Monday, 20th August 2018

Recent News

3 months ago

ಆಗಿದ್ದೆಲ್ಲಾ ಒಳ್ಳೆಯದಕ್ಕೆ ಆಗಿದೆ, ಇಷ್ಟೊಂದು ಲೀಡ್ ಬರುತ್ತೆ ಅಂದ್ಕೊಂಡಿರಲಿಲ್ಲ: ಮುನಿರತ್ನ ಮಗಳು

ಬೆಂಗಳೂರು: ರಾಜರಾಜೇಶ್ವರಿ ನಗರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಮುನಿರತ್ನ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ತಂದೆ ಮುನಿರತ್ನ ಚುನಾವಣೆಯಲ್ಲಿ ಗೆದ್ದ ಖುಷಿಯಲ್ಲಿ ಮಾತನಾಡಿದ ಅವರ ಮಗಳು ಸಿಂಧೂರಿ, “ಇದು ನಮಗೆ ಸಂತೋಷದ ವಿಷಯ. ಚುನಾವಣೆ ಮುಂದೂಡಿದ್ದು, ಒಳೆಯದೇ ಆಯಿತ್ತು. ಆಗುವುದೆಲ್ಲ ಒಳ್ಳೆಯದ್ದಕ್ಕೆ ಆಗುತ್ತದೆ. ನಮ್ಮ ವಿರೋಧ ಪಕ್ಷದವರು ಆಗಲಿ, ಬೇರೆಯವರೇ ಆಗಲಿ ಅವರು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಅವರನ್ನು ನಾನು ಧನ್ಯವಾದ ತಿಳಿಸಬೇಕು” ಎಂದು ಹೇಳಿದರು. ನಾನು ಈಗ ತಾನೇ ನನ್ನ ತಂದೆ ಜೊತೆ […]

3 months ago

2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನ ಸೋಲಿಸಲು ‘ತ್ರಿಶೂಲ ವ್ಯೂಹ’ ರಚನೆ

ಬೆಂಗಳೂರು: ದೊಡ್ಡ ಮಟ್ಟದ ರಾಜಕೀಯ ಮನ್ವಂತರಕ್ಕೆ ಕರ್ನಾಟಕ ಭೂಮಿಕೆಯಾಗಲಿದೆ ಅಂತ ಕಳೆದ ವಾರದವರೆಗೂ ಯಾರೊಬ್ಬರೂ ಊಹಿಸಿರಲಿಲ್ಲ. ಹೌದು, ರಾಷ್ಟ್ರ ರಾಜಕಾರಣದ ಸಂಭಾವ್ಯ ಬದಲಾವಣೆಗೆ ಮುನ್ನುಡಿ ಬರೆಯಲು ಕರ್ನಾಟಕ ಹೊರಟಿದೆ. ಕರ್ನಾಟಕದ ವರ್ತಮಾನದ ರಾಜಕೀಯ ವಿದ್ಯಮಾನವನ್ನೇ ಆಧಾರವಾಗಿಟ್ಟುಕೊಂಡು, ಮೋದಿ ವಿರುದ್ಧ ಮುನ್ನುಗ್ಗಲೇಬೇಕು ಎಂಬ ಛಲದಿಂದ ದೇಶದ ಬಿಜೆಪಿಯೇತರ ಮುಂಚೂಣಿ ನಾಯಕರೆಲ್ಲಾ ದೋಸ್ತಿ ಮಂತ್ರ ಜಪಿಸುತ್ತಾ ಬಿಗ್ ದಂಗಲ್...

ಮತ್ತೆ ನಮ್ಮ ಪಕ್ಷಕ್ಕೆ ಬಾ, ಮಂತ್ರಿ ಮಾಡ್ತೀನಿ: ಬಿ.ಸಿ.ಪಾಟೀಲ್‍ಗೆ ಬಿಎಸ್‍ವೈ ಬಿಗ್ ಆಫರ್

3 months ago

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರ ಬಂದಿದ್ದು, ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಆರೋಪಗಳನ್ನು ಕಾಂಗ್ರೆಸ್ ಮಾಡುತ್ತಿದೆ. ಇತ್ತ ಕಾಂಗ್ರೆಸ್‍ನ ಕೆಲ ಶಾಸಕರಿಗೆ ಬಿಜೆಪಿ ನಾಯಕರು ಆಫರ್ ಮಾಡಿದ್ದಾರೆ ಎನ್ನಲಾದ ಆಡಿಯೋಗಳನ್ನು ಕಾಂಗ್ರೆಸ್...

