Saturday, 16th February 2019

Recent News

5 months ago

ನಿನ್ನ ಕಾಲು ಮುರಿತೀನಿ ನೋಡು: ಕೇಂದ್ರ ಸಚಿವನ ಧಮ್ಕಿ ವಿಡಿಯೋ ವೈರಲ್!

ಕೋಲ್ಕತ್ತ: ಪಶ್ಚಿಮ ಬಂಗಾಳದ ಅಸನ್ಸೋಲ್ ಪ್ರದೇಶದಲ್ಲಿ ನಡೆದ ಅಂಗವಿಕಲರ ಸಮಾವೇಶದಲ್ಲಿ ಕೇಂದ್ರ ಸಚಿವ ಬಬುಲ್ ಸುಪ್ರಿಯೊ ವ್ಯಕ್ತಿಯೊಬ್ಬರಿಗೆ ನಿನ್ನ ಕಾಲನ್ನು ಮುರಿಯುತ್ತೇನೆ ಎಂದು ಧಮ್ಕಿ ಹಾಕಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಸನ್ಸೋಲ್ ಜಿಲ್ಲೆಯಲ್ಲಿ ಅಂಗವಿಕಲರಿಗಾಗಿ ಗಾಲಿಕುರ್ಚಿ ಮತ್ತು ಪರಿಕರಗಳನ್ನು ವಿತರಿಸುವ ‘ಸಾಮಾಜಿಕ ಅಧಿಕಾರಿತಾ ಶಿವಾರ್’ ಸಮಾರಂಭಕ್ಕೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆ ರಾಜ್ಯ ಸಚಿವ ಬಬುಲ್ ಸುಪ್ರಿಯೋರನ್ನು ಆಹ್ವಾನಿಸಲಾಗಿತ್ತು. ಸಭೆಯಲ್ಲಿ ಸಚಿವರು ಭಾಷಣ ಮಾಡುತ್ತಿರುವಾಗ ಓರ್ವ ವ್ಯಕ್ತಿ ಅಡ್ಡಾ-ದಿಡ್ಡಿಯಾಗಿ ಓಡಾಡುತ್ತಿದ್ದನು. ಇದನ್ನು […]

5 months ago

ಬಸ್ ಚಾಲಕನ ಬೇಜವಾಬ್ದಾರಿತನಕ್ಕೆ ವ್ಯಕ್ತಿಯ 2 ಕಾಲುಗಳೇ ಮುರಿಯಿತು!

ಮಡಿಕೇರಿ: ಬಸ್ ಇಳಿದು ನಿಂತಿದ್ದ ವ್ಯಕ್ತಿ ಮೇಲೆ ಅದೇ ಬಸ್ ಚಕ್ರ ಹರಿದು ಗಂಭೀರ ಗಾಯಗೊಂಡ ಘಟನೆ ವಿರಾಜಪೇಟೆಯ ಕಡಂಗದಲ್ಲಿ ನಡೆದಿದೆ. ಮೈಜುಂ ಎನಿಸೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 39 ವರ್ಷದ ಬಿಶಾಲ್ ಗಂಭೀರ ಗಾಯಗೊಂಡ ವ್ಯಕ್ತಿ. ಬಿಶಾಲ್ ಬಸ್ಸಿನಲ್ಲಿ ಬಂದು ಇಳಿದು ನಿಂತಿದ್ದರು. ಈ ವೇಳೆ ಅದೇ ಬಸ್ ಅವರ ಮೇಲೆ ಹರಿದಿದೆ....

ವೃದ್ಧನಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ನೆಲಮಂಗಲ ಜನ

8 months ago

ಬೆಂಗಳೂರು: ಕಳೆದ ಮೂರು ದಿನದಿಂದ ತನ್ನ ಸ್ವಗ್ರಾಮಕ್ಕೆ ತೆರಳಲು ಹಣವಿಲ್ಲದೆ ಪರದಾಡುತ್ತಿದ್ದ ವೃದ್ಧರೊಬ್ಬರಿಗೆ ಸಾರ್ವಜನಿಕರು ಊಟ ಉಪಚಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಲೋಹಿತ್ ನಗರದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮಲ್ಲಾಪುರ...

ಕಲಬುರಗಿಯಲ್ಲಿ ಯುಗಾದಿಯಂದೇ ದುರಂತ – ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

11 months ago

ಕಲಬುರಗಿ/ಗದಗ: ಯುಗಾದಿ ಹಬ್ಬದಂದೇ ಕಲಬುರಗಿಯ ಶಿವಲಿಂಗೇಶ್ವರ ಜಾತ್ರೆಯ ರಥೋತ್ಸವದಲ್ಲಿ ಘನಘೋರ ದುರಂತ ಸಂಭವಿಸಿದೆ. ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇಲ್ಲಿನ ಶಹಬಾದ್ ತಾಲೂಕಿನ ದೇವನ ತೇಗನೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಕಿಶನ್ ಮೃತ ದುರ್ದೈವಿಯಾಗಿದ್ದು, ಇವರು ಶಹಬಾದ್ ತಾಲೂಕಿನ...

ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಯ ಕಾಲಿನ ಮೇಲೆ ಹರಿದ ಲಾರಿ

1 year ago

ಬೆಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ಲಾರಿಯೊಂದು ಪಾದಚಾರಿ ಮಹಿಳೆಯ ಕಾಲಿನ ಮೇಲೆ ಹರಿದಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯಲ್ಲಿ ನಡೆದಿದೆ. ಅತೀ ವೇಗವಾಗಿ ಬಂದ ಮಹಾರಾಷ್ಟ್ರ ಮೂಲದ ಲಾರಿ ನೆಲಮಂಗಲ ತಾಲೂಕಿನ ಮಾದೇನಹಳ್ಳಿ ಗ್ರಾಮದ ಸುವರ್ಣಮ್ಮ (44) ಅವರ...

ಕಾಲಲ್ಲಿ ಗಾಯವಾದ್ರೆ ರಕ್ತದ ಬದಲು ತ್ರಾಮದ ಮೊಳೆಗಳು ಹೊರಬಂದ್ವು- ಚಾಮರಾಜನಗರದಲ್ಲೊಂದು ಅಚ್ಚರಿ!

1 year ago

ಚಾಮರಾಜನಗರ: ಕಾಲಿಗೆ ಗಾಯವಾದರೆ ರಕ್ತ ಬರುವುದನ್ನು ನೋಡಿದ್ದೀರ. ಆದರೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೊಡ್ಡತಪ್ಪೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಕಾಲಿಗೆ ಗಾಯವಾಗಿದ್ದು, ತಾಮ್ರದ ಮೊಳೆಗಳು ಹೊರಬಂದಿವೆ. ಗ್ರಾಮದ ಮಾದಪ್ಪ ಎಂಬವರ ಕಾಲಿನಲ್ಲಿ ಗಾಯವಾದ ಜಾಗದಲ್ಲಿ ರಕ್ತದ ಬದಲು ತಾಮ್ರದ ಮೊಳೆಗಳು ಬರುತ್ತಿವೆ. ಕಳೆದ...

ವಿಡಿಯೋ: ಸಮುದ್ರ ದಂಡೆಯ ಕಲ್ಲಿನ ಮೇಲೆ ಪೋಸು ನೀಡಲು ಹೋಗಿ ಕಾಲು ಮುರಿದುಕೊಂಡ ನವವಧು

1 year ago

ಕೇಪ್‍ಟೌನ್: ಸಾಮನ್ಯವಾಗಿ ನವದಂಪತಿ ತಮ್ಮ ಫೋಟೋಗಳು ಸುಂದರವಾಗಿ ಬರಬೇಕೆಂದು ಇಷ್ಟಪಡ್ತಾರೆ. ಮದುವೆಯ ನಂತರ ಸುಂದರ ಸ್ಥಳಗಳಿಗೆ ತೆರಳುವ ದಂಪತಿ ಫೋಟೋಗಳನ್ನು ವಿವಿಧ ಭಂಗಿಗಳಲ್ಲಿ, ಸುಂದರವಾದ ಸ್ಥಳಗಳಲ್ಲಿ ತೆಗೆದುಕೊಳ್ಳಲು ಇಚ್ಚಿಸುತ್ತಾರೆ. ಅದೇ ರೀತಿ ನವಜೋಡಿಯೊಂದು ಸಮುದ್ರ ದಂಡೆಯಲ್ಲಿನ ಕಲ್ಲುಗಳ ಮೇಲೆ ಫೋಟೋ ಕ್ಲಿಕ್ಕಿಸಿಕೊಳ್ಳಲು...

ಏಳನೇ ತರಗತಿ ಓದಿತ್ತಿರೋ ಪುಟ್ಟ ಬಾಲಕಿ ಕಾಲು ಆಪರೇಷನ್ ಗೆ ಬೇಕಿದೆ ಸಹಾಯ

1 year ago

ವಿಜಯಪುರ: ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮನೆಯನ್ನು ಬೆಳಗಬೇಕಿದ್ದ ಬಾಲಕಿ ಪೋಲೀಯೋದಿಂದ ನರಳುವಂತಾಗಿದೆ. ಇತ್ತ ಶಾಲೆಗೂ ಹೋಗಲು ಆಗದೆ, ಅತ್ತ ಎಲ್ಲರಂತೆ ಆಟವಾಡಲು ಆಗದಂತೆ ಬಾಲಕಿ ನೋವು ಅನುಭವಿಸುತ್ತಿದ್ದಾಳೆ. ಇನ್ನು ಮಗಳ ನೋವು ನೋಡಿಯು ಕೈಯಿಂದ ಏನು ಮಾಡಲು ಆಗದ ಕುಟುಂಬಸ್ಥರು...