ಲಕ್ನೋ: ಪ್ರೀತಿಗೆ ಯಾವುದೇ ಗಡಿಯಿಲ್ಲ ಎನ್ನುತ್ತಾರೆ. ಅದೇ ರೀತಿ ಇತ್ತೀಚೆಗೆ ಸ್ವೀಡನ್ ಮಹಿಳೆಯೊಬ್ಬರು (Swedish Woman) ಉತ್ತರ ಪ್ರದೇಶದ (Uttar Pradesh) ಇಟಾಹ್ (Etah) ನಿವಾಸಿಯನ್ನು ವಿವಾಹವಾಗಿರುವುದು (Marriage) ಇದಕ್ಕೆ ಸಾಕ್ಷಿಯಾಗಿದೆ.
ಸ್ವೀಡನ್‍ನ ಕ್ರಿಸ್ಟನ್ ಲೀಬರ್ಟ್ ಅವರು ಇಟಾಹ್‍ನಲ್ಲಿರುವ ಶಾಲೆಯೊಂದರಲ್ಲಿ ಹಿಂದೂ ಪದ್ಧತಿಯಂತೆ ಪವನ್ ಕುಮಾರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
Advertisement
Advertisement
ಪವನ್ ಕುಮಾರ್ ಹಾಗೂ ಕ್ರಿಸ್ಟನ್ ಲೀಬರ್ಟ್ ಇಬ್ಬರು 2012ರಲ್ಲಿ ಫೇಸ್‍ಬುಕ್‍ನಲ್ಲಿ (Facebook) ಪರಿಚಯವಾಗಿದ್ದರು. ನಂತರ ಈ ಪರಿಚಯವೇ ಪ್ರೀತಿಗೆ ತಿರುಗಿತು. ಇದರಿಂದಾಗಿ ಇಬ್ಬರು ಮದುವೆಯಾಗಲು ನಿಶ್ಚಯಿಸಿದ್ದು, ಕ್ರಿಸ್ಟನ್ ಲೀಬರ್ಟ್ ಭಾರತಕ್ಕೆ ಬಂದಿದ್ದಾರೆ.
Advertisement
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಸ್ಟನ್ ಲೀಬರ್ಟ್ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಕ್ರಿಸ್ಟನ್ ಲೀಬರ್ಟ್ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದಾರೆ.
Advertisement
ಡೆಹ್ರಾಡೂನ್‍ನಲ್ಲಿ ಬಿ.ಟೆಕ್ ಮುಗಿಸಿರುವ ಪವನ್ ಕುಮಾರ್, ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಬೆಳ್ಳಿ, ಬಂಗಾರ ಪದಕ ಗೆದ್ದುಕೊಟ್ಟಿದ್ದ `ಮೈಸೂರು ಹುಲಿ-193′ ಖ್ಯಾತಿಯ ಕೊಬ್ಬರಿ ಹೋರಿ ಸಾವು
ಮದುವೆಗೆ ಅವರ ಮನೆಯವರು ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ. ಈ ಬಗ್ಗೆ ವರನ ತಂದೆ ಗೀತಮ್ ಸಿಂಗ್ ಮಾತನಾಡಿ, ಮಕ್ಕಳ ಸಂತೋಷದಲ್ಲೇ ತಮ್ಮ ಸಂತೋಷ ಅಡಗಿದೆ. ಈ ಮದುವೆಗೆ ನಾವು ಸಂಪೂರ್ಣವಾಗಿ ಒಪ್ಪಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ನ ಹತಾಶೆಯು ಅವರು ಬಳಸುವ ಭಾಷೆಯಲ್ಲಿ ವ್ಯಕ್ತವಾಗ್ತಿದೆ: ಬೊಮ್ಮಾಯಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k