ಆಂಧ್ರದಲ್ಲಿ ಏನಾಯ್ತು ಗೊತ್ತಲ್ಲ, 25 ಕೋಟಿ ಕೊಡ್ತೀನಿ ನಮ್ಮ ಕಡೆ ಬಾ: ಶ್ರೀರಾಮುಲು ಧಮಾಕಾ ಆಫರ್

3 months ago

ಬೆಂಗಳೂರು: ಇದೂವರೆಗೂ ಬಿಜೆಪಿಯ ಜನಾರ್ದನ ರೆಡ್ಡಿ, ಬಿ.ಜೆ.ಪುಟ್ಟಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಆಫರ್ ಕೊಟ್ಟಿರುವ ಆಡಿಯೋಗಳನ್ನು ಕೇಳಿದ್ದಾಯಿತು. ಇದೀಗ ಬಿಜೆಪಿ ಶಾಸಕ ಶ್ರೀರಾಮುಲು ಮತ್ತು ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಆಫರ್ ನೀಡಿದ್ದಾರೆ ಎನ್ನಲಾದ ಆಡಿಯೋ ರಿಲೀಸ್ ಆಗಿದೆ. ಹಾವೇರಿ...

ಕೊನೆಯುಸಿರು ಇರೋವರೆಗೂ ನಾನು ರೈತರಿಗಾಗಿ ಹೋರಾಡ್ತೀನಿ: ಬಿಎಸ್‍ವೈ ವಿದಾಯ ಭಾಷಣ

3 months ago

ಬೆಂಗಳೂರು: 56 ಗಂಟೆಗಳ ಕಾಲ ಕರುನಾಡಿನ ರಾಜನಾಗಿದ್ದ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 104 ಸದಸ್ಯರ ಹೊಂದಿ ಈ ಬಾರಿ ಅಧಿಕಾರವನ್ನೇ ನಡೆಸಿಯೇ ತೀರುತ್ತೇವೆ ಎಂದಿದ್ದ ಬಿಎಸ್ ಯಡಿಯೂರಪ್ಪ ವಿಶ್ವಾಸ ಮತಯಾಚನೆ ನಡೆಸದೇ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿದ್ದಾರೆ....

ವಿಧಾನಸಭೆಗೆ ಭಾರೀ ಸಂಖ್ಯೆಯಲ್ಲಿ ಮಾರ್ಷಲ್‍ ಗಳ ನಿಯೋಜನೆ!

3 months ago

ಬೆಂಗಳೂರು: ಇಂದು ಬಿಜೆಪಿ ಸರ್ಕಾರದ ಬಹುಮತ ಸಾಭೀತು ಹಿನ್ನೆಲೆಯಲ್ಲಿ ವಿಧಾನ ಸಭೆಗೆ ಹೆಚ್ಚಿನ ಮಾರ್ಷಲ್ ಗಳನ್ನು ಆಯೋಜನೆ ಮಾಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಇಂದು ತಮ್ಮ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಈಗಾಗಲೇ ಎಲ್ಲಾ ಶಾಸಕರು ವಿಧಾನ ಸಭೆ ಆಗಮಿಸುತ್ತಿದ್ದಾರೆ. ಹೀಗಾಗಿ ಗದ್ದಲ ಮತ್ತು...

ಬಹುಮತ ಸಾಬೀತಿಗೆ ಬಿಜೆಪಿಯಿಂದ ಕೊನೆ ಕ್ಷಣದ ಕಸರತ್ತು!

3 months ago

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಇಂದು ವಿಧಾನ ಸಭೆಯಲ್ಲಿ ವಿಶ್ವಾಸ ಮತಯಾಚನೆ ಮಾಡಲಿರುವ ಹಿನ್ನೆಲೆಯಲ್ಲಿ ಬಹುಮತ ಸಾಬೀತಿಗೆ ಬಿಜೆಪಿ ಕೊನೆ ಕ್ಷಣದ ಕಸರತ್ತು ಮಾಡುತ್ತಿದೆ. ಶಾಂಗ್ರಿಲಾ ಹೋಟೆಲ್‍ ನಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕ ಬಿಎಸ್‍ವೈ ನೇತೃತ್ವದಲ್ಲಿ ನಡೆದ...

ಖಾಸಗಿ ಹೋಟೆಲ್‍ನಲ್ಲಿ ಜೆಡಿಎಸ್ ತುರ್ತು ಸಭೆ

3 months ago

ಬೆಂಗಳೂರು: ಹೈದರಾಬಾದ್‍ನಿಂದ ಆಗಮಿಸಿದ್ದ ಕಾಂಗ್ರೆಸ್ ಶಾಸಕರು ಕೆಜೆ ಜಾರ್ಜ್ ಒಡೆತನದ ಎಂಬೆಸಿ ಗಾಲ್ಫ್ ಬಿಸಿನೆಸ್ ಹೋಟೆಲ್ ನಲ್ಲಿ ತಂಗಿದ್ದರೆ, ಜೆಡಿಎಸ್ ಶಾಸಕರು ಲೆ ಮೆರಿಡಿಯನ್ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಹೋಟೆಲ್ ನಲ್ಲಿ ಜೆಡಿಎಸ್ ತುರ್ತು ಸಭೆಯಲ್ಲಿ ಕರೆದಿದ್ದು, ಶಾಸಕಾಂಗ...