ಬೆಂಗಳೂರು: ಇತ್ತೀಚೆಗೆ ಹೆಚ್ಚು ಚರ್ಚೆಯಾಗುತ್ತಿರುವ ಪಠ್ಯ ವಿವಾದಕ್ಕೆ ಮುಕ್ತಿ ಸಿಗುತ್ತಿಲ್ಲ. ಈಗ ಮತ್ತೊಂದು ವಿವಾದದಲ್ಲಿ ಪಠ್ಯ ಪರಿಷ್ಕರಣೆ ಸಮಿತಿ ಸಿಲುಕಿದೆ. ಆರನೇ ತರಗತಿಯ ಸಮಾಜ ಪಠ್ಯದಲ್ಲಿ ಸಿದ್ಧಗಂಗಾ ಮಠದ ಅನ್ನ ದಾಸೋಹ ಮತ್ತು ಅಕ್ಷರ ದಾಸೋಹ ನಡೆಸುತ್ತಿದೆ ಅನ್ನೋ ವಾಕ್ಯಕ್ಕೆ ರೋಹಿತ್ ಚಕ್ರತೀರ್ಥ ಸಮಿತಿ ಕತ್ತರಿ ಹಾಕಿದೆ ಎನ್ನಲಾಗಿದೆ.
Advertisement
ಸುರಪುರ ನಾಯಕರ ಪಠ್ಯ ಕಡಿತಕ್ಕೆ ಶಾಸಕ ರಾಜೂಗೌಡ ಅಸಮಾಧಾನ ವ್ಯಕ್ತಪಡಿಸಿ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಈ ಹಿಂದಿನಂತೆಯೇ ಪಠ್ಯ ಮುಂದುವರಿಸಲು ಒತ್ತಾಯಿಸಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿ, ಪಠ್ಯದಲ್ಲಿ ಆಗಿರುವ ತಪ್ಪುಗಳನ್ನು ಸರಿ ಮಾಡ್ತಿದ್ದೇವೆ ಎಂದಿದ್ದಾರೆ. ಸಚಿವ ಸುನೀಲ್ ಕುಮಾರ್, ಕಾಂಗ್ರೆಸ್ ಬೇಕಂತಲೇ ವಿವಾದ ಹುಟ್ಟು ಹಾಕುತ್ತಿದೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಟೆಕ್ ಸಮ್ಮಿಟ್ ಬೆಳ್ಳಿ ಹಬ್ಬ – ಉದ್ಘಾಟನೆಗೆ ಪ್ರಧಾನಿ ಆಹ್ವಾನ: ಅಶ್ವಥ್ ನಾರಾಯಣ
Advertisement
Advertisement
ಈ ಮಧ್ಯೆ, ಅಂಬೇಡ್ಕರ್ ಮುಂದೆ ಸಂವಿಧಾನ ಶಿಲ್ಪಿ ಎಂಬ ಪದನಾಮವನ್ನು ಮತ್ತೆ ಸೇರಿಸಲು ಮುಂದಾಗಿರೋದನ್ನು ಶಾಸಕ ಎಂ.ಪಿ.ಕುಮಾರಸ್ವಾಮಿ ಸ್ವಾಗತಿಸಿದ್ದಾರೆ. ಅತ್ತ ಕೊಪ್ಪಳದಲ್ಲಿ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಪಠ್ಯ ಪುಸ್ತಕ ವಿತರಣೆ ಆಗದಿದ್ರೂ, ಆಗಿದೆ ಎಂದು ನಮೂದು ಮಾಡುವಂತೆ ಶಿಕ್ಷಕರ ಮೇಲೆ ಮೇಲಾಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.