Friday, 23rd August 2019

2 days ago

ಪ್ರಿಯಾಂಕ ಚೋಪ್ರಾ ವಿರುದ್ಧ ವಿಶ್ವಸಂಸ್ಥೆಗೆ ದೂರು ಸಲ್ಲಿಸಿದ ಪಾಕ್

ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ವಿರುದ್ಧ ವಿಶ್ವಸಂಸ್ಥೆಗೆ ಪಾಕಿಸ್ತಾನ ದೂರು ಸಲ್ಲಿಸಿದೆ. ಸದ್ಯ ಪ್ರಿಯಾಂಕ ಯೂನಿಸೆಫ್‍ನ ಸೌಹಾರ್ದಯುತ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಪ್ರಿಯಾಂಕರನ್ನು ರಾಯಭಾರಿ ಸ್ಥಾನದಿಂದ ತೆಗೆಯುವಂತೆ ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಝಾರಿ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ. Sent letter to UNICEF chief regarding UN Goodwill Ambassador for Peace Ms Chopra pic.twitter.com/PQ3vwYjTVz — Shireen Mazari (@ShireenMazari1) August 21, 2019 ಪ್ರಿಯಾಂಕ ಚೋಪ್ರಾ ಅವರು […]

2 days ago

ಪಾಕಿಗೆ ಹರಿಯತ್ತಿರುವ ನೀರನ್ನು ನಿಲ್ಲಿಸುವ ಕೆಲಸ ಆರಂಭಗೊಂಡಿದೆ – ಕೇಂದ್ರ ಸರ್ಕಾರ

ಮುಂಬೈ: ಉಗ್ರರನ್ನು ಉತ್ಪಾದಿಸಿ ಭಾರತಕ್ಕೆ ಕಳುಹಿಸುತ್ತಿರುವ ಪಾಕಿಸ್ತಾನ ತಿರುಗೇಟು ನೀಡಲು ಭಾರತ ಈಗ ಜಲಾಸ್ತ್ರವನ್ನು ಪ್ರಯೋಗಿಸಿದ್ದು, ಕೆಲಸ ಈಗಾಗಲೇ ಆರಂಭಗೊಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇಂಡಸ್ ಒಪ್ಪಂದವನ್ನು ಉಲ್ಲಂಘಿಸದೇ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ನಿಲ್ಲಿಸುವ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದು ಹೇಳಿದ್ದಾರೆ....

ದೀಪಾವಳಿಗೆ 40 ಸಾವಿರ ರೂ. ಗಡಿ ದಾಟಲಿದೆ ಚಿನ್ನ – ಬೆಲೆ ಏರುತ್ತಿರುವುದು ಯಾಕೆ?

5 days ago

ನವದೆಹಲಿ: ಈ ದೀಪಾವಳಿ ಸಮಯದಲ್ಲಿ 10 ಗ್ರಾಂ ಚಿನ್ನದ ಬೆಲೆ 40 ಸಾವಿರ ರೂಪಾಯಿಗೆ ಏರಿಕೆಯಾಗುವ ಸಾಧ್ಯತೆಯಿದೆ. ಆಗಸ್ಟ್ ಮೂರನೇ ವಾರದಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 38 ಸಾವಿರದ ಗಡಿ ದಾಟಿದ್ದರೆ 22 ಕ್ಯಾರೆಟ್ ಚಿನ್ನದ...

ವಿನಾಯ್ತಿ ಬೇಡ, ಶಾಂತಿ ಪ್ರಶಸ್ತಿಗೆ ತೆರಿಗೆ ಪಾವತಿಸುತ್ತೇನೆ – ಮೋದಿ ಪತ್ರ

5 days ago

– ತೆರಿಗೆ ವಿನಾಯಿತಿ ನೀಡಿದ್ದ ಐಟಿ ಇಲಾಖೆ – ಸಾಮಾನ್ಯರಂತೆ ನಾನೂ ತೆರಿಗೆ ಕಟ್ಟುತ್ತೇನೆಂದ ಪ್ರಧಾನಿ ನವದೆಹಲಿ: ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಇತರ ರಾಜಕಾರಣಿಗಳಿಗೆ ಮಾದರಿಯಾಗಿದ್ದು, ಸಾಮಾನ್ಯರಂತೆ ನಾನೂ ಸಹ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತೇನೆ ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ...

