ಅನುದಿನ ಒಂದಿಲ್ಲೊಂದು ವಿಶೇಷ ಇದ್ದೇ ಇರುತ್ತದೆ. ಹುಟ್ಟುಹಬ್ಬ ಇಲ್ಲವೇ ವಾರ್ಷಿಕೋತ್ಸವ. ಮನೆಯಲ್ಲಿ ಸಣ್ಣ-ಪುಟ್ಟ ಫಂಕ್ಷನ್ ಇರೋವಾಗ ಏನಾದರೂ ಸಿಹಿ ಮಾಡಬೇಕಲ್ವಾ. ನಾವಿಂದು ಒಂದು ಸ್ಪೆಷಲ್ ಆದ ಸಿಹಿ ರೆಸಿಪಿಯನ್ನು ಹೇಳಿಕೊಡುತ್ತೇವೆ. ಸುಲಭದ ಮಲಾಯಿ ಲಡ್ಡು (Malai Laddu) ಒಮ್ಮೆ ನೀವೂ ಮಾಡಿ, ವಿಶೇಷ ದಿನಗಳನ್ನು ಆನಂದಿಸಿ.
Advertisement
ಬೇಕಾಗುವ ಪದಾರ್ಥಗಳು:
ಪನೀರ್ – 200 ಗ್ರಾಂ
ಕಂಡೆನ್ಸ್‌ಡ್ ಮಿಲ್ಕ್ – ಮುಕ್ಕಾಲು ಕಪ್
ಕುದಿಸಿದ ಹಾಲು – ಕಾಲು ಕಪ್
ಸಕ್ಕರೆ – 1 ಟೀಸ್ಪೂನ್
ತುಪ್ಪ – ಅಗತ್ಯಕ್ಕೆ ತಕ್ಕಂತೆ
ಏಲಕ್ಕಿ – 2
ರೋಸ್ ಎಸೆನ್ಸ್ – 2 ಹನಿ
ಕೇಸರಿ – ಕೆಲವು ಎಸಳು
ಕತ್ತರಿಸಿದ ಪಿಸ್ತಾ – ಅಲಂಕಾರಕ್ಕೆ ಇದನ್ನೂ ಓದಿ: ಅತಿಥಿಗಳು ಬಂದಾಗ ಫಟಾಫಟ್ ಅವಲಕ್ಕಿ ಲಾಡು ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಹಾಕಿ, ಅದರಲ್ಲಿ ಪನೀರ್ ಅನ್ನು ಸುಮಾರು 10-15 ನಿಮಿಷಗಳ ವರೆಗೆ ಇರಿಸಿ. ಇದರಿಂದ ಪನೀರ್ ಮೃದುವಾಗುತ್ತದೆ.
* ಬಳಿಕ ಪನೀರ್ ಅನ್ನು ನೀರಿನಿಂದ ತೆಗೆದು, ನಿಮ್ಮ ಬೆರಳುಗಳಿಂದ ಪುಡಿ ಮಾಡಿ.
* ಈಗ ಪನೀರ್ ಅನ್ನು ಮಿಕ್ಸರ್ ಜಾರ್‌ಗೆ ವರ್ಗಾಯಿಸಿ, ಅದಕ್ಕೆ ಕುದಿಸಿ ಆರಿಸಿದ ಹಾಲು, ಕಂಡೆನ್ಸ್‌ಡ್ ಮಿಲ್ಕ್, ಕೇಸರಿ, ಏಲಕ್ಕಿ, ಸಕ್ಕರೆ ಹಾಗೂ ರೋಸ್ ಎಸೆನ್ಸ್ ಅನ್ನು ಸೇರಿಸಿ ರುಬ್ಬಿಕೊಳ್ಳಿ.
* ಈಗ ಕಡಿದ ಮಿಶ್ರಣವನ್ನು ಒಂದು ಪ್ಯಾನ್‌ಗೆ ಹಾಕಿ ಕುದಿಸಿ.
* ಉರಿಯನ್ನು ಮಧ್ಯಮದಲ್ಲಿಟ್ಟು ಕೈಯಾಡಿಸುತ್ತಾ ದಪ್ಪವಾಗುವವರೆಗೆ ಬೇಯಿಸಿ.
* ಮಿಶ್ರಣ ಪ್ಯಾನ್ ಅನ್ನು ಬಿಟ್ಟು ಮುದ್ದೆಯಂತಾದಾಗ ಉರಿಯನ್ನು ಆಫ್ ಮಾಡಿ, ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ.
* ಮಿಶ್ರಣ ಸ್ವಲ್ಪ ತಣ್ಣಗಾದ ಬಳಿಕ ಕೈಗಳಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿ.
* ಪ್ರತಿ ಉಂಡೆಗಳಿಗೂ ಕತ್ತರಿಸಿದ ಪಿಸ್ತಾವನ್ನು ಇಟ್ಟು ಅಲಂಕರಿಸಿದರೆ ಮಲಾಯಿ ಲಡ್ಡು ತಯಾರಾಗುತ್ತದೆ.
* ಮಲಾಯಿ ಲಡ್ಡುಗಳನ್ನು ನೀವು ಬೇಕೆಂದರೆ 5-6 ದಿನಗಳ ವರೆಗೆ ಕೆಡದಂತೆ ಇಡಬಹುದು. ಇದನ್ನೂ ಓದಿ: ರುಚಿಯಾದ ರಾಗಿ ಪಾಯಸ ಮಾಡುವ ವಿಧಾನ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k