ತೆಲುಗು ನಟ ನರೇಶ್ ಜೊತೆಗಿನ ಸಂಬಂಧದ ಕುರಿತಾಗಿ ಅವಹೇಳನಕಾರಿ ಪೋಸ್ಟ್ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ನಟಿ ಪವಿತ್ರಾ ಲೋಕೇಶ್ ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ಸೈಬರ್ ಠಾಣೆಗೆ ದೂರು ದಾಖಲಿಸಿದ್ದರು. ದೂರು ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಸೈಬರ್ ಪೊಲೀಸರಿಂದ ತನಿಖೆ ಆರಂಭವಾಗಿದೆ. ಪವಿತ್ರ ಲೋಕೇಶ್ ಮನೆ ಬಳಿ ಬಂದು ವಿಚಾರಿಸಿರುವ ಪೊಲೀಸರು, ಅವರು ಮನೆಯಲ್ಲಿ ಇಲ್ಲದೆ ಕಾರಣ ವಾಪಸ್ ಆಗಿದ್ದಾರೆ.
Advertisement
ಈ ಕುರಿತು ಮಾತನಾಡಿರುವ ಪವಿತ್ರಾ ಲೋಕೇಶ್ ತಾಯಿ, “ಎರಡು ದಿನಗಳ ಹಿಂದೆ ಮೈಸೂರಿಗೆ ಬಂದು ಪವಿತ್ರ ಲೋಕೇಶ್ ದೂರು ದಾಖಲಿಸಿದ್ದರು. ಸದ್ಯ ಮಗಳು ಹೈದರಾಬಾದ್ ನಲ್ಲಿ ಇದ್ದಾಳೆ. ದೂರು ದಾಖಲಿಸಲೆಂದೇ ಶೂಟಿಂಗ್ ನಿಲ್ಲಿಸಿ ಬಂದಿದ್ದಳು. ಏನು ದೂರು ಕೊಟ್ಟಿದ್ದಾಳೆ ನನಗೆ ಗೊತ್ತಿಲ್ಲ. ದೂರು ಕೊಟ್ಟರೂ ಯಾವ ವಿಚಾರವನ್ನೂ ನನ್ನ ಬಳಿ ಹೇಳಿಲ್ಲ. ಈಗಿನ ಮಕ್ಕಳು ನಮಗೆ ಏನಾದ್ರು ಹೇಳುತ್ತಾರಾ?” ಎಂದಿದ್ದಾರೆ. ಇದನ್ನೂ ಓದಿ:ಜಸ್ವಂತ್ ಗಿಲ್ ಬಯೋಪಿಕ್‌ನಲ್ಲಿ ಅಕ್ಷಯ್ ಕುಮಾರ್
Advertisement
Advertisement
ಸದ್ಯ ಪವಿತ್ರಾ ಲೋಕೇಶ್ ತೆಲುಗು ಭಾಷೆಯ ಚಲನಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಹಳೆ ಶೂಟಿಂಗ್ ನ ಪ್ಯಾಚ್ ವರ್ಕ್‌ಗೆ ಹೋಗಿದ್ದಾರಂತೆ. ಅವರು ಯಾವ ಸಿನಿಮಾದ ಶೂಟಿಂಗ್ ನಲ್ಲಿ ಇದ್ದಾರೆ ಎನ್ನುವುದು ತಾಯಿಗೆ ಗೊತ್ತಿಲ್ಲವಂತೆ. “ಯಾವ ಚಿತ್ರ ಏನು ಎಂಬುದು ನನಗೆ ಗೊತ್ತಿಲ್ಲ. ಜುಲೈ5 ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮ ಇದೆ. ಅದಕ್ಕೆ ಬರುವುದಾಗಿ ಹೇಳಿದ್ದಾಳೆ. ಇದಕ್ಕಿಂತ ನನಗೆ ಏನೂ ಗೊತ್ತಿಲ್ಲ. ಮಾಧ್ಯಮಗಳ ಮುಂದೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ” ಎಂದಿದ್ದಾರೆ ಪವಿತ್ರ ಲೋಕೇಶ್ ತಾಯಿ ಪಾರ್ವತಿ ಲೋಕೇಶ್.