ಪಾಕ್‍ಗೆ ಸಂಚರಿಸುವ ಥಾರ್ ಲಿಂಕ್ ಎಕ್ಸ್‌ಪ್ರೆಸ್‌ ಸ್ಥಗಿತಗೊಳಿಸಿದ ಭಾರತ

6 days ago

ನವದೆಹಲಿ: ಪಾಕಿಸ್ತಾನವು ಜೋಧ್‍ಪುರ-ಕರಾಚಿಯನ್ನು ಸಂಪರ್ಕಿಸುವ ಥಾರ್ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಭಾರತ ಜೋಧ್‍ಪುರ-ಮುನಾಬಾವೊ ಸಂಪರ್ಕಿಸುವ ಥಾರ್ ಲಿಂಕ್ ಎಕ್ಸ್‌ಪ್ರೆಸ್‌ ಅನ್ನು ರದ್ದುಗೊಳಿಸಿದೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ನಿರ್ಧಾರ ಪಾಕಿಸ್ತಾನವನ್ನು ವಿಚಲಿತಗೊಳಿಸಿದ್ದು, ಎರಡೂ ರಾಷ್ಟ್ರಗಳ ಸಂಬಂಧಗಳಲ್ಲಿ...

ವಿಶ್ವಸಂಸ್ಥೆಯಲ್ಲಿ ಪಾಕ್‍ಗೆ ಭಾರೀ ಮುಖಭಂಗ – ಅಕ್ಬರುದ್ದೀನ್ ಉತ್ತರಕ್ಕೆ ಪಾಕ್ ಪತ್ರಕರ್ತರು ಕಕ್ಕಾಬಿಕ್ಕಿ

6 days ago

ನ್ಯೂಯಾರ್ಕ್: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಭಾರತದ ಕ್ರಮವನ್ನು ವಿರೋಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ಸಲ್ಲಿಸಿದ್ದ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಜಮ್ಮು-ಕಾಶ್ಮೀರ ವಿಚಾರದಲ್ಲಿ ಭಾರತದ ಸರ್ಕಾರ ಕೈಗೊಂಡ ನಿರ್ಧಾರದ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶುಕ್ರವಾರ...

36 ರಸ್ತೆ, 5 ಉದ್ಯಾನವನಕ್ಕೆ ಕಾಶ್ಮೀರ ಎಂದು ಹೆಸರಿಡಲು ನಿರ್ಧರಿಸಿದ ಪಾಕ್

7 days ago

ಲಾಹೋರ್: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಮಾನ್ಯತೆಯನ್ನು ಭಾರತ ಸರ್ಕಾರ ರದ್ದು ಮಾಡಿರುವ ಹಿನ್ನೆಲೆ ಕಾಶ್ಮೀರ ಜನರೊಂದಿಗೆ ತಮ್ಮ ಸಾರ್ವಭೌಮತ್ವತೆ ತೋರಿಸಲು ಪಾಕಿಸ್ತಾನ ಮುಂದಾಗಿದೆ. ಹೀಗಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬರುವ 36 ರಸ್ತೆಗಳಿಗೆ ಹಾಗೂ 5 ಉದ್ಯಾನವನಕ್ಕೆ ಕಾಶ್ಮೀರ ಎಂದು...

ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿ ಮರು ಆಯ್ಕೆ

7 days ago

ಮುಂಬೈ: ಟೀಂ ಇಂಡಿಯಾದ ಕೋಚ್ ಆಗಿ ರವಿಶಾಸ್ತ್ರಿ ಮುಂದುವರಿದಿದ್ದಾರೆ. ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಅಂತಿಮವಾಗಿ ರವಿಶಾಸ್ತ್ರಿ ಅವರನ್ನೇ ಮರು ಆಯ್ಕೆ ಮಾಡಿದೆ. ರವಿಶಾಸ್ತ್ರಿ ಜೊತೆ ನ್ಯೂಜಿಲೆಂಡಿನ ಮೈಕ್ ಹೆಸ್ಸನ್, ವೆಸ್ಟ್ ಇಂಡೀಸಿನ ಫಿಲ್ ಸಿಮನ್ಸ್, ಆಸ್ಟ್ರೇಲಿಯಾದ ಟಾಮ್...