Saturday, 22nd February 2020

Recent News

7 months ago

ನಾನು ಕೇವಲ ಜಿಲ್ಲೆ, ಕೋಟಾಕ್ಕೆ ಸೀಮಿತನಲ್ಲ, ನನ್ನ ಜೀವನವೇ ರಾಜ್ಯಕ್ಕೆ ಅರ್ಪಣೆ: ಶ್ರೀರಾಮುಲು

ಬಳ್ಳಾರಿ: ನಾನು ಯಾವ ಜಿಲ್ಲೆಗೂ, ಯಾವ ಕೋಟಾಕ್ಕೂ ಸೀಮಿತನಲ್ಲ. ನನ್ನ ಜೀವನ ರಾಜ್ಯಕ್ಕೆ, ರಾಜಕಾರಣಕ್ಕೆ ಅರ್ಪಣೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವೆಂದು ಬಿಜೆಪಿ ಶಾಸಕ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಸಂಪುಟ ವಿಸ್ತರಣೆ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ಶೀಘ್ರದಲ್ಲೆ ನಿರ್ಧಾರ ತೆಗೆದುಕೊಳ್ಳುತ್ತದೆ. ಡಿಸಿಎಂ ಸ್ಥಾನದ ವಿಚಾರವಾಗಿ, ನಾನು ಏನೂ ಮಾತನಾಡಲ್ಲ. ಹೈಕಮಾಂಡ್ ಏನು ಹೇಳುತ್ತದೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ನಾನು ಯಾವ ಜಿಲ್ಲೆಗೂ, ಯಾವ ಕೋಟಕ್ಕೂ ಸೀಮಿತನಲ್ಲ. ನನ್ನ […]

7 months ago

ಅತೃಪ್ತ ಶಾಸಕರು ಗಂಡಸರು ಆಗಿದ್ದರೆ ಸದನಕ್ಕೆ ಬರಬೇಕಿತ್ತು – ಆನಂದ್ ಅಸ್ನೋಟಿಕರ್

ಕಾರವಾರ: ಅತೃಪ್ತ ಶಾಸಕರಿಗೆ ಗಂಡಸ್ತನ ಇದ್ದಿದ್ದರೆ ಸದನಕ್ಕೆ ಬಂದು ನಮ್ಮ ವಿರುದ್ಧ ಮತ ಹಾಕಬೇಕಿತ್ತು. ಚಕ್ಕಾಗಳ ರೀತಿಯಲ್ಲಿ ಮುಂಬೈನಲ್ಲಿ ಕುಳಿತಿದ್ದೇಕೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕಿಡಿ ಕಾರಿದ್ದಾರೆ. ಕಾರವಾರದಲ್ಲಿ ಮಾತನಾಡಿದ ಅವರು ಸುಪ್ರೀಂಕೋರ್ಟಿನಲ್ಲಿ ಶಾಸಕರ ಅನರ್ಹತೆ ತಡೆ ಹಿಡಿಯುವ ಸಾಧ್ಯತೆ ಕಡಿಮೆಯಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮನ್ನು ಅನರ್ಹ ಮಾಡಲಾಗಿತ್ತು....

ಬಿಜೆಪಿ ನೂರಕ್ಕೆ ನೂರರಷ್ಟು ಬಹುಮತ ಸಾಬೀತು ಪಡಿಸುತ್ತೆ: ಚಲುವರಾಯಸ್ವಾಮಿ

7 months ago

ಮಂಡ್ಯ: ಆಪರೇಷನ್ ಕಮಲಕ್ಕಿಂತ, ಮೈತ್ರಿ ಸರ್ಕಾರದ ಆಡಳಿತದಿಂದ ಬೇಸತ್ತು ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಆಡಳಿತದಿಂದ...

ಕಾಂಗ್ರೆಸ್ ನಾಯಕರೇ ನಮ್ಮನ್ನು ಪ್ರಚೋದಿಸಿ ರಾಜೀನಾಮೆ ಕೊಡಿಸಿದ್ದು: ಮುನಿರತ್ನ

7 months ago

ಬೆಂಗಳೂರು: ಅನರ್ಹತೆ ನಮಗೆ ತಿಳಿದಿರುವ ವಿಷಯವೇ, ಕಾಂಗ್ರೆಸ್ ನಾಯಕರು ನಮಗೆ ಮೊದಲೇ ಈ ಬಗ್ಗೆ ತಿಳಿಸಿದ್ದರು. ಅನರ್ಹತೆಯ ಶಿಕ್ಷಯನ್ನೇ ನೀಡುತ್ತೇವೆಂದು ಮೊದಲೇ ಬರೆದು ಬಿಟ್ಟಿದ್ದರು. ಅದು ಇವತ್ತು ಆಗಿದೆ ಅಷ್ಟೇ, ಹೀಗಾಗಿ ನಮಗೆ ಸ್ಪೀಕರ್ ಅನರ್ಹತೆ ನಿರ್ಧಾರ ಆಶ್ಚರ್ಯ ಎನ್ನಿಸುತ್ತಿಲ್ಲ ಎಂದು...

