CrimeLatestLeading NewsMain PostNational

ಗೆಳತಿಯೊಂದಿಗೆ ಸೆಕ್ಸ್ ಮಾಡ್ತಿದ್ದಾಗಲೇ ಹೃದಯಾಘಾತ – ಹಸೆಮಣೆ ಏರಬೇಕಿದ್ದ 28ರ ಯುವಕ ಸಾವು!

Advertisements

ನಾಗ್ಪುರ: ತನ್ನ ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವೇಳೆಯೇ ಕುಸಿದು ಬಿದ್ದು 28 ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಾಗ್ಪುರದ ಸಾವೊನೆರ್‌ನ ಲಾಡ್ಜ್‌ನಲ್ಲಿ ನಡೆದಿದೆ.

ಮೃತ ಯುವಕನನ್ನು ಅಜಯ್ ಪರ್ಟೆಕಿ (28) ಎಂದು ಗುರುತಿಸಲಾಗಿದೆ. ಈತ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ, ಧೂಮಪಾನ ಮಾಡುತ್ತಿದ್ದ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸಿಕ್ಕಿಬಿದ್ದ ಮಹಿಳೆಗೆ ಗಂಡನನ್ನು ಹೆಗಲ ಮೇಲೆ ಹೊತ್ತು ನಡೆಯೋ ಶಿಕ್ಷೆ!

ಚಾಲಕನಾಗಿ, ವೆಲ್ಡಿಂಗ್ ತಂತ್ರಜ್ಞನಾಗಿಯೂ ಕೆಲಸ ಮಾಡಿಕೊಂಡಿದ್ದ ಯುವಕನಿಗೆ ಕಳೆದ ಎರಡು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹುಬ್ಬಳ್ಳಿ ಹೋಟೆಲ್‌ಗೆ ಹೋಗಿದ್ದು ಯಾಕೆ?

ಏನಿದು ಪರ್ಟೆಕಿ ಪ್ರೇಮಕಥೆ?
ಪರ್ಟೆಕಿ ಮತ್ತು ಮಧ್ಯಪ್ರದೇಶದ ಛಿಂದವಾಡದ ನರ್ಸ್ (ಶುಶ್ರೂಷಕಿ) ಆಗಿರುವ 23 ವರ್ಷದ ಯುವತಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರಿಗೂ ಈ ವಿಷಯ ತಿಳಿದಿತ್ತು. ಪರ್ಟೆಕಿ ಗೆಳತಿಯ ತಾಯಿ ಬಳಿಯೂ ಮಾತನಾಡಿ ತಮ್ಮಿಬ್ಬರ ಮದುವೆಗೆ ಅನುಮತಿ ನೀಡುವಂತೆ ಕೇಳಿಕೊಂಡಿದ್ದನು. ಇದಕ್ಕೆ ಒಪ್ಪಿಗೆಯೂ ಸಿಕ್ಕಿತ್ತು. ಶೀಘ್ರದಲ್ಲೇ ಇಬ್ಬರ ವಿವಾಹವೂ ನಿಶ್ಚಯವಾಗಿತ್ತು.

ಸಾವಿಗೂ ಮುನ್ನ ನಡೆದಿದ್ದೇನು?
ಈ ನಡುವೆ ನಿನ್ನೆ ಸಂಜೆ 4 ಗಂಟೆ ವೇಳೆಗೆ ಇಬ್ಬರೂ ಲಾಡ್ಜ್ಗೆ ಭೇಟಿ ನೀಡಿದ್ದರು. ಸುಮಾರು ಅರ್ಧ ಗಂಟೆಯ ನಂತರ ಅವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಪರ್ಟೆಕಿ ಏಕಾಏಕಿ ಹಾಸಿಗೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಲಾಡ್ಜ್ ಸಿಬ್ಬಂದಿಯನ್ನು ಎಚ್ಚರಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತೆರಳುವ ಮುನ್ನವೇ ಯುವಕ ಮೃತಪಟ್ಟಿದ್ದನು ಎಂದು ಆತನ ಗೆಳತಿ ಪೊಲೀರಿಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಪೊಲೀಸರು ಹೇಳಿದ್ದೇನು?
ಈ ಬಗ್ಗೆ ಮಾಹಿತಿ ನೀಡಿದ ಸಾವೊನೆರ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್‌ ಸತೀಶ್ ಪಾಟೀಲ್, ಮೃತ ಯುವಕ ಯಾವುದೇ ಔಷಧ ಸೇವನೆ ಮಾಡಿರುವ ಬಗ್ಗೆ ಪುರಾವೆಗಳು ಇಲ್ಲ, ಮಾದಕ ದ್ರವ್ಯವೂ ಪತ್ತೆಯಾಗಿಲ್ಲ. ಮಹಿಳೆ ಕೂಡ ತನ್ನ ಸಮ್ಮುಖದಲ್ಲಿ ಏನನ್ನೂ ಸೇವಿಸಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ, ವೈದ್ಯರು ಪ್ರಾಥಮಿಕ ವರದಿಯಲ್ಲಿ ಸಾವಿಗೆ ಹೃದಯಾಘಾತ ಕಾರಣ ಎಂದು ಸೂಚಿಸಿದ್ದಾರೆ. ಸಾವೋನರ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Live Tv

Leave a Reply

Your email address will not be published.

Back to top button