Monday, 20th August 2018

Recent News

4 weeks ago

ವೈರಲ್ ಆಯ್ತು ಕೇರಳ ಶಾಸಕಿಯ ರಾಮಾಯಣ ಪಠಣ: ವಿಡಿಯೋ ನೋಡಿ

ತಿರುವನಂತಪುರಂ: ಕೇರಳದ ಸಿಪಿಎಂ ಶಾಸಕಿಯೊಬ್ಬರು ರಾಮಾಯಣ ವಾಚನ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಕೇರಳದಲ್ಲಿ ಬೆಳೆಯುತ್ತಿರುವ ಆರೆಸ್ಸೆಸ್ ಹಾಗೂ ಬಿಜೆಪಿಯ ಪ್ರಾಬಲ್ಯವನ್ನು ಎದುರಿಸಲು ಸಿಪಿಎಂ ಸೇರಿದಂತೆ ಎಡಪಂಥೀಯ ಸಂಘಟನೆಗಳು ರಾಮಾಯಣ ವಾಚನ ಮತ್ತು ರಾಮಾಯಣ ಕುರಿತ ವಿಚಾರ ಸಂಕಿರಣಗಳನ್ನು ಆಯೋಜಿಸಲು ಮುಂದಾಗಿರುವ ಬೆನ್ನಲ್ಲೇ ಶಾಸಕಿಯ ವಿಡಿಯೋ ಸಾಕಷ್ಟು ಸುದ್ದಿ ಮಾಡಿದೆ. ಕೇರಳದ ಕಾಯಂಕುಳಂ ವಿಧಾನಸಭಾ ಕ್ಷೇತ್ರದ ಶಾಸಕಿ ಯು. ಪ್ರತಿಭಾ ಹರಿ ಅವರು ಕರ್ಕಾಟಕ ಮಾಸದ ಆಚರಣೆಗಳ ಭಾಗವಾಗಿ ರಾಮಾಯಣ ವಾಚನ ಮಾಡುತ್ತಿರುವ […]

3 months ago

ಪಂಚಾಯತ್ ಚುನಾವಣೆಯಲ್ಲಿ ಹಿಂಸಾಚಾರ: 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ- ಶಾಕಿಂಗ್ ವಿಡಿಯೋ ನೋಡಿ

ಕೊಲ್ಕತ್ತಾ: ಪಂಚಾಯತ್ ಚುನಾವಣೆ ವೇಳೆ 10 ಕಡೆ ನಡೆದ ಘರ್ಷಣೆ ಹಿಂಸಾ ರೂಪ ಪಡೆದುಕೊಂಡಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಮುಂಜಾನೆ ಪ್ರಾರಂಭವಾದ ಚುನಾವಣೆಯಲ್ಲಿ ವಿವಿಧ ಬೂತ್‍ಗಳಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು, ಪರಸ್ಪರ ಹೊಡೆದಾಡಿದ್ದಾರೆ. ನಂತರ ಇದು ಹಿಂಸಾ ಸ್ವರೂಪ ಪಡೆದುಕೊಂಡಿದೆ. ಪ್ರದೇಶವೊಂದರಲ್ಲಿ ನಡೆದ ಬಾಂಬ್...

24 ವರ್ಷಗಳ ಬಳಿಕ ಹಿಮಾಚಲ ಪ್ರದೇಶದಲ್ಲಿ ಖಾತೆ ತೆರೆದ ಸಿಪಿಐ(ಎಂ)-ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಗೆ ಸೋಲು

8 months ago

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹಲವು ಸಮೀಕ್ಷೆಗಳ ಫಲಿತಾಂಶದಂತೆ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡಲು ಸಿದ್ಧವಾದರೆ, ಕಳೆದ 24 ವರ್ಷಗಳ ಅವಧಿಯಲ್ಲಿ ಹಿಮಾಚಲದಲ್ಲಿ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಗಿದ್ದ ಸಿಪಿಐ(ಎಂ), ಈ ಬಾರಿ ಒಂದು ಕ್ಷೇತ್ರವನ್ನು...

ಕೇರಳದಲ್ಲಿ ಬಿಜೆಪಿಯ ಜನರಕ್ಷಾ ಯಾತ್ರೆಗೆ ಅಮಿತ್ ಶಾ ಚಾಲನೆ

11 months ago

ತಿರುವನಂತಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇರಳದಲ್ಲಿ ಮಂಗಳವಾರ ಜನರಕ್ಷಾ ಯಾತ್ರೆಗೆ ಚಾಲನೆ ನೀಡಿ, ಆಡಳಿತರೂಢ ಸಿಪಿಎಂ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಪಿಎಂ ಸರ್ಕಾರ `ಹತ್ಯೆ ರಾಜಕೀಯ’ ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಕಣ್ಣೂರಿನ ಪಯ್ಯನ್ನೂರಿನಲ್ಲಿ ಅಮಿತ್ ಶಾ...

ಕೇರಳ ಸಿಎಂ ತಲೆಗೆ 1 ಕೋಟಿ ಘೋಷಿಸಿದ ಬೆನ್ನಲ್ಲೇ ಆರ್‍ಎಸ್‍ಎಸ್, ಸಿಪಿಎಂ ಜಟಾಪಟಿ!

1 year ago

ಕೊಝಿಕೋಡ್: ಕೇರಳದಲ್ಲಿ ಆರ್‍ಎಸ್‍ಎಸ್ ಮತ್ತು ಸಿಪಿಎಂ ನಡುವಿನ ಹಿಂಸಾಚಾರ ಮುಗಿಲು ಮುಟ್ಟಿದೆ. ಮಧ್ಯಪ್ರದೇಶದ ಆರ್‍ಎಸ್‍ಎಸ್ ನಾಯಕ ಚಂದ್ರಾವತ್, ಕೇರಳ ಸಿಎಂ ಪಿಣರಾಯಿ ವಿಜಯನ್ ತಲೆಗೆ ಒಂದು ಕೋಟಿ ಬಹುಮಾನ ಘೋಷಿಸಿದ ಬಳಿಕ ಇದೀಗ ಉರಿದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಈ ಘೋಷಣೆಯ...