ಸ್ಪೀಕರ್ ನಿರ್ಧಾರ ಸಂವಿಧಾನಕ್ಕೆ ಅಪಚಾರ – ಪಿ.ರಾಜೀವ್

7 months ago

ಬೆಂಗಳೂರು: ವಂಶಪಾರಂಪರ್ಯದ ರಾಜಕೀಯ ಪಕ್ಷದಲ್ಲಿ ಜನಪ್ರತಿನಿಧಿಗಳಿಗೆ ಸ್ವಾತಂತ್ರ್ಯವಿಲ್ಲ. ಅತೃಪ್ತ ಶಾಸಕರನ್ನು ಹೋಲ್ ಸೇಲ್ ಆಗಿ ಅನರ್ಹಗೊಳಿಸಿರೋದನ್ನ ನಾವು ಸ್ಪೀಕರ್ ಅವರಿಂದ ನಿರೀಕ್ಷಿಸಿರಲಿಲ್ಲ ಎಂದು ಬಿಜೆಪಿ ಶಾಸಕ ಪಿ. ರಾಜೀವ್ ಕಿಡಿಕಾರಿದ್ದಾರೆ. ಬಿಎಸ್‍ವೈ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅತೃಪ್ತ...

ಪಕ್ಷಕ್ಕೆ, ಜನತೆಗೆ ದ್ರೋಹ ಬಗೆದ ಶಾಸಕರಿಗೆ ಕೋರ್ಟ್ ಕೂಡ ತಕ್ಕ ಶಿಕ್ಷೆ ನೀಡಲಿದೆ: ಕಾಂಗ್ರೆಸ್

7 months ago

ಬೆಂಗಳೂರು: ಅತೃಪ್ತ ಶಾಸಕರ ಅನರ್ಹಗೊಳಿಸಿದ ಸ್ಪೀಕರ್ ತೀರ್ಪನ್ನು ಸ್ವಾಗತಿಸುತ್ತೇವೆ. ಪಕ್ಷಕ್ಕೆ ಹಾಗೂ ಮತದಾರರಿಗೆ ದ್ರೋಹ ಮಾಡಿದಕ್ಕೆ ನ್ಯಾಯಾಲಯ ಕೂಡ ಶಾಸಕರಿಗೆ ತಕ್ಕ ಶಿಕ್ಷೆ ನೀಡಲಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಸೋಮವಾರ ನೂತನ ಮುಖ್ಯಮಂತ್ರಿಗಳು ಬಹುಮತ ಸಾಬೀತುಪಡಿಸುವ ಮುನ್ನ ದಿನವೇ 14...

ಇಬ್ಬರು ಅತೃಪ್ತ ಶಾಸಕರು ನನ್ನನ್ನು ಸಂಪರ್ಕಿಸಿದ್ದು ನಿಜ: ಸಿದ್ದರಾಮಯ್ಯ

7 months ago

ಬೆಂಗಳೂರು: ಕೆಲವು ಅತೃಪ್ತ ಶಾಸಕರು ಕರೆ ಮಾಡಿದ್ದು ನಿಜ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದೀಗ ಸ್ವತಃ ಸಿದ್ದರಾಮಯ್ಯನವರೇ, ಕೆಲವು ಅತೃಪ್ತ ಶಾಸಕರು ನನ್ನನ್ನು ಸಂಪರ್ಕಿಸಿದ್ದು ನಿಜ. ಅವರೊಂದಿಗೆ ಮಾತನಾಡಬಾರದು ಎಂದು ನಾನು ಕರೆ ಸ್ವೀಕರಿಸಲಿಲ್ಲ. ಅನರ್ಹತೆ ಶಿಕ್ಷೆಗೆ ಹೆದರಿ...

ಯಾವ ಶಾಸಕರೂ ಯಾರನ್ನೂ ಸಂಪರ್ಕಿಸಿಲ್ಲ, ಎಂ.ಬಿ.ಪಾಟೀಲ್ ದಡ್ಡ: ಎಚ್.ವಿಶ್ವನಾಥ್

7 months ago

-ಸಿದ್ದರಾಮಯ್ಯ, ಎಂಬಿಪಿ ದಾರಿ ತಪ್ಪಿದ ಮಕ್ಕಳು ಮುಂಬೈ: ಯಾವ ಶಾಸಕರೂ ಸಹ ಯಾರನ್ನೂ ಸಂಪರ್ಕಿಸಿಲ್ಲ, ಮೈತ್ರಿ ನಾಯಕರೂ ಸಹ ನಮ್ಮನ್ನು ಸಂಪರ್ಕಿಸಿಲ್ಲ. ಎಂ.ಬಿ.ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರ ಹೇಳಿಕೆಗಳು ಹಸಿ ಸುಳ್ಳು ಎಂದು ರೆಬೆಲ್ ಶಾಸಕ ಎಚ್.ವಿಶ್ವನಾಥ್ ಕಿಡಿ ಕಾರಿದ್ದಾರೆ. ಇಬ್ಬರು...