Friday, 23rd August 2019

2 years ago

ಪ್ರಕೃತಿ ಮಡಿಲಲ್ಲಿ ಹಿಂದೂ ಸಂಪ್ರದಾಯದಂತೆ ಅಮೆರಿಕ ಹುಡುಗಿಯ ಕೈ ಹಿಡಿದ ಕನ್ನಡಿಗ

ತುಮಕೂರು: ಭಾರತೀಯ ಸಂಸ್ಕೃತಿಗೆ ಮಾರುಹೋದ ಅಮೆರಿಕ ಯುವತಿಯೊಬ್ಬರು ಕನ್ನಡದ ಹುಡುಗನ ಜೊತೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ಗಮನ ಸೆಳೆದಿದ್ದಾರೆ. ಜಿಲ್ಲೆಯ ತೋವಿನಕೆರೆ ಸಮೀಪದ ಉಪ್ಪಾರಪಾಳ್ಯದ ತೋಟದಲ್ಲಿ, ಪ್ರಕೃತಿ ಮಡಿಲಲ್ಲಿ ಹಿಂದೂ ಸಂಪ್ರದಾಯದಂತೆ ಅಮೆರಿಕದ ನ್ಯೂಜೆರ್ಸಿಯಲ್ಲಿ ವಿಜ್ಞಾನಿಯಾಗಿರುವ ಟಾರಾ ಹಾಗೂ ಬೆಂಗಳೂರಿನ ಡಾ. ಅಜಯ್ ಸಪ್ತಪದಿ ತುಳಿದಿದ್ದಾರೆ. ಡಾ. ಅಜಯ್ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುವಾಗ ಟಾರಾ ಪರಿಚಯವಾಗುತ್ತಾರೆ. ನಂತರ ಇಬ್ಬರ ಮಧ್ಯೆ ಪ್ರೀತಿ ಆರಂಭವಾಗುತ್ತದೆ. ಬಳಿಕ ಟಾರಾ ಭಾರತೀಯ ಸಂಪ್ರದಾಯದಂತೆ ಮದುವೆಯಾಗುವ ಬಯಕೆಯನ್ನು ಅಜಯ್ ಮುಂದೆ ವ್ಯಕ್ತಪಡಿಸಿದ್ದಾರೆ. ಟಾರಾ […]

2 years ago

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭುವನೇಶ್ವರ್ ಕುಮಾರ್, ಜಹೀರ್-ಸಾಗರಿಕಾ ಸರಳ ವಿವಾಹ: ಫೋಟೋಗಳಲ್ಲಿ ನೋಡಿ

ನವದೆಹಲಿ: ಟೀಂ ಇಂಡಿಯಾದಲ್ಲಿ ಯಶಸ್ವಿ ಬೌಲರ್ ಗಳಾಗಿ ಮಿಂಚಿರುವ ಭುವನೇಶ್ವರ್ ಕುಮಾರ್ ಹಾಗೂ ಮಾಜಿ ವೇಗದ ಬೌಲರ್ ಜಹೀರ್ ಖಾನ್ ತಮ್ಮ ಪ್ರೇಯಸಿಯರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭುವನೇಶ್ವರ್ ಕುಮಾರ್ ತಮ್ಮ ಬಹುಕಾಲದ ಗೆಳತಿ ನೂಪುರ್ ನಗರ್ ಜೊತೆ ಸಪ್ತಪದಿ ತುಳಿದರು. ಈ ವಿವಾಹ ಸಮಾರಂಭದಲ್ಲಿ...

ಬಿಜೆಪಿ ಅಧಿಕಾರಕ್ಕೆ ಬಂದ್ರೆ ವಿವಾಹ ಖಾತೆ ಸಚಿವರ ಹುದ್ದೆ ಸೃಷ್ಟಿಸ್ತೀವಿ: ಶ್ರೀರಾಮುಲು

2 years ago

ಬಳ್ಳಾರಿ: ಮದುವೆ ಮಾಡೋಕೆ ಲಕ್ಷಾಂತರ ರೂಪಾಯಿ ಹಣ ಬೇಕು. ಆದ್ರೆ ಸರ್ಕಾರಿ ಖರ್ಚಿನಲ್ಲೇ ಸಾಮೂಹಿಕ ಮದುವೆ ಮಾಡಿಸೋ ಭಾಗ್ಯವನ್ನು ಬಿಜೆಪಿ ಜಾರಿಗೆ ತರೋದಾಗಿ ಸಂಸದ ಶ್ರೀರಾಮುಲು ಹೇಳಿದ್ದಾರೆ. ಅಷ್ಟೆ ಅಲ್ಲ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸಾಮೂಹಿಕ ಮದುವೆ ಮಾಡಿಸೋಕೆ...

ಹೆಸರು ಬದಲಾವಣೆ ವಿಚಾರಕ್ಕೆ ಪತ್ನಿಯೊಂದಿಗೆ ಜಗಳ- ಯೋಧ ಆತ್ಮಹತ್ಯೆ

2 years ago

ಬೆಳಗಾವಿ: ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿಯ ಜೊತೆಗೆ ಜಗಳವಾಡಿ ಯೋಧರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೈಲಹೊಂಗಲ ತಾಲೂಕಿನ ಗಣಿಕೊಪ್ಪ ಗ್ರಾಮದಲ್ಲಿ ಬಿಎಸ್‍ಎಫ್ ಯೋಧ ಬಸವರಾಜ್ ಉರ್ಫ್ ರಫೀಕ್ ಮುಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಣವೇನು?:...