್ನ ಉಲ್ಲಂಘನೆ ಮಾಡಿ ದಂಡ ಕಟ್ಟದೆ ತಿರುಗುತ್ತಿರುವವರಿಗೆ ರಾಜ್ಯ ಸರ್ಕಾರ (State Government) ಬಂಪರ್ ಆಫರ್ ನೀಡಿದೆ. ನಿಮ್ಮ ವಾಹನದ ಮೇಲೆ ಸಂಚಾರ ನಿಯಮಗಳ ಉಲ್ಲಂಘನೆ ಕೇಸ್ ಇದ್ರೆ ಫೆಬ್ರವರಿ 11ರೊಳಗೆ ದಂಡ (Traffic Fine) ಕಟ್ಟಿಬಿಡಿ ಬರೋಬ್ಬರಿ 50 ಪರ್ಸೆಂಟ್ ಡಿಸ್ಕೌಂಟ್ ಸಿಗಲಿದೆ.

    TRAFIC FINE 1

    ಟ್ರಾಫಿಕ್ ಪೊಲೀಸರ 50% ಆಫರ್‍ಗೆ ಬೆಂಗಳೂರಿಗರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇಂದು ಒಂದೇ ದಿನ ದಾಖಲೆ ಮಟ್ಟದಲ್ಲಿ ಟ್ರಾಫಿಕ್ ಫೈನ್ ಸಂಗ್ರಹವಾಗಿದೆ. 50% ಡಿಸ್ಕೌಂಟ್ ನೀಡಿದ ಹಿನ್ನೆಲೆಯಲ್ಲಿ ಮೊದಲ ದಿನವೇ ಮೂರು ಕೋಟಿಗೂ ಹೆಚ್ಚು ಅಧಿಕ ದಂಡ ಸಂಗ್ರಹವಾಗಿದೆ. ಸಂಜೆ 5 ಗಂಟೆವರೆಗೂ ಬರೋಬ್ಬರಿ 3 ಕೋಟಿಗೂ ಅಧಿಕ ಫೈನ್ ಕಟ್ಟಲಾಗಿದೆ. ಇದನ್ನೂ ಓದಿ: ಟ್ರಾಫಿಕ್‌ ನಿಯಮ ಉಲ್ಲಂಘನೆ – ದಂಡ ಪಾವತಿಗೆ 50% ಡಿಸ್ಕೌಂಟ್‌

    TRAFIC FINE

    ಕೆಲವರು ಪೊಲೀಸ್ ಠಾಣೆಗಳಿಗೆ ತೆರಳಿ ದಂಡ ಪಾವತಿಸಿದ್ರೆ, ಇನ್ನೂ ಕೆಲವರು ಪೇಟಿಯಂನಲ್ಲಿ, ಇನ್ನು ಕೆಲವರು ಟ್ರಾಫಿಕ್ ಪೊಲೀಸರು ನೀಡಿದ ಆ್ಯಪ್, ಪಿಡಿಎನಲ್ಲಿ ದಂಡ ಕಟ್ಟಿದ್ರು. ಪಿಡಿಎಯಲ್ಲಿ 61,174 ಕೇಸುಗಳಲ್ಲಿ 1,48,65,100 ಕೋಟಿ ದಂಡ ಸಂಗ್ರಹವಾದ್ರೆ, ಪೇಟಿಎಂ ಆಪ್‍ನಿಂದ 75,185 ಕೇಸುಗಳಲ್ಲಿ 2,30,77,900 ಕೋಟಿ, ಟಿಎಂಸಿ ಕೇಂದ್ರದಲ್ಲಿ 337 ಕೇಸ್‍ಗಳಲ್ಲಿ 89,650 ರೂ, ಬೆಂಗಳೂರು ಓನ್‍ನಲ್ಲಿ 6,161 ಕೇಸ್‍ಗಳಲ್ಲಿ 16,21,600 ರೂ ದಂಡ, ಒಟ್ಟು 1,42,859 ಕೇಸುಗಳಲ್ಲಿ 3,96,54,250 ಕೋಟಿ ರೂ ದಂಡ ಸಂಗ್ರಹ ಮಾಡಲಾಗಿದೆ.

