`ಜೀರೋ’ ಚಿತ್ರದ ನಂತರ ಬಾಲಿವುಡ್ ನಟ ಶಾರುಖ್ ಖಾನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ `ಡುಂಕಿ’ ಚಿತ್ರಕ್ಕೆ ಶಾರುಖ್ ಖಾನ್‌ಗೆ ಜೋಡಿಯಾಗಿ ತಾಪ್ಸಿ ಪನ್ನು ಕಾಣಿಸಿಕೊಂಡಿದ್ದಾರೆ.
ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮತ್ತು ನಿರ್ಮಾಣದ `ಡುಂಕಿ’ ಚಿತ್ರದಲ್ಲಿ ಶಾರುಖ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್‌ಗೆ ನಾಯಕಿಯಾಗಿ ತಾಪ್ಸಿ ಪನ್ನು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರದ ಮೊದಲ ಹಂತದ ಶೂಟಿಂಗ್ ನೆರವೇರಿದ್ದು, ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ಶುರುವಾಗಲಿದೆ. ಇದನ್ನೂ ಓದಿ:ಪವಿತ್ರ ಲೋಕೇಶ್ ದೂರು : ತನಿಖೆ ಆರಂಭಿಸಿದ ಸೈಬರ್ ಪೊಲೀಸ್
ಮೊದಲ ಬಾರಿಗೆ ತೆರೆಗೆ ಮೇಲೆ ಶಾರುಖ್ ಖಾನ್ ಮತ್ತು ತಾಪ್ಸಿ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಭಿನ್ನ ಕಥೆಯ ಮೂಲಕ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಸಹ ನಿರ್ಮಾಪಕಿಯಾಗಿ ಶಾರುಖ್ ಪತ್ನಿ ಗೌರಿ ಖಾನ್ ಸಾಥ್ ನೀಡಿದ್ದಾರೆ.
Live Tv