CinemaKarnatakaLatestMain PostSandalwood

ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಕಾಲಿಗೆ ಗಂಭೀರ ಪೆಟ್ಟು: ಯಶಸ್ವಿ ಶಸ್ತ್ರ ಚಿಕಿತ್ಸೆ

Advertisements

ವಾರದ ಹಿಂದೆಯಷ್ಟೇ ಕ್ರೀಮ್ ಸಿನಿಮಾದ ಶೂಟಿಂಗ್ ಸಮಯದಲ್ಲಿ ಕಾಲಿಗೆ ಗಂಭೀರ ಪೆಟ್ಟು ಮಾಡಿಕೊಂಡಿದ್ದ ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತ ಹೆಗ್ಡೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಕಾಲಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯಾಗಿದ್ದು, ಇನ್ನೆರಡು ದಿನಗಳಲ್ಲಿ ಡಿಸ್ ಚಾರ್ಜ್ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.

ಸರ್ಜರಿ ನಂತರ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿರುವ ವೈದ್ಯರು, ಕಾಲಿಗೆ ಗಂಭೀರವಾಗಿಯೇ ಪೆಟ್ಟು ಬಿದ್ದಿತ್ತು. ಹಾಗಾಗಿ ಅನಿವಾರ್ಯವಾಗಿ ಶಸ್ತ್ರ ಚಿಕಿತ್ಸೆಯನ್ನು ಮಾಡಬೇಕಾಯಿತು. ಇದೀಗ ಸರ್ಜರಿ ಯಶಸ್ವಿಯಾಗಿ ನಡೆದಿದ್ದು, ಎಂಟು ವಾರಗಳ ಕಾಲ ಅವರು ರೆಸ್ಟ್ ಮಾಡಬೇಕು. ಅಲ್ಲದೇ, ಫಿಸಿಯೋಥೆರಪಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಸಿಂಪಲ್ ಸುನಿ `ಗತವೈಭವ’ದಲ್ಲಿ ದೇವಕನ್ಯೆಯಾಗಿ ಆಶಿಕಾ ರಂಗನಾಥ್‌

ಕ್ರೀಮ್ ಸಿನಿಮಾದ ಸಾಹಸ ಸನ್ನಿವೇಶವನ್ನು ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಚಿತ್ರತಂಡವು ಡ್ಯೂಪ್ ಬಳಸುವಂತೆ ಹೇಳಿದರೂ, ಸಂಯುಕ್ತ ಹೆಗ್ಡೆ ಅತ್ಯುತ್ಸಾಹದಿಂದ ಡ್ಯೂಪ್ ಇಲ್ಲದೇ ತಾವೇ ಪಾಲ್ಗೊಂಡಿದ್ದರು, ಆಗ ಕಾಲು ಟ್ವಿಸ್ಟ್ ಆಗಿತ್ತು. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆಯನ್ನೂ ನೀಡಲಾಯಿತು. ಕೆಲ ದಿನಗಳ ಕಾಲ ಮನೆಯಲ್ಲೇ ಇದ್ದುಕೊಂಡು ಟ್ರೀಟ್ಮೆಂಟ್ ಪಡೆದರು. ಆದರೂ, ನೋವು ಕಡಿಮೆ ಆಗಿರಲಿಲ್ಲ. ಕೊನೆಗೂ ಆಸ್ಪತ್ರೆ ಸೇರಿ, ಚಿಕಿತ್ಸೆ ಪಡೆದಿದ್ದಾರೆ.

Live Tv

Leave a Reply

Your email address will not be published.

Back to top button