    TRAFFIC POLICE 2 1

    50% ಆಫರ್ ಫೆಬ್ರವರಿ 11ರವರೆಗೂ ಅನ್ವಯವಾಗಲಿದೆ. ನೀವು ಕೂಡ ಸಂಚಾರ ನಿಯಮವನ್ನ ಉಲ್ಲಂಘನೆ ಮಾಡಿ ದಂಡ ಪಾವತಿ ಮಾಡದೇ ಇದ್ರೆ, ಆಫರ್ ಇರುವಾಗ್ಲೆ ಪಾವತಿ ಮಾಡ್ಕೊಳ್ಳಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫೈನ್ ಕಟ್ಟು ಎಂದಿದ್ದಕ್ಕೆ ಟ್ರಾಫಿಕ್ ಪೊಲೀಸ್‌ನನ್ನೇ ಕಾರಿನ ಬಾನೆಟ್ ಮೇಲೆ 4 ಕಿ.ಮೀ ಹೊತ್ತೊಯ್ದ

    ಫೈನ್ ಕಟ್ಟು ಎಂದಿದ್ದಕ್ಕೆ ಟ್ರಾಫಿಕ್ ಪೊಲೀಸ್‌ನನ್ನೇ ಕಾರಿನ ಬಾನೆಟ್ ಮೇಲೆ 4 ಕಿ.ಮೀ ಹೊತ್ತೊಯ್ದ

    ಭೋಪಾಲ್: ಕಾರು ಚಾಲನೆಯ ವೇಳೆ ಫೋನ್‌ನಲ್ಲಿ ಮಾತನಾಡುತ್ತಿದ್ದುದಕ್ಕೆ ದಂಡ (Fine) ಪಾವತಿಸಲು ಹೇಳಿದ ಟ್ರಾಫಿಕ್ ಪೊಲೀಸ್‌ನನ್ನು (Traffic Police) 4 ಕಿ.ಮೀ ದೂರದವರೆಗೆ ಕಾರಿನ ಬಾನೆಟ್ (Car Bonnet) ಮೇಲೆ ಅಪಾಯಕರ ರೀತಿಯಲ್ಲಿ ವ್ಯಕ್ತಿ ಹೊತ್ತೊಯ್ದ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ (Indore) ಸೋಮವಾರ ನಡೆದಿದೆ.

    ಟ್ರಾಫಿಕ್ ಹೆಡ್ ಕಾನ್‌ಸ್ಟೆಬಲ್ ಶಿವಸಿಂಗ್ ಚೌಹಾಣ್‌ನನ್ನು ವ್ಯಕ್ತಿಯೊಬ್ಬ ಅಪಾಯಕರ ರೀತಿಯಲ್ಲಿ ಕಾರಿನ ಬಾನೆಟ್ ಮೇಲೆ ಎಳೆದೊಯ್ದಿದ್ದಾನೆ. ವ್ಯಕ್ತಿ ಕಾರು ಚಾಲನೆ ಮಾಡುತ್ತಿದ್ದ ವೇಳೆ ಫೋನ್‌ನಲ್ಲಿ ಮಾತನಾಡಿದ್ದಕ್ಕೆ ಆತನ ಕಾರನ್ನು ಅಡ್ಡಗಟ್ಟಿದ ಟ್ರಾಫಿಕ್ ಪೊಲೀಸ್ ದಂಡ ಪಾವತಿಸಲು ಹೇಳಿದ್ದಾರೆ. ಆಗ ಕೋಪಗೊಂಡ ಕಾರು ಚಾಲಕ ಪೊಲೀಸ್‌ನನ್ನು ಬಾನೆಟ್ ಮೇಲೆ ಹತ್ತಿಸಿಕೊಂಡೇ 4 ಕಿ.ಮೀ ಎಳೆದೊಯ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ಪಾಠ ಮಾಡುವ ಶಿಕ್ಷಕನಿಂದ 18 ಕ್ಕೂ ಹೆಚ್ಚು ದೇವಸ್ಥಾನ ದರೋಡೆ

    ವ್ಯಕ್ತಿ ಅಪಾಯಕರ ರೀತಿಯಲ್ಲಿ ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದು, ಕಾರನ್ನು ನಿಲ್ಲಿಸಲು ಇತರ ಪೊಲೀಸರು ಸುತ್ತುವರಿಯಬೇಕಾಯಿತು. ಆರೋಪಿ ಚಾಲಕನನ್ನು ಇದೀಗ ಬಂಧಿಸಲಾಗಿದೆ ಎಂದು ಲಸುಡಿಯಾ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆರ್‌ಎಸ್ ದಂಡೋತಿಯಾ ತಿಳಿಸಿದ್ದಾರೆ. ಇದನ್ನೂ ಓದಿ: 6 ಮದುವೆ, 54 ಮಕ್ಕಳಿಗೆ ತಂದೆಯಾದ ಪಾಕಿಸ್ತಾನಿ ವ್ಯಕ್ತಿ ಸಾವು

