LatestLeading NewsMain PostNational

CPM ಕಚೇರಿಗೆ ಬಾಂಬ್‌ ಎಸೆದು ಸ್ಫೋಟ

- ರಾಹುಲ್‌ ಗಾಂಧಿ ಕಚೇರಿ ಧ್ವಂಸ ಬೆನ್ನಲ್ಲೇ ಮತ್ತೊಂದು ಕೃತ್ಯ

Advertisements

ತಿರುವನಂತಪುರಂ: ಕೇಳರದ ಆಡಳಿತಾರೂಢ ಸಿಪಿಐ(ಎಂ)ನ ರಾಜ್ಯ ಪ್ರಧಾನ ಕಚೇರಿಗೆ ಗುರುವಾರ ತಡರಾತ್ರಿ ಬಾಂಬ್‌ ಎಸೆದು ಸ್ಫೋಟಿಸಲಾಗಿದೆ. ಪಕ್ಷದ ಕಚೇರಿಯ ಮುಖ್ಯ ಗೇಟ್‌ ಮುಂದೆ ಬಾಂಬ್‌ ಸ್ಫೋಟಗೊಂಡಿದೆ.

ಬಾಂಬ್‌ ಸ್ಫೋಟಗೊಳ್ಳುತ್ತಿದ್ದಂತೆ ಪಕ್ಷದ ಹಿರಿಯ ನಾಯಕರು ಕಚೇರಿ ಬಳಿ ಧಾವಿಸಿದರು. ದಾಳಿಯ ವೇಳೆ ಹಲವು ಸಿಪಿಐ(ಎಂ) ಮುಖಂಡರು ಪಕ್ಷದ ಕಚೇರಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಹಾರಾಷ್ಟ್ರ ನೂತನ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವೀಸ್‍ಗೆ ಉದ್ಧವ್ ಠಾಕ್ರೆ ವಿಶ್

ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ಬಾಂಬ್‌ ಎಸೆದು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ವರದಿಯನ್ನು ಸಲ್ಲಿಸುವ ಸಮಯದಲ್ಲಿ ಪೊಲೀಸರಿಂದ ಯಾವುದೇ ಅಧಿಕೃತ ಹೇಳಿಕೆ ಇರಲಿಲ್ಲ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.

ಕೇರಳದಲ್ಲಿ ಹಿಂಸಾಚಾರವನ್ನು ಪ್ರೋತ್ಸಾಹಿಸುವ ನಾಯಕತ್ವವನ್ನು ಕಾಂಗ್ರೆಸ್ ಹೊಂದಿದೆ. ನಾವು ಪ್ರಜಾಸತ್ತಾತ್ಮಕ ಮತ್ತು ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಸಿಪಿಐ(ಎಂ) ಪಾಲಿಟ್‌ಬ್ಯುರೊ ಸದಸ್ಯ ಎ.ವಿಜಯರಾಘವನ್ ಹೇಳಿದ್ದಾರೆ. ಘಟನೆಯ ಅರ್ಧ ಗಂಟೆಯ ನಂತರ ನಗರದಲ್ಲಿ ಸಿಪಿಐ(ಎಂ) ಮತ್ತು ಡಿವೈಎಫ್‌ಐ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದನ್ನೂ ಓದಿ: ಇಂದಿನಿಂದ 3 ದಿನ ರಾಹುಲ್ ಗಾಂಧಿ ಕೇರಳ ಪ್ರವಾಸ

ಕಳೆದ ಒಂದು ತಿಂಗಳಿನಿಂದ ಸಿಪಿಐ(ಎಂ) ಮತ್ತು ಕಾಂಗ್ರೆಸ್‌ನ ಹಲವು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಕಾಂಗ್ರೆಸ್ ರಾಜ್ಯ ಕೇಂದ್ರ ಕಚೇರಿಯ ಮೇಲೂ ದಾಳಿ ನಡೆದಿದೆ. ಕಳೆದ ವಾರ ಎಸ್‌ಎಫ್‌ಐ ಬೆಂಬಲಿಗರು ವಯನಾಡಿನಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕಚೇರಿಯನ್ನು ಧ್ವಂಸಗೊಳಿಸಿದ್ದರು. ಸಿಪಿಐ(ಎಂ) ಮತ್ತು ಕಾಂಗ್ರೆಸ್ ಕಚೇರಿಗಳಿಗೆ ಭದ್ರತೆಯನ್ನು ಬಲಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Live Tv

Leave a Reply

Your email address will not be published.

Back to top button