ಬೆಂಗಳೂರು: ಟಿ20 ವಿಶ್ವಕಪ್ ಇಂದಿನಿಂದ ಆರಂಭಗೊಂಡಿದೆ. ಈ ನಡುವೆ ಭಾರತ ಹಾಗೂ ಪಾಕಿಸ್ತಾನ ಆಕ್ಟೋಬರ್ 24 ರಂದು ತನ್ನ ಮೊದಲ ಪಂದ್ಯ ಆಡುತ್ತಿದೆ. ಈ ಪಂದ್ಯವನ್ನು ಭಾರತ ತಂಡ ಆಡದಂತೆ #BoycottPakistan ಎಂಬ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಆರಂಭಗೊಂಡು ಬಿಸಿಬಿಸಿ ಚರ್ಚೆಯಾಗುತ್ತಿದೆ.
Advertisement
ಭಾರತದೊಂದಿಗೆ ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸದಾ ತಕರಾರೆತ್ತುವ ಪಾಕಿಸ್ತಾನ ವಿರುದ್ಧ ಭಾರತ ತಂಡ ಕ್ರಿಕೆಟ್ ಆಡಬಾರದೆಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣನದಲ್ಲಿ ಕ್ರಿಕೆಟ್ ಅಭಿಮಾನಿಗಳು ಆರಂಭಿಸಿದ್ದಾರೆ. ಇದನ್ನೂ ಓದಿ: ಚಾಂಪಿಯನ್ ಆಟಗಾರರಿಗಿಲ್ಲ T20 ವಿಶ್ವಕಪ್ ಆಡುವ ಅದೃಷ್ಟ
Advertisement
Advertisement
ಆದರೆ ಟಿ20 ವಿಶ್ವಕಪ್ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡದೆ ಇದ್ದರೆ ಅದು ಭಾರತಕ್ಕೆ ನಷ್ಟ. ಭಾರತಕ್ಕೆ ಅಂಕಗಳ ಆಧಾರದಲ್ಲಿ ಒಂದು ಪಂದ್ಯ ಕಳೆದುಕೊಂಡರೆ ಅದು ವಿಶ್ವಕಪ್ ಗೆಲುವಿಗೆ ಹೊಡೆತ ಬೀಳಬಹುದು. ಅದಲ್ಲದೇ ಒಂದು ವೇಳೆ ಭಾರತ ತಂಡ ಮತ್ತು ಪಾಕಿಸ್ತಾನ ತಂಡ ವಿಶ್ವಕಪ್ ಫೈನಲ್‍ಗೆ ಬಂದರೆ ಆಗ ಭಾರತ ಆಡದಿದ್ದರೆ ಹೇಗೆ ಎಂಬ ಹಲವು ಪ್ರಶ್ನೆಗಳು ಇಲ್ಲಿ ಎದುರಾಗುತ್ತದೆ? ಇದನ್ನೆಲ್ಲ ಗಮನಿಸಿದರೆ ಈ ಅಭಿಯಾನ ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅಭಿಮಾನಿಗಳು ಯೋಚಿಸಬೇಕಿದೆ. ಇದನ್ನೂ ಓದಿ: ನ್ಯೂಜಿಲೆಂಡ್ ಸರಣಿಗೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್?
Advertisement
BCCI have to boycott the match between India and Pakistan because Pakistan has killed our 13 civilians #BoycottPakistan@BCCI
— Ankit Tiwari (@AnkitTi95167253) October 17, 2021
ಭಾರತ-ಪಾಕಿಸ್ತಾನ ನಡುವಿನ ಟಿ-20 ವಿಶ್ವಕಪ್ ಪಂದ್ಯದ ಮೇಲೆ ಅನಿಶ್ಚಿತತೆಯ ಕಾರ್ಮೋಡ ಆವರಿಸಿದೆ. ಇಂಡಿಯಾ-ಪಾಕಿಸ್ತಾನ ನಡುವಿನ ಪಂದ್ಯ ರದ್ದಾದದರೂ ಅಚ್ಚರಿ ಪಡಬೇಕಿಲ್ಲ ಅಂತ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸೆನ್ಸೇಷನ್ ಹೇಳಿಕೆ ಕೊಟ್ಟಿದ್ದಾರೆ. ಕಾಶ್ಮೀರದಲ್ಲಿ ಹೆಚ್ಚಾಗುತ್ತಿರುವ ಪಾಕ್ ಪ್ರಾಯೋಜಿತ ಉಗ್ರರ ಕೃತ್ಯಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜೊತೆ ಭಾರತ ಕ್ರಿಕೆಟ್ ಆಡಬಾರದು ಅಂತ ಗಿರಿರಾಜ್ ಸಿಂಗ್ ಆಗ್ರಹಿಸಿದ್ದಾರೆ. ಅಂದಹಾಗೆ, ಇವತ್ತು ಕೂಡ ಇಬ್ಬರು ವಲಸೆ ಕಾರ್ಮಿಕರನ್ನು ಉಗ್ರರು ಗುಂಡಿಟ್ಟು ಕೊಂದಿದ್ದಾರೆ. ಜೊತೆಗೆ, ಕಳೆದ 10 ದಿನಗಳಲ್ಲಿ 8 ಜನ ನಾಗರಿಕರು ಸಾವನ್ನಪ್ಪಿದ್ದರೆ, 9ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ.
ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