    ಗ್ವಾಲಿಯರ್ ನಿವಾಸಿಯಾಗಿರುವ ಆರೋಪಿಯ ಬಳಿ ಪಿಸ್ತೂಲ್ ಹಾಗೂ ರಿವಾಲ್ವರ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಶಸ್ತ್ರಾಸ್ತ್ರಗಳನ್ನು ಹೊಂದಲು ಪರವಾನಗಿ ಪಡೆದಿರುವುದಾಗಿ ಆರೋಪಿ ತಿಳಿಸಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗ್ಳೂರಿನಲ್ಲಿ ಕ್ರೇನ್ ಹರಿದು ವಿದ್ಯಾರ್ಥಿನಿ ದಾರುಣ ಸಾವು

    ಬೆಂಗ್ಳೂರಿನಲ್ಲಿ ಕ್ರೇನ್ ಹರಿದು ವಿದ್ಯಾರ್ಥಿನಿ ದಾರುಣ ಸಾವು

    ಆನೇಕಲ್: ಚಾಲಕನ ಅಜಾರೂಕತೆಯಿಂದ ಕ್ರೇನ್ (Crane Vehicle) ಹರಿದು ವಿದ್ಯಾರ್ಥಿನಿ (Student) ದಾರುಣ ಸಾವಿಗೀಡಾದ ಘಟನೆ ಮಹದೇವಪುರ ಕ್ಷೇತ್ರದ ಕನ್ನಮಂಗಲ ಗೇಟ್‌ನ ಜೈನ್ ಶಾಲೆ (Jain School) ಬಳಿ ನಡೆದಿದೆ.

    Student Death 2

    ಕುಮಾರಿ ನೂರ್ ಫಿಜ (19) ಮೃತ ವಿದ್ಯಾರ್ಥಿನಿ (Student). ಶಾಲೆ ಮುಗಿಸಿಕೊಂಡು ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್ – ಹೊಸಕೋಟೆ ಮಾರ್ಗವಾಗಿ ಕನ್ನಮಂಗಲ ಬಳಿ ಹೋಗುತ್ತಿದ್ದಾಗ ಕ್ರೇನ್ ಚಾಲಕನ ಹಿಂಬದಿಯಿಂದ ಬಂದು ಗುದ್ದಿ, ವಿದ್ಯಾರ್ಥಿನಿ ಮೇಲೆ ಕ್ರೇನ್ ಹತ್ತಿಸಿದ್ದಾನೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

    crime 1

    ಅಪಘಾತಕ್ಕೀಡಾಗಿ ರಕ್ತಸಿಕ್ತವಾಗಿ ಬಳಲುತ್ತಿದ್ದ ವಿದ್ಯಾರ್ಥಿನಿಯನ್ನು ಸಮೀಪದ ಆಸ್ಪತ್ರೆಗೆ (Hospital) ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ನಂತರ ವೈಟ್ ಫೀಲ್ಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಕ್ರೇನ್ ಮಾಲೀಕ ಪೆರಿಯಸ್ವಾಮಿ ವಿರುದ್ಧ ಯುವತಿ ತಂದೆ ರೆಹಮಾನ್ ಖಾನ್ ವೈಟ್ ಫೀಲ್ಡ್ ಸಂಚಾರ (Traffic Police) ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಲಿಸುತ್ತಿದ್ದ ಕಾರಿನಲ್ಲೇ ಪತ್ನಿಯೊಂದಿಗೆ ಸೆಕ್ಸ್ – ಸೀಟ್‌ಬೆಲ್ಟ್ ಧರಿಸದಿದ್ದಕ್ಕೆ ಬಿತ್ತು ದಂಡ

    ಚಲಿಸುತ್ತಿದ್ದ ಕಾರಿನಲ್ಲೇ ಪತ್ನಿಯೊಂದಿಗೆ ಸೆಕ್ಸ್ – ಸೀಟ್‌ಬೆಲ್ಟ್ ಧರಿಸದಿದ್ದಕ್ಕೆ ಬಿತ್ತು ದಂಡ

    ಕ್ಯಾನ್ಬೆರಾ: ಚಲಿಸುತ್ತಿದ್ದ ಕಾರಿನಲ್ಲೇ (Car) ಪತ್ನಿಯೊಂದಿಗೆ (Wife) ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯ ಕ್ಯಾಮೆರಾದಲ್ಲಿ (Camera) ಸೆರೆಯಾಗಿದ್ದು, ಸೀಟ್ ಬೆಲ್ಟ್ ಧರಿಸಿಲ್ಲದ ಕಾರಣ ವ್ಯಕ್ತಿಯೊಬ್ಬನಿಗೆ ಪೊಲೀಸರು (Police) ದಂಡದ ಬಿಸಿ ಮುಟ್ಟಿಸಿರುವ ಘಟನೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ಹೆದ್ದಾರಿಯಲ್ಲಿ (National Highway) ನಡೆದಿದೆ.

    Lovers

    ವ್ಯಕ್ತಿಯು ಚಲಿಸುವ ಕಾರಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯಾವಳಿ ರಸ್ತೆ ಬದಿಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ಕಂಡ ಅಧಿಕಾರಿಗಳು ಆತನಿಗೆ 1,087 ಡಾಲರ್ ಅಂದರೆ ಸುಮಾರು 89 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಸದ್ಯ ಪತಿ-ಪತ್ನಿ ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಇದನ್ನೂ ಓದಿ: ‘ಗಂಧದ ಗುಡಿ’ ನೋಡಿ ಗರ್ವ ಬಂತು: ಸುಧಾಮೂರ್ತಿ ಫಸ್ಟ್ ರಿಯಾಕ್ಷನ್

    ಇಬ್ಬರೂ ಪೆಸಿಫಿಕ್ ಮೋಟಾರು ಮಾರ್ಗದಲ್ಲಿ ಹಾದು ಹೋಗುತ್ತಿದ್ದಾಗ ಕ್ಯಾಮೆರಾ ಅವರ ಲೈಂಗಿಕ ಕ್ರಿಯೆ ದೃಶ್ಯವನ್ನು ಸೆರೆಹಿಡಿದಿದೆ. ಸಾರಿಗೆ ಮತ್ತು ಮುಖ್ಯ ರಸ್ತೆಗಳ ಇಲಾಖೆಯ ವಕ್ತಾರರು ಘಟನೆಯನ್ನು ದೃಢಪಡಿಸಿದ್ದು, ಇದನ್ನು ಚಾಲಕನ ಅಪಾಯಕಾರಿ ನಡವಳಿಕೆ ಎಂದು ಗುರುತಿಸಿ ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ‘ಗಂಧದ ಗುಡಿ’ ಚಿತ್ರದಲ್ಲಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಇದ್ದಾರೆ

    Lovers 2

    ದಂಡ ವಿಧಿಸಿದ ಬಳಿಕ ಪ್ರತಿಕ್ರಿಯಿಸಿದ ದಂಪತಿ ನಾವು ಸೀಟ್ ಬೆಲ್ಟ್ ಧರಿಸಿದ್ದೇವೆ. ಆದರೆ ಅದು ಸ್ವಲ್ಪ ಮೇಲ್ಬಾಗಕ್ಕೆ ಬಂದಿದೆ. ಅದು ಕ್ಯಾಮೆರಾದಲ್ಲೂ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಸಮರ್ಥನೆ ನೀಡಲು ಮುಂದಾದರು. ಇದಕ್ಕೆ ಉತ್ತರಿಸಿದ ಪೊಲೀಸ್ ಅಧಿಕಾರಿಗಳು, ಪ್ರಯಾಣಿಕರ ವರ್ತನೆಯಿಂದಾಗಿ ಸೀಟ್‌ಬೆಲ್ಟ್ ಧರಿಸದೇ ಇದ್ದಾಗ ಅಥವಾ ತಪ್ಪಾಗಿ ಧರಿಸಿದಾಗ ಅದು ನಿಯಮ ಉಲ್ಲಂಘನೆಯಾಗುತ್ತದೆ ಎಂಬ ಕಾರಣ ನೀಡಿ ನೋಟಿಸ್ ನೀಡಲಾಗಿದೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ಹಾಫ್ ಹೆಲ್ಮೆಟ್ ಧರಿಸಿದ ಪೊಲೀಸ್‍ಗೇ ಬಿತ್ತು ದಂಡ!

    ಬೆಂಗಳೂರಿನಲ್ಲಿ ಹಾಫ್ ಹೆಲ್ಮೆಟ್ ಧರಿಸಿದ ಪೊಲೀಸ್‍ಗೇ ಬಿತ್ತು ದಂಡ!

    ಬೆಂಗಳೂರು: ಟ್ರಾಫಿಕ್ ಪೊಲೀಸ್ (Traffic Police) ಒಬ್ಬರು ಹಾಫ್ ಹೆಲ್ಮೆಟ್ ಧರಿಸಿದ ಇನ್ನೊಬ್ಬ ಪೊಲೀಸ್‍ಗೆ ದಂಡ ವಿಧಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಫೈನ್ ಹಾಕಿದ ಫೋಟೋವನ್ನು ಆರ್ ಟಿ ನಗರ ಟ್ರಾಫಿಕ್ ಬಿಟಿಪಿ ಟ್ವಿಟ್ಟರ್ ಅಕೌಂಟಿನಿಂದ ಟ್ವೀಟ್ ಮಾಡಲಾಗಿದೆ. ಫೋಟೋದಲ್ಲಿ ಹಾಫ್ ಹೆಲ್ಮೆಟ್‌ (Half Helmet) ಧರಿಸಿದ ಪೊಲೀಸ್‍ಗೆ ಟ್ರಾಫಿಕ್ ಪೊಲೀಸ್ ಫೈನ್ ಹಾಕುತ್ತಿರುವುದನ್ನು ಕಾಣಬಹುದಾಗಿದೆ.

    ನಗರದ ರಸ್ತೆಗಳಲ್ಲಿ ಗೇರ್ ಲೆಸ್ ಸ್ಕೂಟರ್ ಓಡಿಸುವಾಗ ಹಾಫ್ ಹೆಲ್ಮೆಟ್ ನಿಷೇಧಿಸಲಾಗಿದೆ. ಅದಾಗ್ಯೂ ಪೊಲೀಸ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಈ ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಯುವತಿಯರಿಬ್ಬರ ನಡುವೆ ಪ್ರೇಮಾಂಕುರ- ಬೇರೆಯವಳೊಂದಿಗೆ ಮಾತಾಡಿದ್ದಕ್ಕೆ ರೇಡಿಯಂ ಕಟರ್‌ನಿಂದ ಹಲ್ಲೆಗೈದ್ಳು!

    ಫೋಟೋ ಸಮೇತ ಟ್ವೀಟ್ ಮಾಡುತ್ತಿದ್ದಂತೆಯೇ ಅನೇಕರು ಇದಕ್ಕೆ ರೀ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಓರ್ವ ಟ್ವಿಟ್ಟರ್ ಬಳಕೆದಾರ, ಫೈನ್ (Fine) ಹಾಕಿದ್ರೂ ಅವರು ಅದನ್ನು ತುಂಬಾ ಸಂತೋಷದಿಂದ ಸ್ವೀಕರಿಸಿದಂತಿದೆ. ಒಂದು ಉತ್ತಮ ಫೋಟೋಗೆ ಅವಕಾಶ ಸಿಕ್ಕಿದೆ ಅನ್ನೋ ಖುಷಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

    ಇನ್ನೊಬ್ಬರು, ಇಂತಹ ಕೆಲಸಗಳನ್ನು ಇನ್ನೂ ಹೆಚ್ಚು ಮಾಡಬೇಕಿದೆ. ಅನೇಕ ಪೊಲೀಸರು ಹೆಲ್ಮೆಟ್ ಧರಿಸದೆ ಹಿಂಬದಿ ಸವಾರರನ್ನು ಕೂರಿಸಿಕೊಂಡು ಹೋಗುವುದನ್ನು ನಾನು ನೋಡಿದ್ದೇನೆ. ಅಲ್ಲದೆ ಇಂಥವರನ್ನು ಕಂಡರೂ ಪೊಲೀಸರು ಅವರನ್ನು ಹೋಗಲು ಬಿಡುತ್ತಾರೆ. ಅವರಿಗಿಲ್ಲದ ಫೈನ್ ಸಾಮಾನ್ಯ ಜನರಿಗೇಕೆ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ನಿಯಮಗಳು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ದಯಮಾಡಿ ಸಂಚಾರ ನಿಯಮಗಳನ್ನು ಅನುಸರಿಸಿ ಅಂದ್ರೆ ಮಗದೊಬ್ಬರು ಪ್ರಚಾರದ ಸಾಹಸ ಎಂದು ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]